ರೌಡಿ ಹಿರೋ ಜೊತೆಗಿನ ಅಮೆರಿಕಾ ಟೂರ್ ನಲ್ಲಿ ಕಳೆದ ಸಮಯವನ್ನು ಎಂದಿಗೂ ಮರೆಯಲ್ಲ ಎಂದ ಅನನ್ಯ…..

ಬಾಲಿವುಡ್ ನ ಬಹುಬೇಡಿಕೆ ನಟಿ ಅನನ್ಯಾ ಪಾಂಡೆ ಪೂರಿ ಜಗನ್ನಾಥ್ ನಿರ್ದೇಶನದಲ್ಲಿ ಲೈಗರ್‍ ಸಿನೆಮಾ ಮಾಡುತ್ತಿದ್ದಾರೆ. ಈಗಾಗಲೇ ಈ ಸಿನೆಮಾ ಫಸ್ಟ್ ಗ್ಲಿಂಪ್ಸ್, ಪೋಸ್ಟರ್‍, ಟೀಸರ್‍ ಗಳ ಮೂಲಕವೇ ದೊಡ್ಡ ಮಟ್ಟದಲ್ಲಿ ಹೆಸರು ಗಳಿಸಿಕೊಂಡಿರುವ ಜೊತೆಗೆ ಸಿನಿಮಾ ಮೇಲಿನ ನೀರಿಕ್ಷೆ ಸಹ ಹೆಚ್ಚಿಸಿದೆ. ಇತ್ತೀಚಿಗೆ ನಟ ವಿಜಯದೇವರಕೊಂಡ ಜೊತೆ ಅಮೇರಿಕಾದಲ್ಲಿ ಶೂಟಿಂಗ್ ತೆರಳಿದ್ದು, ಆ ಸಮಯವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ನಟಿ ಅನನ್ಯಾ ಪಾಂಡೆ ತಿಳಿಸಿದ್ದಾರೆ.

ಬಾಲಿವುಡ್ ಸಿನಿರಂಗದ ಖ್ಯಾತ ನಟ ಚುಂಕಿ ಪಾಂಡೆ ಪುತ್ರಿ ಅನನ್ಯಾ ಪಾಂಡೆ ಈಗಾಗಲೇ ಅನೇಕ ಹಿಟ್ ಸಿನೆಮಾಗಳ ಮೂಲಕ ದೊಡ್ಡ ಮಟ್ಟದಲ್ಲೇ ಖ್ಯಾತಿ ಪಡೆದುಕೊಂಡಿದ್ದಾರೆ. ಅತೀ ಕಡಿಮೆ ಸಮಯದಲ್ಲೇ ತಮ್ಮದೇ ಆದ ಸ್ಟಾರ್‍ ಡಮ್ ಅನ್ನು ಗಳಿಸಿಕೊಂಡಿದ್ದಾರೆ. ತಂದೆಯ ಹೆಸರಿನ ಮೂಲಕ ಇಂಡ್ರಸ್ಟಿಗೆ ಎಂಟ್ರಿ ಕೊಟ್ಟರೂ ಸಹ ಆಕೆ ತಮ್ಮ ಪ್ರತಿಭೆಯ ಮೂಲಕವೇ ಸ್ಟಾರ್‍ ಡಮ್ ಸಂಪಾದಿಸಿದ್ದಾರೆ. ಲೈಗರ್‍ ಸಿನೆಮಾ ಮೂಲಕ ಟಾಲಿವುಡ್ ರಂಗಕ್ಕೆ ಕಾಲಿಡುತ್ತಿದ್ದಾರೆ ಅನನ್ಯ ಪಾಂಡೆ. ಇನ್ನೂ ಈ ಸಿನೆಮಾ ಆಗಸ್ಟ್ ಮಾಹೆಯಲ್ಲಿ ಅದ್ದೂರಿಯಾಗಿ ಬಿಡುಗಡೆ ಸಹ ಆಗಲಿದೆ.

