News

(video)KGF ಚಿತ್ರದಲ್ಲಿ ಎಲ್ಲರ ಮನ ಗೆದ್ದ ಪುಟ್ಟ ಹುಡುಗ ಈಗ ಫುಲ್ ಫೇಮಸ್! ಅವನ ಎಸ್ಕ್ಲ್ಯೂಸಿವ್ ಸಂದರ್ಶನ ನೋಡಿ ಶೇರ್ ಮಾಡಿ

anmol-kgf

KGF ಚಿತ್ರ ಬಿಡುಗಡೆ ಆಗಿ ಇಡೀ ದೇಶದಲ್ಲಿ ಭರ್ಜರಿ ಆಗಿ ಪ್ರದರ್ಶನ ಕಾಣುತ್ತಿದೆ. KGF ಚಿತ್ರವನ್ನು ಇಡೀ ಭಾರತ ಜನ ಒಪ್ಪಿಕೊಂಡಿದ್ದಾರೆ. KGF ಚಿತ್ರದಲ್ಲಿ ಯಶ್ ಅವರು ಅಂದರೆ ರಾಕಿ bhai ಸಣ್ಣ ವಯಸ್ಸಿನಲ್ಲಿ ಹೇಗಿದ್ದ ಅನ್ನೋ ಪಾತ್ರವನ್ನು ಈ ಪುಟ್ಟ ಹುಡುಗ ಮಾಡಿದ್ದಾನೆ. ಇವನ ಹೆಸರು ಅನ್ಮೋಲ್, ಇವನಿಗೆ KGF ಚಿತ್ರದಲ್ಲಿ ಅವಕಾಶ ಹೇಗೆ ಸಿಕ್ಕಿತು? KGF ಚಿತ್ರದಲ್ಲಿ ಇವನ ಅನುಭವ ಹೇಗಿತ್ತು? ನಿರ್ದೇಶಕ ಪ್ರಶಾಂತ್ ನೀಲ್ ಹಾಗು ರಾಕಿಂಗ್ ಸ್ಟಾರ್ ಯಶ್ ಜೊತೆ ಅನುಭವ ಹೇಗಿತ್ತು ಅಂತ ಹಂಚಿಕೊಂಡಿದ್ದಾನೆ. ಇದಲ್ಲದೆ ಅನ್ಮೋಲ್ ಅವರು ಚಿತ್ರದ ಬಗ್ಗೆ ಹಾಗು ತಮ್ಮ ಜೀವನದ ಬಗ್ಗೆ ಮಾತಾಡಿದ್ದಾರೆ. ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ
KGF ಚಿತ್ರದ ಟ್ರೇಲರ್ ನಲ್ಲಿ ಬರುವ ಒಂದು ಡೈಲಾಗ್ “kya chahiye tumko ” ಅದಕ್ಕೆ ಒಬ್ಬ ಪುಟ್ಟ ಹುಡುಗಡೆ ಹೇಳುತ್ತಾನೆ “ದುನಿಯಾ” ಅಂತ. ಈ ಒಂದೇ ಒಂದು ಡೈಲಾಗ್ ಇಡೀ ದೇಶದ ಜನ ಕನ್ನಡ ಚಿತ್ರ ರಂಗದ ಕಡೆ ತಿರುಗಿ ನೋಡುವಂತೆ ಮಾಡಿದೆ. ನಿಮಗೆಲ್ಲ ಗೊತ್ತಿರೋ ಹಾಗೆ ಆ ಪುಟ್ಟ ಹುಡುಗ ಮುಂದೆ KGF ಚಿತ್ರದಲ್ಲಿ ರಾಕಿ ಅಂದರೆ ಯಶ್ ಆಗುತ್ತಾನೆ. KGF ಚಿತ್ರದ ಟ್ರೇಲರ್ ಬಿಡುಗಡೆ ಆದಾಗ ರಾಕಿಂಗ್ ಸ್ಟಾರ್ ಯಶ್ ಅವರ ಜೊತೆ ಬಹಳ ಫೇಮಸ್ ಆದ ಮತ್ತೊಬ್ಬ ನಟ ಅಂದರೆ ಈ ಪುಟ್ಟ ಹುಡುಗ.
