ಚೆನೈ: 80 ರ ದಶಕದಲ್ಲಿ ದಕ್ಷಿಣ ಭಾರತದ ಹಾಟ್ ನಟಿ ಎಂದೇ ಪ್ರಸಿದ್ದವಾದ ಸಿಲ್ಕ್ ಸ್ಮಿತಾ ಬಯೋಪಿಕ್ ಚಲನಚಿತ್ರದ ರೂಪದಲ್ಲಿ ತೆರೆ ಮೇಲೆ ಬರುತ್ತಿದ್ದು, ಈ ಚಿತ್ರದ ನಾಯಕಿಯಾಗಿ ತೆಲುಗು ಖ್ಯಾತ ನಟಿ ಹಾಗೂ ನಿರೂಪಕಿ ಅನಸೂಯಾ ಭಾರದ್ವಾಜ್ ನಟಿಸಲಿದ್ದಾರೆ ಎನ್ನಲಾಗುತ್ತಿದೆ.
ಇನ್ನೂ ಈ ಸಂದೇಹ ಬರುವುದಕ್ಕೆ 35 ವರ್ಷದ ಅನಸೂಯ ಭಾರಧ್ವಜ್ ಪೊಟೋವೊಂದನ್ನು ಹಂಚಿಕೊಂಡಿದ್ದು, ಆ ಪೋಟೊದಲ್ಲಿ ಸಿಲ್ಕ್ ಸ್ಮಿತಾ ರವರಂತೆ ಕಾಣಿಸಿಕೊಂಡಿದ್ದಾರೆ. ಜೊತೆಗೆ ಈ ಪೋಟೋಗೆ ಸಿಲ್ಕ್ ಸ್ಮಿತಾ ರವರೇ ಸ್ಪೂರ್ತಿ ಎಂದು ಹೇಳಿಕೊಂಡಿರುವುದು ಸಿಲ್ಕ್ ಸ್ಮಿತಾ ಬಯೋಪಿಕ್ ಚಿತ್ರದಲ್ಲಿ ನಟಿಸಲಿದ್ದಾರೆಯೇ ಎಂಬ ಅನುಮಾನ ಉಂಟಾಗಿದೆ. ಇದರ ಜೊತೆಗೆ ತಮಿಳಿನ ಖ್ಯಾತ ನಟ ವಿಜಯ್ ಸೇತುಪತಿ ಜೊತೆಗಿರುವ ಪೋಟೋವನ್ನು ಸಹ ಹಂಚಿಕೊಂಡಿದ್ದು, ತಮಿಳು ಚಿತ್ರರಂಗಕ್ಕೆ ಅನಸೂಯ ಎಂಟ್ರಿ ನೀಡಲಿದ್ದಾರೆ ಎಂಬ ಅನುಮಾನವೂ ಸಹ ಹುಟ್ಟಿಕೊಂಡಿದೆ.
ಆಂಧ್ರಪ್ರದೇಶದಲ್ಲಿ 1960ರಲ್ಲಿ ಹುಟ್ಟಿದ ಸಿಲ್ಕ್ ಸ್ಮಿತಾ, 16 ವರ್ಷಗಳಲ್ಲಿ ವಿವಿಧ ಚಿತ್ರರಂಗದ ೪೫೦ ಕ್ಕೂ ಅಧಿಕ ಸಿನೆಮಾಗಳಲ್ಲಿ ನಟಿಸಿ ದಾಖಲೆ ಬರೆದು, ದಕ್ಷಿಣ ಭಾರತದ ಬಹುಬೇಡಿಕೆಯ ನಟಿಯಾಗಿ ಮಿಂಚಿದರು. 1996ರಲ್ಲಿ ದುರದೃಷ್ಟಾವಶಾತ್ ಅವರು ಆತ್ಮಹತ್ಯೆ ಮಾಡಿಕೊಂಡರು.
ಕಾಲಿವುಡ್ ನ ಖ್ಯಾತ ನಿರ್ದೇಶಕ ಕೆ.ಎಸ್.ಮಣಿಕಂಠನ್ ಅವಳ್ ಅಪ್ಪಾಡಿಧಾನ್ ಎಂಬ ಟೈಟಲ್ ನಲ್ಲಿ ಸಿಲ್ಕ್ ಸ್ಮಿತಾ ಬಯೋಪಿಕ್ ಮಾಡುವುದಾಗಿ ಹೇಳಿಕೊಂಡಿದ್ದರು. ಪ್ರಾಯಶಃ ಇದೇ ಆ ಸಿನೆಮಾ ಇರಬಹುದೇ ಎಂಬ ಅನುಮಾನ ಸಹ ಉದ್ಬವವಾಗಿದೆ.
