ಜಬರ್ದಸ್ಥ್ ಶೋ ಗೆ ಗುಡ್ ಬೈ ಹೇಳಿದ ಅನಸೂಯ ವೇಶ್ಯೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ…!

ಕಿರುತೆರೆಯ ಮೂಲಕವೇ ದೊಡ್ಡ ಕ್ರೇಜ್ ದಕ್ಕಿಸಿಕೊಂಡ ನಟಿ ಅನಸೂಯ ಭಾರದ್ವಜ್ ಇತ್ತೀಚಿಗೆ ಸಿನೆಮಾಗಳಲ್ಲೂ ಸಹ ಕಾಣಿಸಿಕೊಳ್ಳುತ್ತಾ ತಮ್ಮ ಕ್ರೇಜ್ ಅನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಗ್ಲಾಮರಸ್ ಲುಕ್ಸ್, ನಟನೆ, ತನ್ನ ಸೌಂದರ್ಯದೊಂದಿಗೆ ಕಡಿಮೆ ಸಮಯದಲ್ಲೇ ತಮ್ಮದೇ ಆದ ಅಭಿಮಾನಿ ಬಳಗವನ್ನು ದಕ್ಕಿಸಿಕೊಂಡರು. ಜೊತೆಗೆ ಸ್ಟಾರ್‍ ನಟರ ಅನೇಕ ಸಿನೆಮಾಗಳಲ್ಲಿ ಸಹ ನಟಿಯಾಗಿ ಕಾಣಸಿಕೊಂಡಿದ್ದಾರೆ. ರಂಗಸ್ಥಳಂ, ಪುಷ್ಪಾ ಮೊದಲಾದ ಹಿಟ್ ಸಿನೆಮಾಗಳಲ್ಲಿ ಕಾಣಿಸಿಕೊಂಡು ಮತಷ್ಟು ಕ್ರೇಜ್ ದಕ್ಕಿಸಿಕೊಂಡಿದ್ದಾರೆ. ಇತ್ತೀಚಿಗಷ್ಟೆ ಆಕೆ ಜಬರ್ದಸ್ಥ್ ಶೋಯಿಂದ ಹೊರ ಹೋಗುವುದಾಗಿ ಹೇಳಿದ್ದರು. ಇದೀಗ ಆಕೆ ಸಿನೆಮಾ ಒಂದರಲ್ಲಿ ವಿಭಿನ್ನ ಪಾತ್ರದಲ್ಲಿ ನಟಿಸಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

ತೆಲುಗು ಕಿರುತೆರೆಯಲ್ಲಿ ಅನೇಕ ಕಾರ್ಯಕ್ರಮಗಳಿಗೆ ಹೋಸ್ಟ್ ಮಾಡುತ್ತಾ ಖ್ಯಾತಿ ಪಡೆದುಕೊಂಡ ಈಕೆ ಹಾಟ್ ಬ್ಯೂಟಿ ಎಂತಲೂ ಸಹ ಕರೆಯಲಾಗುತ್ತದೆ. ಇನ್ನೂ ಸಿನಿರಂಗಕ್ಕೆ ತಡವಾಗಿಯೇ ಎಂಟ್ರಿ ಕೊಟ್ಟರೂ ಸಹ ಕಡಿಮೆ ಸಮಯದಲ್ಲೇ ದೊಡ್ಡ ದೊಡ್ಡ ಸ್ಟಾರ್‍ ನಟರ ಸಿನೆಮಾಗಳಲ್ಲಿ ನಟಿಸುವಂತಹ ಅವಕಾಶಗಳನ್ನು ಸಹ ಗಿಟ್ಟಿಸಿಕೊಂಡರು. ಇನ್ನೂ ಕೆಲವೊಂದು ಸಿನೆಮಾಗಳಲ್ಲಿ ಕಾಣಿಸಿಕೊಂಡ ಈಕೆ ಆಕೆಯ ನಟನೆ ಹಾಗೂ ಹಾಟ್ ನೆಸ್ ನೊಂದಿಗೆ ಎಲ್ಲರನ್ನೂ ಆಕರ್ಷಣೆ ಮಾಡಿದೆ. ಸದ್ಯ ಟಾಲಿವುಡ್ ನ ದೊಡ್ಡ ಡೈರೆಕ್ಟರ್‍ ಸಿನೆಮಾ ಒಂದರಲ್ಲಿ ಆಕೆ ವಿಭಿನ್ನ ಪಾತ್ರದಲ್ಲಿ ನಟಿಸಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ನಾಗ ಎಂಬ ಸಿನೆಮಾದಲ್ಲಿ ಕಾಣಿಸಿಕೊಂಡ ಈಕೆ ತುಂಬಾನೆ ಗ್ಯಾಪ್ ಬಳಿಕ ನ್ಯೂಸ್ ಆಂಕರ್‍ ಆಗಿ ಹಾಗೂ ತೆಲುಗು ಕಿರುತೆರೆಯ ಅನೇಕ ಕಾರ್ಯಕ್ರಮಗಳನ್ನು ಹೋಸ್ಟ್ ಮಾಡಿದ್ದರು. ಅದರಲ್ಲೂ ಆಕೆಗೆ ಜಬರ್ದಸ್ಥ್ ಶೋ ಮಾತ್ರ ತುಂಬಾನೆ ಪಾಪ್ಯುಲಾರಿಟಿ ತಂದುಕೊಟ್ಟಿತ್ತು. ಆದರೆ ಇದೀಗ ಜಬರ್ದಸ್ಥ್ ಶೋ ಗೂ ಬೈ ಹೇಳಿದ್ದಾರೆ.

