Film News

ನ್ಯೂಯಾರ್ಕ್ ಟೈಮ್ ಸ್ಕ್ವೇರ್ ನಲ್ಲಿ ಪ್ರದರ್ಶನಗೊಂಡ ಅಪ್ಪು-ಅನುಶ್ರೀ ಪೊಟೋ, ಅನುಶ್ರೀಗೆ ಹುಟ್ಟುಹಬ್ಬಕ್ಕೆ ಭರ್ಜರಿ ಗಿಫ್ಟ್ …..!

ಕನ್ನಡ ಬಣ್ಣದ ಲೋಕದ ಕಿರುತೆರೆ ಆಂಕರ್‍ ಅನುಶ್ರೀ ಭಾರಿ ಫೇಂ ಪಡೆದುಕೊಂಡಿದ್ದಾರೆ. ಕಿರುತೆರೆ ಶೋಗಳ ಜೊತೆಗೆ ಅನೇಕ ಈವೆಂಟ್ ಗಳನ್ನು ಹೋಸ್ಟ್ ಮಾಡುತ್ತಾ ತನ್ನದೇ ಆದ ಅಭಿಮಾನಿ ಬಳಗವನ್ನು ಸಹ ಪಡೆದುಕೊಂಡಿದ್ದಾರೆ. ಕನ್ನಡ ಕಿರುತೆರೆಯಲ್ಲಿ ಸ್ಟಾರ್‍ ಅಂಕರ್‍ ಆಗಿರುವ ಅನುಶ್ರೀ ಸೋಷಿಯಲ್ ಮಿಡಿಯಾದಲ್ಲೂ ಆಕ್ಟೀವ್ ಆಗಿರುತ್ತಾರೆ. ಅನುಶ್ರೀ ಹುಟ್ಟುಹಬ್ಬದ ನಿಮಿತ್ತ ಆಕೆಗೆ ಬಿಗ್ ಸರ್ಪೈಸ್ ಸಿಕ್ಕಿದೆ ಎಂದು ಹೇಳಬಹುದಾಗಿದೆ. ನ್ಯೂಯಾರ್ಕ್ ಟೈಮ್ ಸ್ಕ್ವೇರ್‍ ನಲ್ಲಿ ಪುನೀತ್ ರಾಜ್ ಕುಮಾರ್‍ ರವರ ಜೊತೆಗೆ ಇರುವಂತಹ ಅನುಶ್ರೀ ಪೊಟೋ ಪ್ರದರ್ಶನಗೊಂಡಿದೆ. ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಕನ್ನಡ ಸಿನಿರಂಗದ ಮೇರು ನಟ, ಪವರ್‍ ಸ್ಟಾರ್‍ ಪುನೀತ್ ರಾಜ್ ಕುಮಾರ್‍ ರವರು ಇಹಲೋಕ ತ್ಯೆಜಿಸಿ ವರ್ಷಗಳು ಕಳೆದರೂ ಸಹ ಅವರ ನೆನಪು ಎಂದಿಗೂ ಮರೆಯಾಗುವುದಿಲ್ಲ. ನ್ಯೂಯಾರ್ಕ್ ನಗರದ ಟೈಮ್ ಸ್ಕ್ವೇರ್‍ ನಲ್ಲಿ ಅಪ್ಪು ಪೊಟೋ ಕಾಣಿಸಿಕೊಂಡಿದೆ. ಅಪ್ಪು ಜೊತೆಗೆ ನಟಿ ಕಂ ನಿರೂಪಕಿ ಅನುಶ್ರೀ ಪೊಟೋ ಸಹ ಇದೆ. ಈ ಹಿಂದೆ ನಡೆದ ಕಾರ್ಯಕ್ರಮವೊಂದರಲ್ಲಿ ತೆಗೆದ ಪೊಟೋ ಇದಾಗಿದೆ. ನ್ಯೂಯಾರ್ಕ್ ನಗರದಲ್ಲಿರುವ ಟೈಮ್ ಸ್ಕ್ವೇರ್‍ ಅತೀ ಹೆಚ್ಚು ಪ್ರವಾಸಿಗರು ಭೇಟಿ ನೀಡುವಂತಹ ಸ್ಥಳವಾಗಿದೆ. ಈ ಸ್ಥಳವನ್ನು ಎಂಟರ್‍ ಟೈನಮೆಂಟ್ ಹಬ್ ಹಾಗೂ ಕಮರ್ಷಿಯಲ್ ಎಂತಲೂ ಕರೆಯುತ್ತಾರೆ. ಅಂತಹ ಸ್ಥಳದಲ್ಲಿ ಅಪ್ಪು ಹಾಗೂ ಅನುಶ್ರೀ ಪೊಟೋವನ್ನು ಪ್ರದರ್ಶನ ಮಾಡಲಾಗಿದೆ. ಈ ಸಂತಸದ ವಿಡಿಯೋ ಅನ್ನು ಅಭಿಮಾನಿಯೊಬ್ಬ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಜೊತೆಗೆ ಮನದಾಳದ ಖುಷಿಯನ್ನು ಸಹ ಹಂಚಿಕೊಂಡಿದ್ದಾರೆ.

