Film News

ಟ್ರೋಲ್ ಗಳಿಗೆ ಡೋಂಟ್ ಕೇರ್ ಎಂದ ಬಾಲಿವುಡ್ ನಟಿ

ಮುಂಬೈ: ಖ್ಯಾತ ಬಾಲಿವುಡ್ ನಟಿ ಅನನ್ಯಾ ಪಾಂಡೆ ಬಟ್ಟೆಯ ವಿಚಾರಕ್ಕೆ ಟ್ರೋಲ್ ಆಗಿದ್ದು, ಟ್ರೋಲಿಗರಿಗೆ ಖಡಕ್ ಉತ್ತರ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಸಕ್ರೀಯರಾಗಿರುವ ಅನನ್ಯಾ ಇನ್ಸ್ಟಾಗ್ರಾಮ್ ನಲ್ಲಿ ಪೋಟೊಗಳು ಷೇರ್ ಮಾಡುತ್ತಿರುತ್ತಾರೆ.

ಇತ್ತೀಚಿಗೆ ಸೆಲೆಬ್ರೆಟಿಗಳು ಅದರಲ್ಲೂ ಹೆಚ್ಚಾಗಿ ಟ್ರೋಲ್ ಗಳಿಗೆ ಗುರಿಯಾಗುತ್ತಿರುವುದು ಸಿನೆಮಾ ತಾರೆಯರು. ಅದೇ ರೀತಿ ಬಾಲಿವುಡ್ ನಟಿ ಅನನ್ಯಾ ಪಾಂಡೆ ಇನ್ಸ್ಟಾಗ್ರಾಮ್ ನಲ್ಲಿ ಹೆಚ್ಚು ಸಕ್ರೀಯರಾಗಿರುತ್ತಾರೆ. ಅವರು ತಮ್ಮ ಪೇಜ್ ನಲ್ಲಿ 15 ಮಿಲಿಯನ್ ಗೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದು, ತಾವು ಅಪ್ ಲೋಡ್ ಮಾಡುವ ಮುದ್ದಾದ ಪೋಟೋಗಳಿಗೆ ಸಖತ್ ಲೈಕ್ ಹಾಗೂ ಕಾಮೆಂಟ್ಸ್ ಗಳ ಜೊತೆಗೆ ಟೀಕೆಗಳು ಟ್ರೋಲ್ ಗಳು ಸಹ ಹೆಚ್ಚಾಗಿ ಬರುತ್ತವೆ.

ಇನ್ನೂ ಈ ಕುರಿತು ನಟಿ ಕರೀನಾ ಕಪೂರ್ ನಡೆಸಿಕೊಡವ ಖಾಸಗಿ ಶೋ ಒಂದರಲ್ಲಿ ಈ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಾನು ಯಾವುದೇ ರೀತಿಯ ಪೋಟೋಗಳನ್ನು ಷೇರ್ ಮಾಡಿದರೂ ಟ್ರೋಲ್ ಮಾಡುವುದನ್ನು ಬಿಡುವುದಿಲ್ಲ. ಅದಕ್ಕಾಗಿ ನಾನು ನನ್ನಿಷ್ಟದ ಬಟ್ಟೆಗಳನ್ನು ಧರಿಸುವುದನ್ನು ಬಿಡುವುದಿಲ್ಲ. ನನಗೆ ಎಲ್ಲಿಯವರೆಗೂ ಕಂಫರ್ಟ್ ಅನ್ನಿಸುತ್ತದೆಯೋ ಅಲ್ಲಿಯವರೆಗೂ ಬೇಕಾದ ಬಟ್ಟೆಗಳನ್ನು ಧರಿಸುತ್ತೇನೆ. ಇನ್ಸ್ಟಾ ಗ್ರಾಮ್ ಗೆ ಹಾಕಲು ಒಳ್ಳೆಯ ಪೋಟೋಗಳು ಬೇಕು, ಟ್ರೋಲ್ ಗಳ ಬಗ್ಗೆ ಡೋಂಟ್ ಕೇರ್ ಎಂದಿದ್ದಾರಂತೆ.

Trending

To Top