ಸೌಂದರ್ಯ ಪ್ರದರ್ಶನದಲ್ಲಿ ತಾನೂ ಕಡಿಮೆಯಿಲ್ಲ ಎಂದು ಹಾಟ್ ಪೋಸ್ ಕೊಟ್ಟ ಆಂಕರ್…

ತೆಲುಗು ಕಿರುತೆರೆಯ ಮೂಲಕ ಎಲ್ಲರನ್ನೂ ರಂಜಿಸುತ್ತಿರುವ ಹಾಗೂ ಮೋಸ್ಟ್ ಬ್ಯೂಟಿಲಪುಲ್ ಗ್ಲಾಮರಸ್ ಆಂಕರ್‍ ಎಂದು ಕರೆಯಲಾಗುವ ನಟಿ ಅನಸೂಯ ಭಾರಧ್ವಾಜ್ ರವರು ಸಹ ಕೆಲವೊಂದು ಸಿನೆಮಾಗಳ ಮೂಲಕ ಖ್ಯಾತಿ ಪಡೆದಿದ್ದಾರೆ. ಇದೀಗ ಇತರೆ ನಟಿಯರಿಗಿಂತ ತಾನು ಏನು ಕಡಿಮೆಯಿಲ್ಲ ಎಂಬಂತೆ ಹಾಟ್ ಪೊಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಶೇರ್‍ ಮಾಡುವ ಮೂಲಕ ತಾವು ಸಹ ಹಾಟ್ ನಟಿ ಎಂದು ನಿರೂಪಿಸಿದ್ದಾರೆ.

ನಟಿ ಅನುಸೂಯ ಸಾಮಾಜಿಕ ಜಾಲತಾಣಗಳಲ್ಲೂ ಸಹ ಸದಾ ಸಕ್ರಿಯರಾಗಿರುತ್ತಾರೆ. ಅವರು ಹಾಕುವಂತಹ ಪ್ರತಿಯೊಂದು ಪೊಸ್ಟ್ ಸಹ ವೈರಲ್ ಆಗುತ್ತಿರುತ್ತದೆ. ಅಂತಹುದರಲ್ಲಿ ಅನಸೂಯ ಮತ್ತೊಂದು ಹೆಜ್ಜೆ ಮುಂದೆ ಹಾಕಿ ಕೆಲವೊಂದು ಹಾಟ್ ಪೊಟೋಗಳನ್ನು ಶೇರ್‍ ಮಾಡಿದ್ದಾರೆ. ನಲವತ್ತರ ವಯಸ್ಸಾದರೂ ಸಹ ಅನಸೂಯ ಇತರೆ ಬ್ಯೂಟಿಪುಲ್ ನಟಿಯರಿಗೂ ಸಹ ಫೈಟ್ ಕೊಡಲು ಪ್ರಯತ್ನ ಮಾಡುತ್ತಿರುತ್ತಾರೆ. ಇದೀಗ ಆಕೆ ಶೇರ್‍ ಮಾಡಿರುವ ಕೆಲವೊಂದು ಪೊಟೋಗಳು ಸೋಷಿಯಲ್ ಮಿಡಿಯಾಗಳಲ್ಲಿ ಸಖತ್ ವೈರಲ್ ಆಗುತ್ತಿವೆ.

