ಬೆಂಗಳೂರು: ಇತ್ತೀಚಿಗಷ್ಟೆ ಮೆಗಾಸ್ಟಾರ್ ಕುಟುಂಬದಲ್ಲಿ ಮದುವೆ ಸಂಭ್ರಮ ಮನೆ ಮಾಡಿತ್ತು. ನಾಗಬಾಬು ಅವರ ಪುತ್ರಿ ನಿಹಾರಿಕಾ ಮದುವೆ ಡಿ.9 ರಂದು ರಾಜಸ್ಥಾನದ ಉದಯಪುರದಲ್ಲಿ ನಡೆದಿತ್ತು. ಇದೀಗ ಚಿರಂಜೀವಿಯವರ ಸೋದರಳಿಯ ಸಾಯಿ ಧರಮ್ ತೇಜ ಅವರ ಮದುವೆಗೆ ಸಿದ್ದತೆಗಳು ನಡೆಯುತ್ತಿದೆ ಎನ್ನಲಾಗಿದೆ.
ನಿಹಾರಿಕಾ ಕೊನಿದೇಲಾ ಮದುವೆ ಅದ್ದೂರಿಯಾಗಿ ನಡೆದಿದ್ದು, ಇಡೀ ಮೆಗಾ ಕುಟುಂಬ ಮದುವೆಯಲ್ಲಿ ಭಾಗವಹಿಸಿ ಭರ್ಜರಿಯಾಗಿ ಸಂಭ್ರಮಿಸಿತ್ತು. ಇದೀಗ ಮೆಗಾ ಫ್ಯಾಮಲಿಯ ಸಾಯಿ ಧರಮ್ ತೇಜ ರವರ ಮುದುವೆ ಸಂಭ್ರಮ ಶೀಘ್ರದಲ್ಲೇ ಮನೆ ಮಾಡಲಿದೆಯಂತೆ. ಇನ್ನೂ ಈ ಕುರಿತು ಮಾತನಾಡಿರುವ ಸಾಯಿ ಧರಮ್ ತೇಜ ನಿಹಾರಿಕ ಮದುವೆಯಾದ ಬಳಿಕ ನನ್ನ ಮದುವೆಗೆ ಮನೆಯಲ್ಲಿ ಒತ್ತಡಗಳು ಹೆಚ್ಚಾಗಿದೆ. ಮದುವೆ ಮಾಡಿಕೊ ಎಂದು ಕುಟುಂಬದ ಸದಸ್ಯರು ದಿನೇ ದಿನೇ ಒತ್ತಡ ಹೇರುತ್ತಿದ್ದಾರೆ. ಪ್ರಸ್ತುತ ನಾನು ಸಿಂಗಲ್, ನನ್ನ ಮುಂದಿನ ಸಿನೆಮಾ ಸೋಲೋ ಬ್ರತುಕೇ ಸೋ ಬೆಟರ್ ಎಂಬ ಯೋಚನೆಯಲ್ಲಿದ್ದೇನೆ. ಆದರೆ ನನ್ನ ಪ್ಯಾಮಿಲಿಯಲ್ಲಿ ಮದುವೆಗೆ ಸಿದ್ದತೆ ಮಾಡಿದ್ದಾರೆ ಎಂದಿದ್ದಾರೆ.
ಇನ್ನೂ ಸಾಯಿ ಧರಮ್ ತೇಜ ನಟನೆಯ ಸೋಲೋ ಬ್ರತುಕೆ ಸೋ ಬೆಟರ್ ಎಂಬ ಚಿತ್ರ ಇದೇ ಡಿ.25 ರಂದು ತೆರೆ ಮೇಲೆ ಬರಬಹುದಾಗಿದ್ದು, ಚಿತ್ರದಲ್ಲಿ ನಾಯಕಿಯಾಗಿ ನಭಾ ನಟೇಶ್ ನಟಿಸಲಿದ್ದಾರೆ. ಈ ಚಿತ್ರವನ್ನು ಸುಬ್ಬು ನಿರ್ದೇಶಿಸಿದ್ದು. ಶ್ರೀ ವೆಂಕಟೇಶ್ವರ ಸಿನಿ ಚಿತ್ರ ಬ್ಯಾನರ್ ನಡಿಯಲ್ಲಿ ಮೂಡಿಬರುತ್ತಿದೆ.