ಇನ್ನೂ ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ನಟಿ ಅನನ್ಯಾ ತಮಗೆ ಸಿನೆಮಾ ಮೇಲೆ ಇರುವ ನಂಬಿಕೆಯನ್ನು ಬಿಚ್ಚಿಟ್ಟಿದ್ದಾರೆ. ಈ ಸಿನೆಮಾದಲ್ಲಿ ಅನನ್ಯಾ ಪಾಂಡೆ ಪಾತ್ರ ಅತ್ಯಂತ ಪ್ರಮುಖವಾಗಿದೆ ಎಂಬುದು ಆಕೆಯ ಮಾತುಗಳಿಂದಲೇ ತಿಳಿದುಬಂದಿದೆ. ನಿರ್ದೇಶಕ ಪೂರಿ ಸರ್‍ ರವರ ನಿರ್ದೇಶನದಲ್ಲಿ ವಿಜಯ್ ದೇವರಕೊಂಡ ಜೊತೆ ನಟಿಸಿದ್ದು, ತುಂಬಾ ಸಂತಸ ತಂದಿದೆ. ವಿಜಯ್ ತುಂಬಾನೆ ಒಳ್ಳೆಯ ವ್ಯಕ್ತಿ. ಆತನೊಂದಿಗೆ ನನಗೆ ಸ್ನೇಹ ಏರ್ಪಟ್ಟಿದೆ. ಶೂಟಿಂಗ್ ಸಮಯದಲ್ಲಿ ತುಂಬಾ ಎಂಜಾಯ್ ಮಾಡುತ್ತಿದ್ದೆವು. ಶೂಟಿಂಗ್ ಸಮಯದಲ್ಲಿ ಬ್ರೇಕ್ ದೊರೆತರೇ ಸಾಕು ತುಂಬಾ ವಿಚಾರಗಳನ್ನು ಮಾತನಾಡುತ್ತಾ ಸಮಯ ಕಳೆಯುತ್ತಿದ್ದೆವು ಎಂದು ಹೇಳಿದ್ದಾರೆ ಅನನ್ಯಾ.

ಮುಂದುವರೆದು ಅಮೇರಿಕಾದಲ್ಲಿ ಶೂಟಿಂಗ್ ನಡೆಯುವ ಸಮಯದಲ್ಲಾದ ವಿಚಾರಗಳನ್ನೂ ಸಹ ನಟಿ ತಿಳಿಸಿದ್ದಾರೆ. ನಾನು ಎಂದಿಗೂ ಅಮೇರಿಕಾದಲ್ಲಿ ನಡೆದ ಶೂಟಿಂಗ್ ಶೆಡ್ಯೂಲ್ಡ್ ಮರೆಯುವುದಿಲ್ಲ. ಇಲ್ಲಿ ನಡೆದ ಶೂಟಿಂಗ್ ಸಮಯವನ್ನು ಪ್ರಿತಿಯೊಬ್ಬರು ಎಂಜಾಯ್ ಮಾಡಿದ್ದಾರೆ. ಇನ್ನೂ ಅಲ್ಲಿ ಕೆಲಸ ಮಾಡಿದವರ ಜೊತೆಗಿನ ಅನುಭವ ತುಂಬಾ ಚೆನ್ನಾಗಿತ್ತು. ಈಗಾಗಲೇ ಸಿನೆಮಾದಲ್ಲಿ ನನ್ನ ಪಾತ್ರದ ಶೂಟಿಂಗ್ ಮುಗಿಸಿದ್ದೇನೆ ಜೊತೆಗೆ ಡಬ್ಬಿಂಗ್ ಕೂಡ ಪೂರ್ಣಗೊಳಿಸಿದ್ದೇನೆ ಎಂದು ಅನನ್ಯಾ ತಿಳಿಸಿದ್ದಾರೆ.

Previous articleಸ್ನೇಹಕ್ಕಾಗಿ ಆತ್ಮಹತ್ಯೆಗೂ ಸಿದ್ದ ಎಂದ ನಟಿ ಮೌನಿ ರಾಯ್…
Next articleತಮ್ಮ ಸೌಂದರ್ಯದ ಮೂಲಕ ಆಕರ್ಷಿಸುತ್ತಿದ್ದಾರೆ ನಟಿ ಆಂಡ್ರಿಯಾ…