ನಟಿ ಕಂ ನಿರೂಪಕಿ ಅನುಶ್ರೀ ಜ.25 ರಂದು ತಮ್ಮ ಜನ್ಮ ದಿನವನ್ನು ಆಚರಿಸಿಕೊಂಡಿದ್ದಾರೆ. ಆಕೆಯ ಹುಟ್ಟುಹಬ್ಬಕ್ಕೆ ಅನೇಕ ಅಭಿಮಾನಿಗಳು, ಸಿನೆಮಾ ಗಣ್ಯರು ಶುಭಾಷಯಗಳನ್ನು ಕೋರಿದ್ದಾರೆ. ಈ ನಡುವೆ ಅನುಶ್ರೀ ತುಂಬಾನೆ ಖುಷಿಪಡುವಂತಹ ಸುದ್ದಿಯೊಂದು ಸಿಕ್ಕಿದೆ. ಓರ್ವ ಅಭಿಮಾನಿ ಅಪ್ಪು ಜೊತೆಗಿದ್ದ ಅನುಶ್ರೀ ಪೊಟೋ ಇರುವಂತಹ ವಿಡಿಯೋ ಹಂಚಿಕೊಂಡಿದ್ದಾರೆ. ಅನುಶ್ರೀ ಹುಟ್ಟುಹಬ್ಬದ ದಿನದಂದು ನ್ಯೂಯಾರ್ಕ್‌ನ ಟೈಮ್ ಸ್ಕ್ವೇರ್‍ ನಲ್ಲಿ ಅಪ್ಪು ಹಾಗೂ ಅನುಶ್ರೀ ಪೊಟೋ ಪ್ರದರ್ಶನ ಮಾಡಲಾಗಿತ್ತು. ಈ ವಿಡಿಯೋ ನೋಡಿದ ಅಭಿಮಾನಿಗಳು ಮತಷ್ಟು ಖುಷಿಯಾಗಿದ್ದಾರೆ. ಹುಟ್ಟುಹಬ್ಬದ ಶುಭಾಷಯಗಳನ್ನು ಸಹ ಹರಿಬಿಡುತ್ತಿದ್ದಾರೆ. ಈ ವಿಡಿಯೋ ನೋಡಿದ ಅನೇಕರು ಈ ವರ್ಷ ಅನುಶ್ರೀ ಜನ್ಮದಿನದ ಸ್ಪೇಷಲ್ ಎಂದೇ ಹೇಳುತ್ತಿದ್ದಾರೆ. ಇನ್ನೂ ಅನುಶ್ರೀ ಸಹ ಇದು ನನಗೆ ಹೆಮ್ಮೆಯ ಕ್ಷಣ ಎಂದು ಬರೆದುಕೊಂಡಿದ್ದಾರೆ.

Most Popular

To Top