ಇಂಡಿಯಾದಲ್ಲಿ ಇದು ಪರಿಸ್ಥಿತಿ ಎಂದು ಶಾಕಿಂಗ್ ಕಾಮೆಂಟ್ಸ್ ಕೊಟ್ಟ ಟಾಪ್ ಆಂಕರ್…!

ತೆಲುಗು ಕಿರುತೆರೆಯಲ್ಲಿ ಅನೇಕ ನಿರೂಪಕಿಯರು ಕಾಣಿಸಿಕೊಂಡಿದ್ದಾರೆ. ಆದರೆ ಅವರಲ್ಲೂ ಕೆಲವೊಬ್ಬರು ತುಂಬಾನೆ ಪ್ಯಾಪುಲರ್‍ ಆಗಿದೆ. ಅತ್ತ ಸಿನೆಮಾಗಳಲ್ಲೂ ಸಹ ಸದ್ದು ಮಾಡುತ್ತಾ, ಇತ್ತ ಕಿರುತೆರೆಯಲ್ಲೂ ಸದ್ದು ಮಾಡುತ್ತಾ ತಮ್ಮದೇ ಆದ ಕ್ರೇಜ್ ಸಂಪಾದಿಸಿಕೊಂಡಿದ್ದಾರೆ. ಅವರ ಪೈಕಿ ನಟಿ ಹಾಗೂ ಆಂಕರ್‍ ರಶ್ಮಿ ಗೌತಮ್ ಸಹ ಒಬ್ಬರಾಗಿದ್ದಾರೆ. ನಟಿ ರಶ್ಮಿ ಸ್ಟೇಜ್ ಮೇಲೆ ಬಂದರೇ ಇಡೀ ಕಾರ್ಯಕ್ರಮಕ್ಕೆ ಒಂದು ತರಹ ಕ್ರೇಜ್ ಬರುತ್ತದೆ. ರಶ್ಮಿ ತಮ್ಮದೇ ಆದ ಮಾತಿನ ಶೈಲಿಯಲ್ಲಿ, ತನ್ನ ಸೌಂದರ್ಯದೊಂದಿಗೆ ಎಲ್ಲರನ್ನೂ ರಂಜಿಸುತ್ತಾ ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

ನಟಿ ರಶ್ಮೀ ಕೇವಲ ಕಿರುತೆರೆ, ಸಿನೆಮಾ ಮಾತ್ರವಲ್ಲದೇ ಸೋಷಿಯಲ್ ಮಿಡಿಯಾದಲ್ಲೂ ಸಹ ಸಿಕ್ಕಾಪಟ್ಟ ಸದ್ದು ಮಾಡುತ್ತಿರುತ್ತಾರೆ. ಅವರು ಹಂಚಿಕೊಳ್ಳುವ ಕೆಲವೊಂದು ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಆದರೆ ಇದೀಗ ಆಕೆ ಕೆಲವೊಂದು ಕಾಮೆಂಟ್ ಗಳನ್ನು ಮಾಡಿದ್ದು, ಇವು ಎಲ್ಲೆಡೆ ವೈರಲ್ ಆಗುತ್ತಿವೆ. ಸಮಾಜದಲ್ಲಿ ಬೇರೂರಿದ ಕೆಲವೊಂದು ಸಂಘಟನೆಗಳ ಮೇಲೆ ರಿಯಾಕ್ಟ್ ಆಗಿದ್ದಾರೆ. ಆಕೆ ಮಾಡಿದ ಕಾಮೆಂಟ್ಸ್ ಇದೀಗ ಎಲ್ಲ ಕಡೆ ಚರ್ಚೆಗಳು ಶುರುವಾಗುವಂತೆ ಮಾಡಿದೆ. ನಟಿ ಕೇವಲ ಹಾಟ್ ಪೊಟೋಗಳನ್ನು ಶೇರ್‍ ಮಾಡಲು ಮಾತ್ರ ಸೀಮಿತವಾಗಿಲ್ಲ ಆಗಾಗ ಸಾಮಾಜಿಕ ಕಳಕಳಿಯಿಂದ ಕೆಲವೊಂದು ಹೇಳಿಕೆಗಳನ್ನು ಸಹ ನೀಡುತ್ತಿರುತ್ತಾರೆ. ಇದೀಗ ಸಮಾಜದಲ್ಲಿ ನಡೆಯುತ್ತಿರುವ ಒಂದು ವಿಚಾರದ ಬಗ್ಗೆ ಆಕೆ ಹೇಳಿಕೊಂಡಿದ್ದಾರೆ.

