ಜಬರ್ದಸ್ಥ್ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್, ಶೋ ನಿಂದ ಎಕ್ಸಿಟ್ ಆದ ಆಂಕರ್ ಅನಸೂಯ…!

ಟಾಲಿವುಡ್ ಕಿರುತೆರೆಯಲ್ಲಿ ದೊಡ್ಡ ಕ್ರೇಜ್ ಸಂಪಾದಿಸಿ ಆಂಕರ್‍ ಗಳಲ್ಲಿ ಅನಸೂಯ ಭಾರದ್ವಾಜ್  ಗಾಗಿ ಅನೇಕ ಅಭಿಮಾನಿಗಳು ಆಕೆಯ ಶೋ ನೋಡಲು ಕಾಯುತ್ತಿರುತ್ತಾರೆ. ಅನಸೂಯ ಕೆರಿಯರ್‍ ಪ್ರಾರಂಭಿಸಿದಾಗ ಮೊದಲಿಗೆ ಸಾಕ್ಷಿ, ಮಾ ಟಿವಿಗಳಲ್ಲಿ ಕೆಲಸ ಮಾಡಿದ್ದರು. ಬಳಿಕ ಆಕೆಗೆ ಪುಲ್ ಹೈಪ್ ಹಾಗೂ ಪಾಪ್ಯುಲಾರಿಟಿ ನೀಡಿದ ಶೋ ಎಂದರೇ ಅದು ಜಬರ್ದಸ್ಥ್ ಕಾಮಿಡಿ ಶೋ. ಈ ಶೋ ಮೂಲಕವೇ ಆಕೆ ದೊಡ್ಡ ಕ್ರೇಜ್ ಸಂಪಾದಿಸಿಕೊಂಡು ದೊಡ್ಡ ಅಭಿಮಾನಿ ಬಳಗವನ್ನು ದಕ್ಕಿಸಿಕೊಂಡರು. ಜಬರ್ದಸ್ಥ್ ಕಾರ್ಯಕ್ರಮವನ್ನು ಅನಸೂಯ ರವರಿಗಾಗಿಯೇ ಅನೇಕರು ನೋಡುತ್ತಾರೆ. ಆದರೆ ಇದೀಗ ಜಬರ್ದಸ್ಥ್ ಶೋ ನಿಂದ ಅನಸೂಯ ಈ ಶೋ ನಿಂದ ಹೊರ ಹೋಗಿದ್ದಾಗಿ ಹೇಳಲಾಗುತ್ತಿದೆ.

ಜಬರ್ದಸ್ಥ್ ಕಾಮಿಡಿ ಶೋ ನಲ್ಲಿ ಅನಸೂಯ ಹೋಸ್ಟ್ ಮಾಡುತ್ತಾ, ಗ್ಲಾಮರಸ್ ಟ್ರೀಟ್ ಸಹ ನೀಡುತ್ತಿರುತ್ತಾರೆ. ಶೋ ನಲ್ಲಿ ಆಕೆ ಧರಿಸಿದ ಶಾರ್ಟ್ ಡ್ರೆಸ್ ಗಳ ಮೂಲಕ ಎಲ್ಲರನ್ನೂ ಆಕರ್ಷಣೆ ಮಾಡುತ್ತಿರುತ್ತಾರೆ. ಶೋ ನಲ್ಲಿ ಕಾಮಿಡಿಯನ್ ಗಳು ಹಾಕುವ ಡೈಲಾಗ್ ಗಳಿಗೆ ಆಕೆ ನೀಡುವ ಸ್ಮೈಲ್ ಸಹ ಶೋ ನಲ್ಲಿ ಹೈಲೈಟ್ ಎಂದೇ ಹೇಳಬಹುದಾಗಿದೆ. ಅನೇಕ ವರ್ಷಗಳಿಂದ ಅನಸೂಯ ಜಬರ್ದಸ್ಥ್ ಶೋ ಅನ್ನು ಹೋಸ್ಟ್ ಮಾಡುತ್ತಾ ಸಕ್ಸಸ್ ಪುಲ್ ಆಂಕರ್‍ ಆಗಿದ್ದಾರೆ. ಮೊದಲಿಗೆ ರಷ್ಮಿ ಬಿ ಗೌತಮ್ ಎಂಬ ಆಂಕರ್‍ ನಿಂದ ಪೈಪೋಟಿ ಎದುರಾದರೂ ಅನಸೂಯ ತಮ್ಮ ಸ್ಥಾನವನ್ನು ಸ್ಥಿರಪಡಿಸಿಕೊಂಡರು. ಜೊತೆಗೆ ಸಿನೆಮಾಗಳಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡರು. ಸಿನೆಮಾಗಳಿಗಿಂತಲೂ ಆಕೆಗೆ ಹೆಚ್ಚು ಕ್ರೇಜ್ ದಕ್ಕಿಸಿಕೊಟ್ಟ ಶೋ ಜಬರ್ದಸ್ಥ್ ಎಂದೇ ಹೇಳಬಹುದು. ಆದರೆ ಇದೀಗ ಆ ಶೋಯಿಂದಲೇ ಆಕೆ ಹೊರಗುಳಿಯಲು ನಿರ್ಧಾರ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ನಟಿ ಕಂ ಆಂಕರ್‍ ಅನಸೂಯ ಜಬರ್ದಸ್ಥ್ ಶೋ ನಿಂದ ಹೊರಹೋಗುವ ಶಾಕಿಂಗ್ ನಿರ್ಣಯ ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದ್ದು. ಸದ್ಯ ಈ ವಿಚಾರ ಹೊರಬರುತ್ತಿದ್ದಂತೆ ಆಕೆಯ ಜಬರ್ದಸ್ಥ್ ಅಭಿಮಾನಿಗಳು ನಿರಾಸೆ ವ್ಯಕ್ತಪಡಿಸಿದಾರೆ. ಇತ್ತೀಚಿಗೆ ಜಬರ್ದಸ್ಥ್ ಹಾಗೂ ಎಕ್ಸ್ಟ್ರಾ ಜಬರ್ದಸ್ಥ್ ಶೋ ಗಳಿಂದ ಎಲ್ಲರೂ ದೂರ ಆಗುತ್ತಿದ್ದಾರೆ. ನಾಗಬಾಬು, ಸುಡಿಗಾಲಿ, ಸುಧೀರ್‍, ಅಪ್ಪಾರಾವು, ಗೆಟಪ್ ಶೀನು ಮೊದಲಾದವರೆಲ್ಲಾ ಶೋ ನಿಂದ ದೂರ ಹೋಗುತ್ತಿದ್ದಾರೆ. ಇದೀಗ ಅನಸೂಯ ಸಹ ಹೊರಹೋಗುತ್ತಿದ್ದಾರೆ. ಈ ಕುರಿತು ಆಕೆ ಇತ್ತಿಚಿಗೆ ತಮ್ಮ ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡ ಸ್ಟೋರಿ ಇದಕ್ಕೆ ಮತಷ್ಟು ಪುಷ್ಟಿ ನೀಡುವಂತಿದೆ.

