Film News

ಜೂ.11 ರಂದು ಅಂಧಾದುನ್ ರಿಮೇಕ್ ಬಿಡುಗಡೆ!

ಹೈದರಾಬಾದ್: ಅಂಧಾದುನ್ ಚಿತ್ರ ಬಾಲಿವುಡ್‌ನಲ್ಲಿ ಸೂಪರ್ ಹಿಟ್ ಹೊಡೆದ ಚಿತ್ರ. ಈ ಚಿತ್ರವನ್ನು ತೆಲುಗು ವರ್ಷನ್ ನಲ್ಲಿ ರಿಮೇಕ್ ಮಾಡಿದ್ದು, ಜೂನ್ 11,2021 ರಂದು ತೆರೆಗೆ ಬರಲಿದೆ ಅಂಧಾದುನ್ ಚಿತ್ರ.

ಬಾಲಿವುಡ್‌ನಲ್ಲಿ ಸಖತ್ ಹಿಟ್ ಹೊಡೆದ ಅಂಧಾದುನ್ ಚಿತ್ರದ ರಿಮೇಕ್‌ನಲ್ಲಿ ನಾಯಕನಾಗಿ ನಿತಿನ್ ಹಾಗೂ ನಾಯಕಿಯಾಗಿ ತಮನ್ನಾ ಭಾಟಿಯಾ ಪ್ರಮುಖ ಪಾತ್ರವೊಂದರಲ್ಲಿ ನಭಾ ನಟೇಶ್ ಬಣ್ಣ ಹಚ್ಚಿದ್ದಾರೆ. ಈ ಚಿತ್ರ ಜೂ.11 ರಂದು ಬಿಡುಗಡೆಯಾಗಲಿದ್ದು, ಈ ವಿಚಾರವನ್ನು ನಟಿ ತಮನ್ನಾ ತಮ್ಮ ಅಧಿಕೃತ ಟ್ವಿಟರ್ ನಲ್ಲಿ ಘೋಷಣೆ ಮಾಡಿದ್ದಾರೆ.

ಬಾಲಿವುಡ್ ಅಂಧಾದುನ್ ಚಿತ್ರದಲ್ಲಿ ಆಯುಷ್ಮಾನ್ ಖುರಾನ್ ಹಾಗೂ ತಮನ್ನಾ, ರಾಧಿಕಾ ಆಪ್ಟೆ ನಟಿಸಿದ್ದರು, ತೆಲುವು ಅಂಧಾದುನ್ ನಲ್ಲಿ ಆಯುಷ್ಮಾನ್ ಖುರಾನ್ ಪಾತ್ರದಲ್ಲಿ ನಿತಿನ್, ಟಬು ಪಾತ್ರದಲ್ಲಿ ತಮನ್ನಾ, ರಾಧಿಕಾ ಆಪ್ಟೆ ಚಿತ್ರದಲ್ಲಿ ನಭಾ ನಟೇಶ್ ಕಾಣಿಸಿಕೊಳ್ಳಿದ್ದಾರೆ. ಫೆ.24 ರಲ್ಲಿ ಸಿನೆಮಾ ಶೂಟಿಂಗ್ ಆರಂಭವಾಗಿತ್ತು, ನಂತರ ಕೊರೋನಾ ಲಾಕ್‌ಡೌನ್ ಹೇರಿದ ಕಾರಣ ಶೂಟಿಂಗ್ ನಿಲ್ಲಿಸಲಾಗಿತ್ತು. ಇತ್ತಿಚಿಗಷ್ಟೆ ದುಬೈನಲ್ಲಿ ಮೊದಲ ಹಂತದ ಶೂಟಿಂಗ್ ಆರಂಭವಾಗಿತ್ತು. ಶೀಘ್ರದಲ್ಲೇ ಚಿತ್ರದ ಶೂಟಿಂಗ್ ಮುಕ್ತಾಯವಾಗಲಿದ್ದು, ಜೂ.11 ರಂದು ತೆರೆಗೆ ಬರಲಿದೆ.

ಇನ್ನೂ ಕಳೆದ 2008 ರಲ್ಲಿ ತೆರೆಕಂಡ ಅಂಧಾದುನ್ ಚಿತ್ರವನ್ನು ಬಾಲಿವುಡ್‌ನ ಖ್ಯಾತ ನಿರ್ದೇಶಕ ಶ್ರೀರಾಮ್ ರಾಘವನ್ ನಿರ್ದೇಶನ ಮಾಡಿದ್ದು, ಜತೆಗೆ ರಾಷ್ಟ್ರ ಪ್ರಶಸ್ತಿಯಲ್ಲಿ ಅತ್ಯುತ್ತಮ ನಟ ಹಾಗೂ ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿಯನ್ನು ಸಹ ಅಂಧಾದುನ್ ಚಿತ್ರ ಪಡೆದುಕೊಂಡಿತ್ತು. ಅಷ್ಟೇ ಅಲ್ಲದೇ ಈ ಚಿತ್ರ ತಮಿಳುನಲ್ಲಿ ಸಹ ರಿಮೇಕ್ ಆಗುತ್ತಿದೆ.

Trending

To Top