ಈ ಪುಟ್ಟ ಹುಡುಗ ಯಾರು ಎಂಬ ಕುತೂಹಲ ಎಲ್ಲರಲ್ಲೂ ಇದೆ. ಆದರೆ KGF ಚಿತ್ರ ತಂಡ ಮಾತ್ರ ಈ ಹುಡುಗನ ಬಗ್ಗೆ ಯಾವುದೇ ಮಾಹಿತಿಯನ್ನು ಬಿಟ್ಟು ಕೊಟ್ಟಿರಲಿಲ್ಲ. ಆದರೆ ನಾವು ಈ ಪುಟ್ಟ ಹುಡುಗನ ಎಲ್ಲಾ ಡೀಟೇಲ್ಸ್ ಹುಡುಕಿದ್ದೇವೆ. ಈ ಪುಟ್ಟ ಹುಡುಗನ ಹೆಸರು Anmol Vijay Bhatkal ಅಂತ. KGF ಚಿತ್ರದಲ್ಲಿ anmol 14 ವರ್ಷದ ಪಾತ್ರವನ್ನು ಮಾಡಿದ್ದಾನೆ. anmol ವಿಜಯ್ ಸದ್ಯ 9 ಕ್ಲಾಸ್ ನಲ್ಲಿ ಓಡುತಿದ್ದಾನೆ. ಕಳೆದ 9 ವರ್ಷಗಳಿಂದ ಈ ಪುಟ್ಟ ಹುಡುಗ ಡಾನ್ಸ್ ಪ್ರಾಕ್ಟೀಸ್ ಮಾಡಿ ಅದಾದ ನಂತರ ಸುಮಾರು ಒಂದು ತಿಂಗಳ ಕಾಲ KGF ಚಿತ್ರದ ಶೂಟಿಂಗ್ ಸೆಟ್ ನಲ್ಲಿ ಇದ್ದನಂತೆ. ಪ್ರಶಾಂತ್ ನೀಲ್ ಅವರು ಇವನ ಟ್ಯಾಲೆಂಟ್ ನೋಡಿ ಇವನಿಗೆ ಯಶ್ ಚಿಕ್ಕ ವಯಸ್ಸಿನ ಪಾತ್ರವನ್ನು ಕೊಟ್ಟಿದ್ದಾರೆ.
Anmol Vijay ಭಟ್ಕಳ್ ಹೇಳುವ ಪ್ರಕಾರ “ನನಗೆ ಆಕ್ಟಿಂಗ್ ಅಂದರೆ ತುಂಬಾನೇ ಇಷ್ಟ, ಅಷ್ಟೇ ಅಲ್ಲದೆ ನನ್ನ ಶಾಲೆಯ ಚಾಮರಾಜ ಮೇಷ್ಟ್ರು ನನಗೆ ಒಂದು ತಿಂಗಳು KGF ಗಾಗಿ ರಾಜ ಕೂಡ ಕೊಟ್ಟು ಬಹಳ ಪ್ರೋತ್ಸಾಹ ನೀಡಿದರು” . ” ನನಗೆ KGF ಟ್ರೇಲರ್ ನಲ್ಲಿ ನನ್ನ ನಟನೆ ನೋಡಿ ಬಹಳ ಖುಷಿ ಆಗಿದೆ” ಎಂದು ಹೇಳಿದ್ದಾನೆ. ಇದಕ್ಕಿಂತ ಹೆಚ್ಚು ಮಾಹಿತಿಯನ್ನು ಹೇಳಬಾರದು ಎಂದು ನಿರ್ದೇಶಕರಾದ ಪ್ರಶಾಂತ್ ನೀಲ್ ಅವರು ಹೇಳಿದ್ದಾರೆ ಎಂದು ಈ ಪುಟ್ಟ ಹುಡುಗ ಹೇಳಿದ್ದಾನೆ.
ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ನಮಗೆ ತಿಳಿಸಿರಿ.

Trending

To Top