Film News

ಅಣ್ಣಾತೆ ಶೂಟಿಂಗ್ ಗೆ ಸಿದ್ದವಾದ ರಜನಿಕಾಂತ್!

ಚೆನೈ: ದೇಶದ ಸಿನಿರಂಗದ ಮೇರು ನಟರ ಪೈಕಿ ಒಬ್ಬರಾದ ಸೂಪರ್ ಸ್ಟಾರ್ ರಜನಿಕಾಂತ್ ಅಣ್ಣಾತೆ ಸಿನೆಮಾದಲ್ಲಿ ನಟಿಸುತ್ತಿದ್ದು, ಕಳೆದ ಡಿಸೆಂಬರ್ ಮಾಹೆಯಲ್ಲಿ ಅವರ ಆರೋಗ್ಯದಲ್ಲಿ ಏರುಪೇರಾದ ಕಾರಣ ಶೂಟಿಂಗ್ ಸ್ಥಗಿತಗೊಳಿಸಲಾಗಿತ್ತು. ಇದೀಗ ರಜನಿಕಾಂತ್ ಆರೋಗ್ಯ ಸುಧಾರಿಸಿದ ಹಿನ್ನೆಲೆಯಲ್ಲಿ ಶೂಟಿಂಗ್ ಕೆಲಸಗಳು ಪ್ರಾರಂಭವಾಗಲಿದೆ ಎನ್ನಲಾಗಿದೆ.

ಈಗಾಗಲೇ ಅಣ್ಣಾತೆ ಸಿನೆಮಾ ನವೆಂಬರ್ ೪ರಂದು ದೀಪಾವಳಿ ಹಬ್ಬದಂದು ಬಿಡುಗಡೆಯಾಗಲಿದೆ. ಈ ಕುರಿತು ಚಿತ್ರತಂಡ ಅಧಿಕೃತವಾಗಿ ಘೋಷಣೆ ಸಹ ಮಾಡಿದ್ದು, ನಿರ್ದೇಶಕ ಸಿರುಥೈ ಶಿವ ರಜನಿಕಾಂತ್ ರನ್ನು ಭೇಟಿಯಾಗಿ ಶೂಟಿಂಗ್ ಪ್ರಾರಂಭಿಸುವ ಬಗ್ಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಮೂಲಗಳ ಪ್ರಕಾರ ಮಾರ್ಚ್ ೧೫ ರ ಬಳಿಕ ಅಣ್ಣಾತೆ ಸಿನೆಮಾ ಶೂಟಿಂಗ್ ಕೆಲಸಗಳು ಪ್ರಾರಂಭವಾಗಲಿದೆಯಂತೆ.

ಕಳೆದ ವರ್ಷ ಡಿಸೆಂಬರ್ ನಲ್ಲಿ ಹೈದರಾಬಾದ್‌ನಲ್ಲಿ ಅಣ್ಣಾತೆ ಸಿನೆಮಾ ಶೂಟಿಂಗ್  ಭರದಿಂದ ಸಾಗುತ್ತಿತ್ತು. ಈ ವೇಳೆ ಶೂಟಿಂಗ್ ಸೆಟ್‌ನಲ್ಲಿನ ಕೆಲವರಿಗೆ ಕೊರೋನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಹಾಗೂ ರಜನಿಕಾಂತ್ ರವರ ಆರೋಗ್ಯದಲ್ಲಿ ಏರುಪೇರಾದ ಕಾರಣದಿಂದ ಶೂಟಿಂಗ್ ಸ್ಥಗಿತಗೊಂಡಿತ್ತು. ನಂತರ ವೈದ್ಯರು ಸಹ ರಜನಿ ಯವರಿಗೆ ವಿಶ್ರಾಂತಿ ಪಡೆಯಲು ಸೂಚನೆ ನೀಡಿದ್ದರು.

ಇನ್ನೂ ಈ ಚಿತ್ರದಲ್ಲಿ ಸ್ಟಾರ್ ಕಲಾವಿದರ ತಂಡವೇ ಇದೆ. ಹಿರಿಯ ನಟರಾದ ಮೀನಾ, ಖುಷ್ಬು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದು, ನಯನತಾರಾ ಹಾಗೂ ಕೀರ್ತಿ ಸುರೇಶ್ ಸಹ ಕಾಣಿಸಿಕೊಳ್ಳಲಿದ್ದಾರೆ. ಇನ್ನೂ ಈ ಚಿತ್ರದ ಶೂಟಿಂಗ್ ಗಾಗಿ ದೊಡ್ಡ ಸೆಟ್ ವೊಂದನ್ನು ನಿರ್ಮಾಣ ಮಾಡುತ್ತಿದ್ದಾರೆ.

Trending

To Top