HomeNewsಆಂಡಿ ಮೇಲೆ ಕಿಚ್ಚ ಸುದೀಪ್ ಸಿಕ್ಕಾ ಪಟ್ಟೆ ಗರಂ! ತಲೆ ಬೋಳಿಸಿ ಕೊಂಡರು ಆಂಡಿ

ಆಂಡಿ ಮೇಲೆ ಕಿಚ್ಚ ಸುದೀಪ್ ಸಿಕ್ಕಾ ಪಟ್ಟೆ ಗರಂ! ತಲೆ ಬೋಳಿಸಿ ಕೊಂಡರು ಆಂಡಿ

ನಿಮಗೆಲ್ಲ ಗೊತ್ತಿರೋ ಹಾಗೆ ಬಿಗ್ ಬಾಸ್ ಕನ್ನಡದ ಸೀಸನ್ 6 ರಲ್ಲಿ ಸ್ಪರ್ಧಿಯಾದ ಆಂಡಿ ಪ್ರತಿ ದಿನ ಏನಾದರು ಒಂದು ತರ್ಲೆ ಕೆಲಸವನ್ನು ಮಾಡುತ್ತಲೇ ಇರುತ್ತಾರೆ. ಒಂದು ವಿಷ್ಯಕ್ಕೆ ಆಂಡಿ ಹಾಗು ಕವಿತಾ ಗೌಡ ಅವರು ಮಾತಾಡ ಬೇಕಾದ್ರೆ ಆಂಡಿ ಅವರು ಕವಿತಾ ಗೌಡ ಅವರಿಗೆ ನಾನು ಅರ್ಧ ತಲೆ ಬೋಳಿಸಿಕೊಳ್ಳುತ್ತೇನೆ ಎಂದು ಹೇಳಿದ್ದರು. ವಿಷ್ಯ ಏನಪ್ಪಾ ಅಂದರೆ ಬಿಗ್ ಬಾಸ್ ನಲ್ಲಿ ಒಂದು ಟಾಸ್ಕ್ ನ ಪ್ರಕಾರ ಸ್ಪರ್ದಿಗಳನೆಲ್ಲ ಎರಡು ತಂಡವಾಗಿ ಮಾಡಿದ್ದರು. ಆವಾಗ ಆಂಡಿ “ನಮ್ಮ ತಂಡವನ್ನು ಕವಿತಾ ಗೌಡ ಅವರು ಗೆಲ್ಲಿಸಿದರೆ, ನಾನು ತಲೆ ಬೋಳಿಸಿಕೊಳ್ಳುತ್ತೇನೆ” ಎಂದು ಹೇಳಿದ್ದರು.
ಇದೆ ರೀತಿ ಟೀಮ್ ನ ಕ್ಯಾಪ್ಶನ್ ಆದ ಕವಿತಾ ಗೌಡ ಅವರು ತಮ್ಮ ಟೀಮನ್ನು ಗೆಲ್ಲಿಸಿ ಬಿಟ್ಟರು. ವಾರದ ಕೊನೆಯಲ್ಲಿ ದೊಡ್ಮನೆ ಕಥೆ ಸುದೀಪ್ ಜೊತೆ ಸಮಯದಲ್ಲಿ ಕಿಚ್ಚ ಸುದೀಪ್ ಅವರು ಆಂಡಿ ಗೆ “ನೀನೆ ಹೇಳಿದ ಪ್ರಕಾರ, ಯಾವಾಗ ತಲೆ ಬೋಳಿಸಿಕೊಳ್ಳುತ್ತೀಯ” ಎಂದು ಕೇಳಿದರು. ಇದಕ್ಕೆ ಕಂಗಾಲಾದ ಆಂಡಿ ಅವರು ಕವಿತಾ ಗೌಡ ಅವರಿಗೆ ಮಾತು ಕೊಟ್ಟಂತೆ ಅರ್ಧ ತಲೆಯನ್ನು ಬೋಳಿಸಿಕೊಂಡರು. ಈ ಸುದ್ದಿ ಸದ್ಯ ಸೋಶಿಯಲ್ ಮೀಡಿಯಾ ದಲ್ಲಿ ವೈರಲ್ ಆಗಿದೆ.
ಎಲ್ಲರ ಮುಂದೆ ಸ್ಕೋಪ್ ತೊಗಲಲು ಆಂಡಿ ನಾನು ತಲೆ ಬೋಳಿಸಿಕೊಳ್ಳುತ್ತೇನೆ ಎಂದು ಹೇಳಿದ್ದರು. ಆದರೆ ಕಿಚ್ಚ ಸುದೀಪ್ ಅವರು ಹೇಳಿದ ಮೇಲೆ ಸ್ವಲ್ಪ ಟೆನ್ಶನ್ ಅಲ್ಲಿದ್ದ ಆಂಡಿ ಅವರು ಮೊದಲು ಬೇಡ ಅಂದರು. ಕೊನೆಗೆ ಎಲ್ಲರ ಒತ್ತಾಯದ ಮೇರೆಗೆ ತಮ್ಮ ಅರ್ಧ ತಲೆಯನ್ನು ಬೋಳಿಸಿಕೊಂಡರು. ಇದಾದ ನಂತರ ತಮ್ಮನ್ನು ತಾವೇ ಕನ್ನಡಿಯಲ್ಲಿ ನೋಡಿಕೊಂಡು ನಾನು ಚನ್ನಾಗಿ ಕಾಣುತ್ತಾ ಇಲ್ಲ ಎಂದು ಆಂಡಿ ಅವರು ಬೇಜಾರು ಮಾಡಿಕೊಂಡರು.
ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ನಮಗೆ ತಿಳಿಸಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ.

You May Like

More