Film News

ವಿಷ್ಣುವರ್ಧನ್ ಪ್ರತಿಮೆ ಧ್ವಂಸ ಮಾಡಿದವರನ್ನು ಶಿಕ್ಷಿಸಿ: ಅನಿರುದ್ದ್

ಬೆಂಗಳೂರು: ಮಾಗಡಿ ರಸ್ತೆಯಲ್ಲಿರುವ ಕನ್ನಡದ ಮೇರು ನಟ ವಿಷ್ಣುವರ್ಧನ್ ರವರ ಪ್ರತಿಮೆ ಧ್ವಂಸ ಮಾಡಿದ ಕಿಡಿಗೇಡಿಗಳನ್ನು ಶಿಕ್ಷಿಸಿ ಎಂದು ನಟ ಅನಿರುದ್ದ್ ರವರು ಆಗ್ರಹಿಸಿದ್ದಾರೆ.

ಇನ್ನೂ ಇತ್ತೀಚಿಗಷ್ಟೆ ತೆಲುಗು ನಟನೋರ್ವ ವಿಷ್ಣುರವರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಕ್ಕಾಗಿ ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡು, ನಂತರ ಅವರ ಬಳಿ ಕ್ಷಮಾಪಣೆ ಬರುವವರೆಗೂ ಬಿಡಲಿಲ್ಲ ಕನ್ನಡದ ನಟರು ಹಾಗೂ ವಿಷ್ಣು ಅಭಿಮಾನಿಗಳು. ಇದೀಗ ವಿಷ್ಣುವರ್ಧನ್ ರವರ ಪ್ರತಿಮೆಯನ್ನು ಧ್ವಂಸ ಮಾಡಿ ವಿಷ್ಣುರವರಿಗೆ ಅವಮಾನ ಆಗುವಂತೆ ಮಾಡಿದ್ದಾರೆ.

ಇನ್ನೂ ವಿಷ್ಣುವರ್ಧನ್ ಅವರ ಬಗ್ಗೆ ಅಪಾರ ಗೌರವ, ಪ್ರೀತಿ ಹೊಂದಿರುವ ಅನಿರುದ್ದ್ ರವರು, ವಿಷ್ಣು ಪ್ರತಿಮೆ ದ್ವಂಸ ಮಾಡಿದ ಘಟನೆಯನ್ನು ಖಂಡಿಸಿ ಬೇಸರ ವ್ಯಕ್ತಪಡಿಸಿದ್ದಾರೆ. ಜೊತೆಗೆ ಕೂಡಲೇ ಕಿಡಿಗೇಡಿಗಳನ್ನು ಬಂಧಿಸಿ ಕಾನೂನು ರೀತ್ಯ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಮಾಗಡಿ ರಸ್ತೆಯ ಟೋಲ್ ಗೇಟ್ ಬಳಿ ವಿಷ್ಣು ಪ್ರತಿಮೆ ಧ್ವಂಸ ಮಾಡಿದ ಕಿಡಿಗೇಡಿಗಳನ್ನು ಬಂಧಿಸುವಂತೆ ವಿಷ್ಣು ಅಭಿಮಾನಿಗಳು ಪ್ರತಿಭಟನೆ ಸಹ ನಡೆಸಿದರು. ಇನ್ನೂ ಸಚಿವ ಸೋಮಣ್ಣ ರವರು ಕ್ಷಮೆ ಸಹ ಕೋರಿದ್ದು, ಬೇರೆ ಜಾಗದಲ್ಲಿ ವಿಷ್ಣು ರವರ ಪ್ರತಿಮೆ ನಿರ್ಮಾಣ ಮಾಡೋಣ ಎಂದು ಸಹ ಭರವಸೆ ನೀಡಿದ್ದಾರೆ. ಈಗಾಗಲೇ ಸಚಿವ ಸೋಮಣ್ಣ ಪ್ರತಿಭಟನಕಾರರೊಂದಿಗೆ ನಡೆಸಿದ ಸಂದಾನ ಸಭೆ ಸಹ ಯಶಸ್ವಿಯಾಗಿದೆ ಎಂದು ತಿಳಿದು ಬಂದಿದೆ.

Trending

To Top