Film News

ಉಪೇಂದ್ರ ಕಬ್ಜ ಚಿತ್ರದಲ್ಲಿ ಕನ್ನಡದ ಯುವನಟ!

ಬೆಂಗಳೂರು: ಉಪೇಂದ್ರ ಅಭಿನಯದ ಕಬ್ಜ ಚಿತ್ರದಲ್ಲಿ ರಾಜಕಾರಣಿ ಹೆಚ್.ಎಂ.ರೇವಣ್ಣ ರವರ ಪುತ್ರ ಯುವ ನಟ ಅನೂಪ್ ರೇವಣ್ಣ ಬಣ್ಣ ಹಚ್ಚಲಿದ್ದಾರೆ ಎಂಬ ಮಾಹಿತಿ ಬಹಿರಂಗವಾಗಿದೆ.

ನಿರ್ದೇಶಕ ಆರ್.ಚಂದ್ರ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಕಾಂಬಿನೇಷನ್‌ನಲ್ಲಿ ಸೆಟ್ಟೇರುತ್ತಿರುವ ಕಬ್ಜ ಚಿತ್ರ ಈಗಾಗಲೇ ಸಖತ್ ಹೈಪ್ ಪಡೆದುಕೊಂಡಿದೆ. ಚಿತ್ರದ ಪೋಸ್ಟರ್‌ಗಳ ಮೂಲಕವೇ ಸಿನಿರಸಿಕರಲ್ಲಿ ಕುತೂಹಲ ಮೂಡಿಸಿದ್ದಾರೆ. ಇನ್ನೂ ಈ ಚಿತ್ರದಲ್ಲಿ ಖಳನಾಯಕನಾಗಿ ಕಿಚ್ಚ ಸುದೀಪ್ ಭಾರ್ಗವ್ ಬಕ್ಷಿ ಎಂಬ ಪಾತ್ರದಲ್ಲಿ ನಟಿಸಲಿದ್ದು, ಇದೊಂದು ಪಕ್ಕ ಅಂಡರ್ವಲ್ಡ್ ಚಿತ್ರವಾಗಿದೆ.

ಇದೀಗ ಈ ಚಿತ್ರಕ್ಕೆ ಮತ್ತೋರ್ವ ಯುವನಟ ಸೇರ್ಪಡೆಯಾಗಿದ್ದಾರೆ. ರಾಜಕಾರಣಿ ಹೆಚ್.ಎಂ.ರೇವಣ್ಣ ರವರ ಪುತ್ರ ಯುವ ನಟ ಅನೂಪ್ ರೇವಣ್ಣ ಪ್ರಮುಖವಾದ ಪಾತ್ರವೊಂದರಲ್ಲಿ ನಟಿಸಲಿದ್ದು. ಈ ಪಾತ್ರದಿಂದ ಅನೂಪ್ ಇಮೇಜ್ ಹೆಚ್ಚಾಗಲಿದೆ. ಇನ್ನೂ ಕಬ್ಜ ಚಿತ್ರದಲ್ಲಿ ಅನೂಪ್ ರೇವಣ್ಣ ಪಾತ್ರವೇ ಮುಂದಿನ ದಿನಗಳಲ್ಲಿ ಹೊಸ ಚಿತ್ರವಾದರೂ ಆಶ್ಚರ್ಯವಿಲ್ಲ ಎಂದು ಹೇಳಿದ್ದಾರೆ ಆರ್.ಚಂದ್ರು.

ಇನ್ನೂ ಕಬ್ಜ ಚಿತ್ರದಲ್ಲಿ ಅನೇಕ ಸ್ಟಾರ್ ನಟರಿದ್ದು, ಒಬ್ಬೊಬ್ಬರ ಹೆಸರುಗಳನ್ನೇ ಬಹಿರಂಗ ಪಡಿಸಲಿದ್ದೇನೆ. ಜೊತೆಗೆ ಕಬ್ಜ ಚಿತ್ರ ಪಾನ್ ಇಂಡಿಯಾ ಸಿನೆಮಾ ಆಗಿರುವುದರಿಂದ ಇತರೆ ಸಿನಿರಂಗಗಳ ಕಲಾವಿದರು ಬಣ್ಣ ಹಚ್ಚಲಿದ್ದು, ಶೀಘ್ರದಲ್ಲಿಯೇ ಈ ಚಿತ್ರದ ನಾಯಕಿ ಯಾರೆಂದು ಸಹ ನಿಮಗೆ ತಿಳಿಸಲಿದ್ದೇನೆ ಎಂದಿದ್ದಾರೆ. ಈಗಾಗಲೇ ಕಬ್ಜ ಚಿತ್ರ ಶೇ.೪೫ ರಷ್ಟು ಚಿತ್ರೀಕರಣವನ್ನು ಮುಗಿಸಿದ್ದು, ಫೆ.೨೫ ರಿಂದ ಉಪೇಂದ್ರರವರ ಶೂಟಿಂಗ್ ಪ್ರಾರಂಭವಾಗಲಿದೆ ಎಂದು ತಿಳಿಸಿದ್ದಾರೆ

Trending

To Top