ಸಾಲು ಸಾಲು ಸಿನೆಮಾಗಳೂ, ಶೋಗಳಲ್ಲಿ ಸಹ ಬ್ಯುಸಿಯಾಗಿರುವ ಅನಸೂಯ ತಮಗೆ ಚಾಲೆಂಜಿಂಗ್ ಪಾತ್ರಗಳು ಬಂದರೇ ಸಾಕು ಕೂಡಲೇ ಒಪ್ಪಿಗೆ ನೀಡುತ್ತಾರಂತೆ. ಇಂತಹ ಅನೇಕ ಪಾತ್ರಗಳಲ್ಲೂ ಸಹ ನಟಿಸಿ ಸೈ ಎನ್ನಿಸಿಕೊಂಡಿದ್ದಾರೆ. ಇನ್ನೂ ಇದೇ ಮಾದರಿಯಲ್ಲಿ ಈಕೆ ಮತ್ತೊಂದು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ವಿಚಾರ ಟಾಲಿವುಡ್ ನಲ್ಲಿ ಚಕ್ಕರ್‍ ಹೊಡೆಯುತ್ತಿದೆ.  ನಟಿ ಅನಸೂಯ ವೆಬ್ ಸಿರೀಸ್ ಒಂದರಲ್ಲಿ ವೇಶ್ಯೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಪ್ರಚಾರ ಜೋರಾಗಿಯೇ ನಡೆಯುತ್ತಿದೆ. ಗುರಜಾಡ ಅಪ್ಪಾರಾವ್ ಎಂಬುವವರ ಕನ್ಯಾ ಶುಲ್ಕಂ ಎಂಬ ಕೃತಿಯನ್ನು ಆಧರಿಸಿ ನಿರ್ಮಾಣ ಮಾಡುತ್ತಿರುವ ವೆಬ್ ಸಿರೀಸ್ ನಲ್ಲಿ ಅನಸೂಯ ಮಧುರವಾಣಿ ಎಂಬ ವೇಶ್ಯೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಜೋರಾಗಿಯೇ ಹರಿದಾಡುತ್ತಿದೆ. ಇನ್ನೂ ಶೀಘ್ರದಲ್ಲೇ ಈ ಸಿರೀಸ್ ಸೆಟ್ಟೇರಲಿದೆ ಎನ್ನಲಾಗುತ್ತಿದೆ. ಇನ್ನೂ ಈ ಸಿರೀಸ್ ತೆಲುಗು ಸೇರಿದಂತೆ ದಕ್ಷಿಣ ಭಾರತದ ಭಾಷೆಗಳಲ್ಲಿ ಬಿಡುಗಡೆ ಮಾಡುವ ಪ್ಲಾನ್ ಮಾಡಿದ್ದಾರಂತೆ.

ಇನ್ನೂ ಈ ವೆಬ್ ಸಿರೀಸ್ ಗೆ ಖ್ಯಾತ ನಿರ್ದೇಶಕ ಕ್ರಿಷ್ ಜಾಗರ್ಲಮೂಡಿ ಸ್ಕ್ರಿಪ್ಟ್ ಬರೆಯಲಿದ್ದಾರೆ ಎನ್ನಲಾಗುತ್ತಿದೆ. ಜೊತೆಗೆ ಆತನೇ ಸೀರೀಸ್ ಅನ್ನು ಸಹ ನಿರ್ಮಾಣ ಮಾಡಲಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೇ ನಟಿ ಅನಸೂಯ ರಂಗಮಾರ್ತಾಂಡ, ವೇದಾಂತಂ ರಾಘವಯ್ಯ, ಗಾಢ್ ಫಾದರ್‍, ಹರಿಹರ ವೀರಮಲ್ಲು ಮೊದಲಾದ ಸಿನೆಮಾಗಳಲ್ಲೂ ಸಹ ನಟಿಸಲಿದ್ದಾರೆ.

Previous articleಪ್ರೀತಿಯಿಂದ ಗಂಡನನ್ನು ಅಪ್ಪಿಕೊಂಡ ನಯನತಾರಾ, ನಯನ್ ಬಾಹುಬಂಧಗಳಲ್ಲಿ ಬಂಧಿಯಾದ ವಿಕ್ಕಿ…!
Next articleಸ್ವಿಮ್ಮಿಂಗ್ ಪೂಲ್ ನಲ್ಲಿ ಹಾಟ್ ಪೋಸ್ ಕೊಟ್ಟ ಸ್ಯಾಂಡಲ್ ವುಡ್ ನಟಿ ರಾಗಿಣಿ..!