ನಟಿ ರಶ್ಮಿ ನಮ್ಮ ದೇಶದಲ್ಲಿ ಗೋವುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಮಾತನಾಡಿದ್ದಾರೆ. ನಮ್ಮ ದೇಶದಲ್ಲಿ ಗೋವುಗಳನ್ನು ದೇವರೆಂದು ಪೂಜಿಸುತ್ತೇವೆ. ಆದರೆ ಇತ್ತೀಚಿಗೆ ಅದೇ ಗೋವುಗಳ ಮೇಲೆ ಹಲ್ಲೆಗಳು ಹೆಚ್ಚಾಗಿ ನಡೆಯುತ್ತಿವೆ. ಜಾನುವಾರುಗಳ ಮೇಲೆ ಹಲ್ಲೆ ನಡೆದಿರುವ ಬಗ್ಗೆ ಆಕೆಯ ಗಮನಕ್ಕೆ ಬಂದರೇ ಸಾಕು ಸೋಷಿಯಲ್ ಮಿಡಿಯಾ ವೇದಿಕೆಯಾಗಿ ಆಕೆ ಘಟನೆಯನ್ನು ತೀವ್ರವಾಗಿ ಖಂಡನೆ ಮಾಡುತ್ತಾರೆ. ಇತ್ತೀಚಿಗೆ ಆಕೆ ಹಂಚಿಕೊಂಡ ಪೋಸ್ಟ್ ಒಂದು ವೈರಲ್ ಆಗಿದೆ. ಇದರಲ್ಲಿ ಗೋವನ್ನು ಹಿಂಸೆ ಮಾಡುತ್ತಿರುವ ವಿಚಾರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜೊತೆಗೆ ತುಂಬಾ ಎಮೋಷನಲ್ ಆಗಿ ಹೇಳಿಕೆ ಪೋಸ್ಟ್ ಮಾಡಿದ್ದಾರೆ.

ನಟಿ ರಶ್ಮಿ ಇತ್ತೀಚಿಗೆ ಆಕೆ ಯ ಸೋಷಿಯಲ್ ಮಿಡಿಯಾದಲ್ಲಿ ಒಂದು ಹಸುವನ್ನು ಹಗ್ಗದಿಂದ ಕಟ್ಟಿಹಾಕಿ ಎಳೆದುಕೊಂಡು ಹೋಗುತ್ತಿರುವ ವಿಡಿಯೋ ಒಂದನ್ನು ಶೇರ್‍ ಮಾಡಿ ಎಮೋಷನಲ್ ಹೇಳಿಕೆಯನ್ನು ನೀಡಿದ್ದಾರೆ. ಹಸುವನ್ನು ಗೋಮಾತೆ ಎಂದು ಕರೆಯುವ ಇಂಡಿಯಾದಲ್ಲಿ ಇದಕ್ಕಿಂತ ದರಿದ್ರ ಮತ್ತೊಂದು ಇರದು. ಹಸು ಚರ್ಮದಿಂದ ತಯಾರಿಸಿದ ಉತ್ಪನ್ನಗಳನ್ನು ಖರೀದಿಸುವ ಮುನ್ನಾ ಒಮ್ಮೆಯಾದರೂ ಆಲೋಚನೆ ಮಾಡುವುದಿಲ್ಲ. ಹಸುಗಳ ಚರ್ಮದಿಂದ ಮಾಡಿದ ಉತ್ಪನ್ನಗಳನ್ನು ಖರೀದಿಸುವುದರಿಂದ ದೂರ ಉಳಿಯೋಣ. ನಿಮಗೆ ಹಾಲು ಎಲ್ಲಿಂದ ಬರುತ್ತದೆ ಎಂಬುದನ್ನೂ ಸಹ ಮರೆಯಬೇಡಿ ಎಂದು ಎಮೋಷನಲ್ ಆಗಿ ಹೇಳಿಕೆ ಕೊಟ್ಟಿದ್ದಾರೆ. ಸದ್ಯ ರಶ್ಮಿ ಯ ಈ ಪೋಸ್ಟ್ ಗೆ ಕೆಲವರು ವಿರೋಧದ ಹೇಳಿಕೆ ನೀಡಿದರೇ, ಮತ್ತೆ ಕೆಲವರು ಸಪೋರ್ಟ್ ಮಾಡಿದ್ದಾರೆ.

Previous articleಪ್ಯಾಂಟ್ ಬಿಚ್ಚಿ ಹಾಟ್ ಪೋಸ್ ಕೊಟ್ಟ ತೆಲುಗು ನಟಿ.. ಅಬ್ಬಬ್ಬಾ ಎನ್ನಬೇಕು ಆಕೆಯ ಪೋಸ್ ಗೆ..!
Next articleನಮ್ಮ ಆಸ್ತಿಗಳೆಲ್ಲಾ ಹೋದವು, ಆದರೆ ಇದು ನನಗೆ ತಡವಾಗಿ ತಿಳಿಯಿತು ಎಂದ ಪೂರಿ ಜಗನ್ನಾಥ್ ಮಗ!