ಜಬರ್ದಸ್ತ್ ಶೋ ಮೂಲಕ ಫೇಂ ಪಡೆದುಕೊಂಡ ಆಂಕರ್ ಅನಸೂಯ ಕಡಿಮೆ ಸಮಯದಲ್ಲೇ ಕಿರುತೆರೆಯಲ್ಲಿ ಅಪಾರ ಸಂಖ್ಯೆಯ ಅಭಿಮಾನಿ ಬಳಗ ಗಿಟ್ಟಿಸಿಕೊಂಡರು. ಹಂತ ಹಂತವಾಗಿ ಆಕೆ ನಟಿಯಾದರು. ಇತ್ತಿಚಿಗಷ್ಟೆ ಆಕೆ ಜಬರ್ದಸ್ತ್ ಶೋನಿಂದ ಹೊರಬಂದು ಸುದ್ದಿಯಾದರು. ಇನ್ನೂ ಅನಸೂಯ ಸದಾ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇರುತ್ತಾರೆ. ಅನೇಕ ಭಾರಿ ಆಕೆ ಧರಿಸುವಂತಹ ಬಟ್ಟೆಗಳಿಂದ ಸುದ್ದಿಯಾಗುತ್ತಿರುತ್ತಾರೆ. ಆಕೆಯನ್ನು ಟ್ರೋಲ್ ಸಹ ಮಾಡುತ್ತಿರುತ್ತಾರೆ, ಆ ಟ್ರೋಲ್ ಗಳಿಗೆ ಆಕೆ ಸ್ಟ್ರಾಂಗ್ ಡೋಸ್ ಸಹ ಕೊಡುತ್ತಿರುತ್ತಾರೆ. ಇದೀಗ ಆಕೆ ಹೊಸ ವಿಚಾರಕ್ಕಾಗಿ ಸುದ್ದಿಯಾಗಿದ್ದಾರೆ.
ಸದಾ ಒಂದಲ್ಲ ಒಂದು ವಿಚಾರಕ್ಕೆ ಅನಸೂಯ ಟ್ರೋಲ್ ಆಗುತ್ತಲೇ ಇರುತ್ತಾರೆ. ಇದೀಗ ಸುಡಿಗಾಲಿ ಸುಧೀರ್ ಬಗ್ಗೆ ಕೆಲವೊಂದು ಹೇಳಿಕೆಗಳನ್ನು ನೀಡಿದ್ದು, ಈ ಹೇಳಿಕೆಗಳಿಂದ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸುಧೀರ್ ಬಗ್ಗೆ ಅನಸೂಯ ಮಾಡಿದಂತಹ ಹೇಳಿಕೆಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ. ಜೊತೆಗೆ ಆಕೆಯ ಕಾಮೆಂಟ್ ಗಳು ಹಲವು ವಿವಾದಗಳಿಗೆ ಗುರಿಯಾಗಿದೆ. ಇನ್ನೂ ಸುದೀರ್ ಅಭಿಮಾನಿಗಳು ಸುಮ್ಮನಿರುತ್ತಾರಾ ಅನಸೂಯ ರವರನ್ನು ಸಿಕ್ಕಾಪಟ್ಟೆ ಆಡಿಕೊಳ್ಳುತ್ತಿದ್ದಾರೆ. ಇನ್ನೂ ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಅನಸೂಯ ಗೆ ಸುಡಿಗಾಲಿ ಸುದೀರ್ ಜೊತೆಗೆ ಕೆಲಸ ಮಾಡಿದ್ದು ಹೇಗಿತ್ತು ಎಂದು ಪ್ರಶ್ನೆ ಮಾಡಿದ್ದರು. ಇದಕ್ಕೆ ಅನಸೂಯ ನೀಡಿದ ಹೇಳಿಕೆಗಳೇ ವಿವಾದಕ್ಕೆ ಗುರಿಯಾಗಿದೆ. ಸೂಪರ್ ಸಿಂಗ್ ಜೂನಿಯರ್ ಶೋನಲ್ಲಿ ಅನಸೂಯ ಹಾಗೂ ಸುಡಿಗಾಲಿ ಸುಧೀರ್ ಹೋಸ್ಟ್ ಮಾಡಿದ್ದರು. ವಾಂಟೆಡ್ ಪಂಡುಗಾಡ್ ಎಂಬ ಸಿನೆಮಾದಲ್ಲೂ ಸಹ ಇಬ್ಬರೂ ನಟಿಸಿದ್ದರು.
