Kannada Serials

‘ಜೊತೆ ಜೊತೆಯಲಿ’ ಆರ್ಯವರ್ಧನ್ ಒಂದು ದಿನದ ಸಂಭಾವನೆ ಕೇಳಿದ್ರೆ ನಿಜಕ್ಕೂ ಊಹಿಸಲು ಅಸಾಧ್ಯ!

ಕನ್ನಡ ಕಿರುತೆರೆಯ ಇತಿಹಾಸದಲ್ಲಿ ಹೊಸದಾದ ಸಂಚಲನ ಮೂಡಿಸಿದ ಧಾರಾವಾಹಿ ಜೋತೆ ಜೊತೆಯಲಿ. ಹೊಸ ರೀತಿಯ ಮೇಕಿಂಗ್, ನಟ ಅನಿರುದ್ಧ, ಹೊಸ ಕಲಾವಿದೆ ಮೇಘಾ ಶೆಟ್ಟಿ, ಇನ್ನಿತರ ಗೌರವಾನ್ವಿತ ಕಲಾವಿದರ ದಂಡೇ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಇದೆ. ಉಳಿದೆಲ್ಲ ಪಾತ್ರಕ್ಕಿಂತಲು ವೀಕ್ಷಕರನ್ನು ಹೆಚ್ಚು ಆಕರ್ಷಿಸಿದ್ದು ಆರ್ಯವರ್ಧನ್ ಮತ್ತು ಅನು ಸಿರಿಮನೆ ಪಾತ್ರಗಳು. ಆರ್ಯವರ್ಧನ್ ರ ಜಾಣ್ಮೆ, ಸರಳತೆ, ಗಾಂಭೀರ್ಯ ಅನು ಸಿರಿಮನೆಯ ಮುಗ್ಧತೆ ಇವೆಲ್ಲವೂ ಸಹ ವೀಕ್ಷಕರಿಗೆ ಬಹಳ ಇಷ್ಟವಾಯಿತು.

ಅದರಲ್ಲೂ ವರ್ಧನ್ ಗ್ರೂಪ್ ಆಫ್ ಕಂಪನಿಸ್ ನ ಸಂಸ್ಥಾಪಕ ಆರ್ಯವರ್ಧನ್ ಪಾತ್ರ ಹಿರಿಯರಿಂದ ಕಿರಿಯರವರೆಗೂ ಎಲ್ಲರ ಮೆಚ್ಚುಗೆ ಪಡೆದಿದೆ. ಪಾತ್ರಕ್ಕೆ ಮತ್ತು ವ’ಯಸ್ಸಿಗೆ ತಕ್ಕಂತೆ ಇರುವ ಅನಿರುದ್ಧ್ ಅವರ ನಟನೆಯಲ್ಲಿ ಗಾಂಭೀರ್ಯತೆ, ಪ್ರಬುದ್ಧತೆ ಮ್ಯಾನರಿಸಮ್ ಇವೆಲ್ಲವೂ ಸಹ ಎಲ್ಲರಿಗೂ ಮೆಚ್ಚುಗೆಯಾಗಿದೆ. ಅದರಲ್ಲೂ ಹೆಣ್ಣುಮಕ್ಕಳಿಗೆ ತಾವು ಇಷ್ಟ ಪಡುವ ಹುಡುವ ಅಥವಾ ಮದುವೆ ಆಗಬಯಸುವ ಹುಡುಗ ಆರ್ಯವರ್ಧನ್ ರಂತೆ ಇರಬೇಕು ಎಂದು ಹೇಳುವಷ್ಟರ ಮಟ್ಟಿಗೆ ಜನಪ್ರಿಯತೆ ಪಡೆದಿದೆ ಆರ್ಯವರ್ಧನ್ ಪಾತ್ರ. ಆರ್ಯವರ್ಧನ್ ರ ಸಾಲ್ಟ್ ಆಂಡ್ ಪೆಪ್ಪರ್ ಲುಕ್ ಹೊಸ ಟ್ರೆಂಡ್ ಅನ್ನೇ ಸೃಷ್ಟಿಸಿದೆ.

ಹಿರಿತೆರೆಯಿಂದ ಕಿರುತೆರೆಗೆ ಬಂದ ನಂತರ, ಹಿಂದೆಂದಿಗಿಂತಲೂ ಸಿಗದಷ್ಟು ಯಶಸ್ಸು ಅನಿರುದ್ಧ್ ಅವರಿಗೆ ಜೊತೆ ಜೊತೆಯಲಿ ಧಾರಾವಾಹಿ ಮೂಲಕ ಸಿಕ್ಕಿದೆ. ನಟ ಅನಿರುದ್ಧ್ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ನಟಿಸಲು ದಿನಕ್ಕೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ…? ಆರ್ಯವರ್ಧನ್ ಪಾತ್ರದಲ್ಲಿ ನಟಿಸಲು ನಟ ಅನಿರುದ್ಧ್ ಒಂದು ದಿನಕ್ಕೆ ಪಡೆಯುವ ಸಂಭಾವನೆ ಬರೋಬ್ಬರಿ 35,000 ರೂಪಾಯಿಗಳು. ಕಿರುತೆರೆಯಲ್ಲಿ ಯಶಸ್ಸು ಗಳಿಸಿದ ನಂತರ ನಟ ಅನಿರುದ್ಧ್ ಅವರಿಗೆ ಸಿನಿಮಾಗಳಲ್ಲೂ ಸಹ ಸಾಕಷ್ಟು ಅವಕಾಶಗಳು ಸಿಗುತ್ತಿವೆ. ಆದರೆ ಅವರ ಕಾಲ್ ಶೀಟ್ ಬಿಡುವಿಲ್ಲದಷ್ಟು ಬ್ಯುಸಿಯಾಗಿದ್ದಾರೆ.ಕನ್ನಡ ಕಿರುತೆರೆಯ ಇತಿಹಾಸದಲ್ಲಿ ಹೊಸದಾದ ಸಂಚಲನ ಮೂಡಿಸಿದ ಧಾರಾವಾಹಿ ಜೋತೆ ಜೊತೆಯಲಿ. ಹೊಸ ರೀತಿಯ ಮೇಕಿಂಗ್, ನಟ ಅನಿರುದ್ಧ, ಹೊಸ ಕಲಾವಿದೆ ಮೇಘಾ ಶೆಟ್ಟಿ, ಇನ್ನಿತರ ಗೌರವಾನ್ವಿತ ಕಲಾವಿದರ ದಂಡೇ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಇದೆ. ಉಳಿದೆಲ್ಲ ಪಾತ್ರಕ್ಕಿಂತಲು ವೀಕ್ಷಕರನ್ನು ಹೆಚ್ಚು ಆಕರ್ಷಿಸಿದ್ದು ಆರ್ಯವರ್ಧನ್ ಮತ್ತು ಅನು ಸಿರಿಮನೆ ಪಾತ್ರಗಳು. ಆರ್ಯವರ್ಧನ್ ರ ಜಾಣ್ಮೆ, ಸರಳತೆ, ಗಾಂಭೀರ್ಯ ಅನು ಸಿರಿಮನೆಯ ಮುಗ್ಧತೆ ಇವೆಲ್ಲವೂ ಸಹ ವೀಕ್ಷಕರಿಗೆ ಬಹಳ ಇಷ್ಟವಾಯಿತು.

Trending

To Top