Kannada Serials

ಪತ್ನಿಯ ಹುಟ್ಟು ಹಬ್ಬಕ್ಕೆ ಭಾವನಾತ್ಮಕ ಪತ್ರ ಬರೆದ ಜೊತೆಜೊತೆಯಲಿ ಅನಿರುಧ್! ಪತ್ರದಲ್ಲಿ ಏನಿದೆ ನೋಡಿ

ನಮ್ಮ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಅಳಿಯ ಅನಿರುಧ್ ಅವರು ಸದ್ಯ ತಮ್ಮ ಕನ್ನಡದ ಟಾಪ್ ದಾರಾವಾಹಿಯಾದ ಜೊತೆಜೊತೆಯಲಿ ಧಾರಾವಾಹಿ ಯಲ್ಲಿ ಬಹಳ ಬ್ಯುಸಿ ಆಗಿದ್ದಾರೆ. ಅನಿರುಧ್ ಅವರ ಕರಿಯರ್ ನಲ್ಲಿ ಜೊತೆಜೊತೆಯಲಿ ಎರಡನೇ ಇನ್ನಿಂಗ್ಸ್ ಎಂದರೆ ತಪ್ಪಾಗಲಾರದು. ನೆನ್ನೆ ಅನಿರುಧ್ ಅವರ ಮಡದಿ ಆದ ಕೀರ್ತಿ ಅವರ ಹುಟ್ಟು ಹಬ್ಬ. ಈ ಸಮಯದಲ್ಲಿ ಅನಿರುಧ್ ಅವರು ತಮ್ಮ ಮಡದಿ ಕೀರ್ತಿ ಅವರಿಗೆ ಒಂದು ಭಾವನಾತ್ಮಕ ಪತ್ರವನ್ನು ಬರೆದಿದ್ದಾರೆ. ಅನಿರುಧ್ ಅವರು ತಮ್ಮ ಮಡದಿಗೆ ಬರೆದಿರುವ ಪತ್ರದಲ್ಲಿ ಏನಿದೆ ಗೊತ್ತಾ! ಮುಂದೆ ಓದಿರಿ

ಹೌದು, ಕೀರ್ತಿ ಅವರ ಹುಟ್ಟು ಹಬ್ಬಕ್ಕೆ ಅನಿರುಧ್ ಅವರು ಪತ್ರ ಹೀಗಿದೆ “ಇಂದು ನೀವು ಹುಟ್ಟಿದ ದಿನ.. ನನಗಾಗಿ ಹುಟ್ಟಿದ ದಿನವೇ ಇರಬೇಕು…. ಬಹಳಷ್ಟು ಬಾರಿ ಹೇಳಿರುವೆನು.. ಮತ್ತಷ್ಟು‌ ಬಾರಿ ಹೇಳುವೆನು.. ಮುಂದೆಯೂ ಹೇಳುತ್ತಲೇ ಇರುವೆನು.. ನನ್ನ ಜೀವನದ ಅತ್ಯಮೂಲ್ಯಗಳಲ್ಲಿ ಒಬ್ಬರು ನೀವು.. ಸದಾ ಜೊತೆಯಾಗಿ ನಿಂತಿರುವಿರಿ.. ನಾ ಸಾಗುವಾಗ ಪ್ರತಿ ಹೆಜ್ಜೆಯಲ್ಲಿಯೂ ನೀವಿರುವಿರಿ.. ನಿಮ್ಮ ಕಾಳಜಿ.. ನಿಮ್ಮ ಪ್ರೀತಿ.. ನಿಮ್ಮ ಮಮತೆ.. ನಿಮ್ಮ ……… ಹೇಳಲು ಪದಗಳು ಸಾಲದೆನಗೆ.. ಕೆಲವೊಮ್ಮೆ ಮೂಕನಾಗುವ ಅನುಭವ ನಿಮ್ಮ ಬಗ್ಗೆ ಮಾತನಾಡುವಾಗ ನನಗಾಗುವುದು.. ನನ್ನ ಆತ್ಮವೇ ನೀವಾಗಿರುವಿರಿ.. ನನ್ನ ಜೀವನಕ್ಕೆ ಇಂತಹ ಅತ್ಯಮೂಲ್ಯವಾದ ಉಡುಗೊರೆ ನೀಡಿದ ಅಪ್ಪಾವ್ರಿಗೆ.. ಅಮ್ಮನಿಗೆ ನಾನೆಂದೂ ಸದಾ ಚಿರಋಣಿಯಾಗಿರುವೆನು.. ನನ್ನ ಬಾಳಿನ ದೇವತೆಯೂ ನೀವು.. ನನ್ನೊಳಗಿನ ಆತ್ಮವೂ ನೀವು.. ಮತ್ತೇನನು ಹೇಳಲಾಗದು.. ನನ್ನ ಪ್ರತಿ ಪ್ರಾರ್ಥನೆಯ ಪ್ರಮುಖ ಭಾಗವೂ ನೀವೆ ಆಗಿರುವಿರಿ.. ನಿಮ್ಮ ವ್ಯಕ್ತಿತ್ವ ನನಗೆಂದೂ ಸದಾ ಸ್ಪೂರ್ತಿಯೇ ಆಗಿದೆ.. ನೂರ್ಕಾಲ ಸದಾ ಸಂತೋಷವಾಗಿ ಬಾಳಿ.. ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.. #Keerthiji.. ನಿಮ್ಮ #ಅನಿರುಧ್” ಎಂದು ಬರೆದಿದ್ದಾರೆ.