ಇನ್ನೂ ಅನಸೂಯ ಸುಧೀರ್ ಬಗ್ಗೆ ಮಾತನಾಡುತ್ತಾ, ಸುಧೀರ್ ನನಗೆ ಜೂನಿಯರ್ ಈ ವಿಚಾರ ನಿಮಗೆ ಗೊತ್ತಿಲ್ಲವೇ, ಈ ಪ್ರಶ್ನೆ ಅವರನ್ನೇ ಕೇಳಬೇಕು ಎನ್ನುವ ಹಾಗೆ ಪ್ರತಿಕ್ರಿಯೆ ನೀಡಿದ್ದಾರೆ. ಸುಧೀರ್ ನನ್ನಿಂದ ಅನೇಕ ವಿಚಾರಗಳನ್ನು ಕಲಿತುಕೊಂಡಿದ್ದೀನಿ ಎಂದು ಹೇಳಿದ್ದಾರೆ. ನಾನೂ ಸಹ ಸುಧೀರ್ ನಿಂದ ಕೆಲವೊಂದನ್ನು ಕಲಿತುಕೊಂಡಿದ್ದೇನೆ ಎಂದು ಹೇಳಿದ್ದಾರೆ. ಈ ಹೇಳಿಕೆಯನ್ನು ಕೇಳಿದ ಸುಧೀರ್ ಫ್ಯಾನ್ಸ್ ಆಕ್ರೋಷಗೊಂಡಿದ್ದಾರೆ. ಅನಸೂಯಗೆ ಇಂತಹ ಆಟಿಟ್ಯೂಡ್ ಏತಕೆ ಎಂದು ಆಗ್ರಹಿಸುತ್ತಿದ್ದಾರೆ. ಎರಡು ಒಳ್ಳೆಯ ಸಿನೆಮಾಗಳಲ್ಲಿ ನಟಿಸಿದ ಕೂಡಲೇ ಅಷ್ಟೊಂದು ಆಟಿಟ್ಯೂಡ್ ಬೇಕಾ, ಆ ಕಾರಣದಿಂದಲೇ ನಿನ್ನನ್ನು ಆಂಟಿ ಎಂದು ಕರೆಯುತ್ತಿರುವುದು. ಇದೂ ಟೂಮಚ್, ಓವರ್ ಬಿಲ್ಡಪ್ ಎಂಬೆಲ್ಲಾ ಕಾಮೆಂಟ್ ಗಳು ಹರಿದು ಬರುತ್ತಿವೆ.
ಅನಸೂಯ ಗೆ ಸುಧೀರ್ ಗಿರುವಂತಹ ಫ್ಯಾನ್ಸ್ ಫಾಲೋಯಿಂಗ್ ನಲ್ಲಿ ಅರ್ಧಭಾಗದಷ್ಟು ಸಹ ಇಲ್ಲ. ಆಕೆ ಈ ರೀತಿಯ ಮಾತನಾಡುವುದು ಸರಿಯಲ್ಲ ಎಂಬೆಲ್ಲಾ ಕಾಮೆಂಟ್ ಗಳನ್ನು, ಟ್ರೋಲ್ ಗಳನ್ನು ಮಾಡುತ್ತಿದ್ದಾರೆ. ಸದ್ಯ ಈ ವಿಚಾರ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಟಾಪಿಕ್ ಆಗಿದೆ. ಇನ್ನೂ ಈ ಬಗ್ಗೆ ಅನಸೂಯ ಯಾವ ರೀತಿಯಲ್ಲಿ ರಿಯಾಕ್ಟ್ ಆಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಇನ್ನೂ ಆಕೆ ಸಿನೆಮಾಗಳಲ್ಲೂ ಸಹ ಬ್ಯುಸಿಯಾಗಿದ್ದಾರೆ.