ಇನ್ನೂ ನಟಿ ಅನಸೂಯ ಹಂಚಿಕೊಂಡ ಇನ್ಸ್ಟಾಗ್ರಾಂ ಪೋಸ್ಟ್ ನಂತೆ ನನ್ನ ಕೆರಿಯರ್‍ ನಲ್ಲಿ ನಾನು ತುಂಬಾ ದೊಡ್ಡ ನಿರ್ಣಯ ತೆಗೆದುಕೊಂಡಿದ್ದೇನೆ. ತುಂಬಾ ನೆನಪುಗಳನ್ನು ನನ್ನೊಂದಿಗೆ ತೆಗೆದುಕೊಂಡು ಹೋಗಯತ್ತಿದ್ದೇನೆ. ಅದರಲ್ಲಿ ಹೆಚ್ಚಾಗು ಒಳ್ಳೆಯ ನೆನಪುಗಳು ಇದೆ. ಕೆಲವೊಂದು ಬ್ಯಾಡ್ ಮೆಮೋರಿಸ್ ಸಹ ಇದೆ. ಎಂದಿನಂತೆ ನಿಮ್ಮ ಬೆಂಬಲ, ಪ್ರೋತ್ಸಾಹ ನನಗೆ ಇರುತ್ತದೆ ಎಂದು ಭಾವಿಸುತ್ತಿದ್ದೇನೆ ಎಂದು ಪೋಸ್ಟ್ ಮಾಡಿದ್ದಾರೆ. ಆದರೆ ನಟಿ ಎಲ್ಲೋ ಜಬರ್ದಸ್ಥ್ ಹೆಸರು ಪ್ರಸ್ತಾಪಿಸದೇ ಇದ್ದರೂ ಸಹ ಪರೋಕ್ಷವಾಗಿ ಹೇಳುತ್ತಿದ್ದಾರೆ ಎಂದು ಭಾವಿಸಿದ್ದಾರೆ. ಇನ್ನೂ ಅನಸೂಯಗೆ ಸ್ಟಾರ್‍ ಮಾ, ಜೀ ತೆಲುಗು ಚಾನೆಲ್ ಗಳಲ್ಲಿ ಕೆಲವೊಂದು ಶೋ ಗಳಿಗೆ ಕಮಿಟ್ ಆಗಿರುವುದು ಹಾಗೂ ಸಿನೆಮಾಗಳಲ್ಲಿ ಆಫರ್ಸ್ ಬರುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಎಲ್ಲರೂ ಭಾವಿಸುತ್ತಿದ್ದಾರೆ.

Previous articleಮಗಧೀರಾ ಸಿನೆಮಾಗೆ ನೋ ಹೇಳಿದ್ದಕ್ಕೆ ಈಗ ಪಶ್ಚಾತ್ಥಾಪ ಪಡುತ್ತಿದ್ದಾರೆ ನಟಿ ಅರ್ಚನಾ…!
Next articleಖ್ಯಾತ ನಿರ್ದೇಶಕ ದಾಸರಿ ನಾರಾಯಣರಾವ್ ಬಿಕಿನಿ ಧರಿಸು ಎಂದು ಸೀನಿಯರ್ ಜಯಪ್ರದಗೆ ಹೇಳಿದ್ದರಂತೆ..!