Kannada Serials

ಕುಟುಂಬದ ಜೊತೆ ಚಿಕ್ಕಮಗಳೂರಿಗೆ ಪ್ರವಾಸಕ್ಕೆ ಹೋದ ಜೊತೆಜೊತೆಯಲಿ ಅನಿರುಧ್ ಕುಟುಂಬ! ಸುಂದರ ಕ್ಷಣಗಳನ್ನು ನೋಡಿ

ನಮ್ಮ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಅಳಿಯರಾದ ಅನಿರುಧ್ ಅವರು ಸದ್ಯ ತಮ್ಮ ಫೇಮಸ್ ದಾರಾವಾಹಿಯಾದ ಜೊತೆಜೊತೆಯಲಿ ಚಿತ್ರೀಕರಣದಲ್ಲಿ ಬಹಳ ಬ್ಯುಸಿ ಆಗಿದ್ದರು. ಅದಲ್ಲದೆ ಲಾಕ್ ಡೌನ್ ತೆಗೆದ ನಂತರ, ಧಾರಾವಾಹಿಯ ಚಿತ್ರೀಕರಣಕ್ಕೆ ಅವಕಾಶ ಕೊಟ್ಟ ಮೇಲೆ, ಬಾಕಿ ಇದ್ದ ಎಲ್ಲಾ ಚಿತ್ರೀಕರಣ ಮಾಡಿ ಮುಗುಸಿದ್ದಾರೆ ನಮ್ಮ ಅನಿರುಧ್. ಮೊನ್ನೆ ಅಷ್ಟೇ ಜೊತೆಜೊತೆಯಲಿ ಧಾರಾವಾಹಿಯ ತಂಡದ ಜೊತೆ, ಗಣೇಶ ಹಬ್ಬವನ್ನು ಅದ್ದೂರಿಯಾಗಿ ಆಚರಿಸಿ, ನೆನ್ನೆ ತಮ್ಮ ಕುಟುಂಬದ ಸಮೇತ ಅನಿರುಧ್ ಅವರು ಚಿಕ್ಕಮಗಳೂರಿನ ಕಡೆ ಹೊರಟಿದ್ದಾರೆ. ಸದ್ಯ ಇವರ ಪ್ರವಾಸದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಹೌದು! ನೆನ್ನೆ ನಮ್ಮ ಅನಿರುಧ್ ಅವರು ತಮ್ಮ ಪತ್ನಿ, ಹಾಗು ಮಕ್ಕಳ ಜೊತೆ ಚಿಕ್ಕಮಗಳೂರಿಗೆ ತಮ್ಮ ಕಾರಿನಲ್ಲಿ ಪ್ರವಾಸಕ್ಕೆ ಹೋಗಿದ್ದಾರೆ. ಚಿಕ್ಕಮಗಳೂರಿನ ಮುತ್ತೋಡಿ ಕಾಡಿನ ಸಮೀಪ ಇರುವ ರೆಸಾರ್ಟ್ ನಲ್ಲಿ ಅನಿರುಧ್ ಅವರ ಕುಟುಂಬ ವಾಸವಿದ್ದಾರೆ ಎಂದು ತಿಳಿದು ಬಂದಿದೆ. ನೆನ್ನೆ ಯಿಂದ ಅನಿರುಧ್ ಕುಟುಂಬದವರು, ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ, ಬಾಬಾ ಬುಡನ್ ಗಿರಿ ಸೇರಿದಂತೆ ಹಲವಾರು ಅದ್ಭುತ ಸ್ಥಳಗಳನ್ನು ಭೇಟಿ ಮಾಡಿ ಮಲೆನಾಡಿನ ಸೌಂದರ್ಯವನ್ನು ಸವಿದಿದ್ದಾರೆ.

ಬಲ್ಲ ಮೂಲಗಳ ಪ್ರಕಾರ ಅನಿರುಧ್ ಅವರ ಪತ್ನಿ , ಮಕ್ಕಳ ಜೊತೆ, ಭರತನ್ ಅಮ್ಮನವರು ಕೂಡ ಪ್ರವಾಸಕ್ಕೆ ಹೋಗಬೇಕಿತ್ತು. ಆದರೆ ಈ ಕರೋನದ ಕಾರಣದಿಂದ ಭಾರತಿ ಅವರು ಇವರ ಜೊತೆ ಪ್ರವಾಸಕ್ಕೆ ಹೋಗಲಿಲ್ಲ. ಬಲ್ಲ ಮೂಲಗಳ ಪ್ರಕಾರ ಅನಿರುಧ್ ಅವರು ಸುಮಾರು 5 ದಿನಗಳ ಕಾಲ ಧಾರಾವಾಹಿ ಕೆಲಸಗಳಿಂದ ಬ್ರೇಕ್ ತೆಗೆದು ಕೊಂಡಿದ್ದಾರೆ. ಇವರ ಭಾಗದ ಕೆಲಸಗಳನ್ನು ಮುಗಿಸಿ, ಕುಟುಂಬದ ಸಮೇತ ಅನಿರುಧ್ ಅವರು ಚಿಕ್ಕಮಗಳೂರಿಗೆ ಹೋಗಿದ್ದಾರೆ. ಇದೇ ಶುಕ್ರವಾರದಂದು ಅನಿರುಧ್ ಅವರು ಬೆಂಗಳೂರಿಗೆ ವಾಪಾಸ್ ಆಗಲಿದ್ದಾರೆ ಎಂದು ತಿಳಿದು ಬಂದಿದೆ.

ಸದ್ಯ ಅನಿರುಧ್ ಹಾಗು ಅವರ ಸುಂದರ ಕುಟುಂಬದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸುದ್ದಿ ಆಗಿದ್ದು, ಅನಿರುಧ್ ಕುಟುಂಬದ ಸುಂದರ ಫೋಟೋಗಳನ್ನು ನೋಡಿ ನೆಟ್ಟಿಗರು ಮಹಾಳ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಈ ಸುದ್ದಿ ಇಷ್ಟವಾದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ಕಾಮೆಂಟ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ ಎಲ್ಲಾ ಲೇಟೆಸ್ಟ್ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಫಾಲೋ ಮಾಡಿರಿ. ಈ ಸುದ್ದಿ ಇಷ್ಟ ವಾದಲ್ಲಿ ಮರೆಯದೆ ಇದನ್ನು ಲೈಕ್ ಮಾಡಿ ಶೇರ್ ಮಾಡಿ.

Trending

To Top