ನಮ್ಮ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಅಳಿಯರಾದ ಅನಿರುಧ್ ಅವರು ಸದ್ಯ ತಮ್ಮ ಫೇಮಸ್ ದಾರಾವಾಹಿಯಾದ ಜೊತೆಜೊತೆಯಲಿ ಚಿತ್ರೀಕರಣದಲ್ಲಿ ಬಹಳ ಬ್ಯುಸಿ ಆಗಿದ್ದರು. ಅದಲ್ಲದೆ ಲಾಕ್ ಡೌನ್ ತೆಗೆದ ನಂತರ, ಧಾರಾವಾಹಿಯ ಚಿತ್ರೀಕರಣಕ್ಕೆ ಅವಕಾಶ ಕೊಟ್ಟ ಮೇಲೆ, ಬಾಕಿ ಇದ್ದ ಎಲ್ಲಾ ಚಿತ್ರೀಕರಣ ಮಾಡಿ ಮುಗುಸಿದ್ದಾರೆ ನಮ್ಮ ಅನಿರುಧ್. ಮೊನ್ನೆ ಅಷ್ಟೇ ಜೊತೆಜೊತೆಯಲಿ ಧಾರಾವಾಹಿಯ ತಂಡದ ಜೊತೆ, ಗಣೇಶ ಹಬ್ಬವನ್ನು ಅದ್ದೂರಿಯಾಗಿ ಆಚರಿಸಿ, ನೆನ್ನೆ ತಮ್ಮ ಕುಟುಂಬದ ಸಮೇತ ಅನಿರುಧ್ ಅವರು ಚಿಕ್ಕಮಗಳೂರಿನ ಕಡೆ ಹೊರಟಿದ್ದಾರೆ. ಸದ್ಯ ಇವರ ಪ್ರವಾಸದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಹೌದು! ನೆನ್ನೆ ನಮ್ಮ ಅನಿರುಧ್ ಅವರು ತಮ್ಮ ಪತ್ನಿ, ಹಾಗು ಮಕ್ಕಳ ಜೊತೆ ಚಿಕ್ಕಮಗಳೂರಿಗೆ ತಮ್ಮ ಕಾರಿನಲ್ಲಿ ಪ್ರವಾಸಕ್ಕೆ ಹೋಗಿದ್ದಾರೆ. ಚಿಕ್ಕಮಗಳೂರಿನ ಮುತ್ತೋಡಿ ಕಾಡಿನ ಸಮೀಪ ಇರುವ ರೆಸಾರ್ಟ್ ನಲ್ಲಿ ಅನಿರುಧ್ ಅವರ ಕುಟುಂಬ ವಾಸವಿದ್ದಾರೆ ಎಂದು ತಿಳಿದು ಬಂದಿದೆ. ನೆನ್ನೆ ಯಿಂದ ಅನಿರುಧ್ ಕುಟುಂಬದವರು, ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ, ಬಾಬಾ ಬುಡನ್ ಗಿರಿ ಸೇರಿದಂತೆ ಹಲವಾರು ಅದ್ಭುತ ಸ್ಥಳಗಳನ್ನು ಭೇಟಿ ಮಾಡಿ ಮಲೆನಾಡಿನ ಸೌಂದರ್ಯವನ್ನು ಸವಿದಿದ್ದಾರೆ. ಬಲ್ಲ ಮೂಲಗಳ ಪ್ರಕಾರ ಅನಿರುಧ್ ಅವರ ಪತ್ನಿ , ಮಕ್ಕಳ ಜೊತೆ, ಭರತನ್ ಅಮ್ಮನವರು ಕೂಡ ಪ್ರವಾಸಕ್ಕೆ ಹೋಗಬೇಕಿತ್ತು. ಆದರೆ ಈ ಕರೋನದ ಕಾರಣದಿಂದ ಭಾರತಿ ಅವರು ಇವರ ಜೊತೆ ಪ್ರವಾಸಕ್ಕೆ ಹೋಗಲಿಲ್ಲ. ಬಲ್ಲ ಮೂಲಗಳ ಪ್ರಕಾರ ಅನಿರುಧ್ ಅವರು ಸುಮಾರು 5 ದಿನಗಳ ಕಾಲ ಧಾರಾವಾಹಿ ಕೆಲಸಗಳಿಂದ ಬ್ರೇಕ್ ತೆಗೆದು ಕೊಂಡಿದ್ದಾರೆ. ಇವರ ಭಾಗದ ಕೆಲಸಗಳನ್ನು ಮುಗಿಸಿ, ಕುಟುಂಬದ ಸಮೇತ ಅನಿರುಧ್ ಅವರು ಚಿಕ್ಕಮಗಳೂರಿಗೆ ಹೋಗಿದ್ದಾರೆ. ಇದೇ ಶುಕ್ರವಾರದಂದು ಅನಿರುಧ್ ಅವರು ಬೆಂಗಳೂರಿಗೆ ವಾಪಾಸ್ ಆಗಲಿದ್ದಾರೆ ಎಂದು ತಿಳಿದು ಬಂದಿದೆ.

Trending

To Top