ನಟಿ ಅನಸೂಯ ಮೊದಲಿಗೆ ಸೈಡ್ ಆಕ್ಸರ್‍ ಆಗಿ ಸಿನೆಮಾ ರಂಗಕ್ಕೆ ಎಂಟ್ರಿ ಕೊಟ್ಟರು. ಆದರೆ ಆಕೆ ಅಂದುಕೊಂಡಷ್ಟು ಸಕ್ಸಸ್ ಆಗಲಿಲ್ಲ. ಬಳಿಕ ಪ್ರವೈಟ್ ಕಂಪನಿಯೊಂದರಲ್ಲೂ ಸಹ ನಟಿ ಕೆಲಸ ಮಾಡಿದ್ದರಂತೆ. ತಮ್ಮ ಕುಟುಂಬಕ್ಕಾಗಿ ತುಂಬಾ ಕಷ್ಟಪಟ್ಟಿದ್ದಾರೆ ಅನಸೂಯ, ಇನ್ನೂ ಆಕೆಯ ಪತಿಯ ಸಹಕಾರದೊಂದಿಗೆ ಪುನಃ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದರು. ಅನಸೂಯ್ ಗೆ ತೆಲುಗು ಜಬ್ಬರ್‍ ದಸ್ತ್ ಕಾರ್ಯಕ್ರಮ ಖ್ಯಾತಿ ತಂದುಕೊಟ್ಟ ಶೋ. ಇದರ ಮೂಲಕವೇ ಆಕೆ ಹೆಚ್ಚು ಪ್ಯಾಪುಲರ್‍ ಆದರು. ಬಳಿಕ ಸಿನೆಮಾಗಳಲ್ಲೂ ಸಹ ಚಾನ್ಸ್ ಗಿಟ್ಟಿಸಿಕೊಂಡರು. ಒಂದು ಕಡೆ ಟೆಲಿವಿಜನ್ ಶೋಗಳು ಮತ್ತೊಂದು ಕಡೆ ಸಿನೆಮಾ ಹೀಗೆ ಬ್ಯುಸಿಯಾಗಿದ್ದಾರೆ ಅನಸೂಯ.

ನಟಿ ಅನಸೂಯಗೆ ರಂಗಸ್ಥಳಂ ಸಿನೆಮಾದ ಮೂಲಕ ಹೆಚ್ಚು ಫೇಮ್ ಬಂದಿದೆ. ಇನ್ನೂ ಕೆಲವೊಂದು ಲೇಟಿ ಓರಿಯೆಂಟೆಡ್ ಸಿನೆಮಾಗಳಲ್ಲೂ ಸಹ ನಟಿ ಅನಸೂಯ ಬಣ್ಣ ಹಚ್ಚಿ ಪ್ರಶಂಸೆಗೆ ಗುರಿಯಾಗಿದ್ದಾರೆ. ಇನ್ನೂ ಸೂಪರ್‍ ಡೂಪರ್‍ ಹಿಟ್ ಆದ ಪುಷ್ಪ ಸಿನೆಮಾದಲ್ಲಿ ಅನಸೂಯ ದಾಕ್ಷಾಯನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಪುಷ್ಪ 2 ಸಿನೆಮಾದಲ್ಲೂ ಸಹ ನಟಿ ಅನಸೂಯ ಮತಷ್ಟು ಪವರ್‍ ಪುಲ್ ಆಗಿ ಕಾಣಿಸಿಕೊಳ್ಳಲಿದ್ದಾರಂತೆ. ಇನ್ನೂ ನಟಿ ಅನಸೂಯ ಕೆಲವೊಂದು ಪೊಟೋಗಳನ್ನು ಶೇರ್‍ ಮಾಡಿದ್ದು, ನಲವತ್ತು ವಯಸ್ಸದಾರೂ ಸಹ ತಮ್ಮ ಬ್ಯೂಟಿ ಮೂಲಕ ಅನೇಕ ಹುಡುಗರನ್ನು ಆಕರ್ಷಿಸಿಸುವಂತೆ ಮಾಡಿದ್ದಾರೆ. ಆಕೆಯ ಡಿಫರೆಂಟ್ ಆಂಗಲ್ ಪೊಟೋಗಳಿಗೆ ಯುವಜನತೆ ಫಿದಾ ಆಗಿದ್ದಾರೆ.

Previous articleನಂದಮೂರಿ ಬಾಲಕೃಷ್ಣ ರವರ NBK107 ಸಿನೆಮಾದಲ್ಲಿ ಹಾಟ್ ಬ್ಯೂಟಿಯೊಂದಿಗೆ ಸ್ಪೇಷಲ್ ಸಾಂಗ್…!
Next articleನಟಿ ಸಿರತ್ ಕಪೂರ್ ಸಂಪೂರ್ಣವಾಗಿ ಬದಲಾಗಿದ್ದಾರೆ.. ಎಲ್ಲರಿಗೂ ಶಾಕ್ ಕೊಟ್ಟ ಸಿರತ್ ಕಪೂರ್…