Karnataka

ಕರೋನ ಗಿರೋನ ಏನು ಇಲ್ಲ! ಮಾಸ್ಕ್ ಹಾಕಿದವರೆಲ್ಲ ಮಂ#ಗಗಳು ಎಂದ ಅನಂತ್ ಕುಮಾರ್ ಹೆಗ್ಡೆ! ವಿಡಿಯೋ ನೋಡಿ

ಅನಂತ್ ಕುಮಾರ್ ಹೆಗಡೆ ಅವರು BJP ಪಕ್ಷದ ರಾಜಕಾರಣಿ ಹಾಗು ಬಹಳ ವರ್ಷಗಳಿಂದ ರಾಜಕಾರಣದಲ್ಲಿ ಸಕ್ರೀಯವಾಗಿ ಕೆಲಸ ಮಾಡುತ್ತಿದ್ದಾರೆ. ಅನಂತ್ ಕುಮಾರ್ ಹೆಗ್ಡೆ ಅವರು ಸದಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿ ಅಲ್ಲಿ ಇರುತ್ತಾರೆ! ಕರಾವಳಿ ಭಾಗದವರಾದ ಅನಂತ್ ಕುಮಾರ್ ಹೆಗ್ಡೆ ಅವರು, ತಮ್ಮ ಭಾಷಣಗಳಿಗೆ ಬಹಳ ಫೇಮಸ್! ಇವರ ಪ್ರತಿಯೊಂದು ಭಾಷಣಗಳು ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಫೇಮಸ್ ಹಾಗು ಭಾರಿ ಸುದ್ದಿಯನ್ನು ಮಾಡಿದೆ! ನೆನ್ನೆ ಅಷ್ಟೇ ಅನಂತ್ ಕುಮಾರ್ ಹೆಗ್ಡೆ ಅವರು ಒಂದು ಭಾಷಣದಲ್ಲಿ “ಈ ಕರೋನ ಗಿರೋನ ಏನು ಇಲ್ಲ, ಇವೆಲ್ಲ ಏನು ಇಲ್ಲ, ಮಾಸ್ಕ್ ಹಾಕಿದವರೆಲ್ಲ ಮಂಗಗಳು” ಎಂದು ಹೇಳಿದ್ದಾರೆ! ಅನಂತ್ ಕುಮಾರ್ ಹೆಗ್ಡೆ ಅವರು ಏನ್ ಹೇಳಿದ್ದಾರೆ ಈ ಕೆಳಗಿನ ವಿಡಿಯೋ ಒಮ್ಮೆ ನೋಡಿ

ಕರ್ನಾಟಕದ ಬಿಎಸ್‍ಎನ್‍ಎಲ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವವರು ದೇಶದ್ರೋಹಿಗಳು. ಹೆಚ್ಚಿನ ದೇಶದ್ರೋಹಿಗಳೇ ಆ ಸಂಸ್ಥೆಯಲ್ಲಿ ಸೇರಿಕೊಂಡಿದ್ದಾರೆ ಎಂದು ಕೇಂದ್ರದ ಮಾಜಿ ಸಚಿವ ಮತ್ತು ಸಂಸದರಾದ ಅನಂತಕುಮಾರ್ ಹೆಗ್ಡೆ ಅವರು ಸಿಟ್ಟನ್ನು ವ್ಯಕ್ತಪಡಿಸುವ ಮೂಲಕ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. ಕಾರವಾರ ಜಿಲ್ಲೆಯ ಕುಮಟಾ ತಾಲೂಕಿನಲ್ಲಿ ನಿನ್ನೆ ಸಂಸದರ ಹಾಗೂ ಕೇಂದ್ರ ಸರ್ಕಾರದ ವಿವಿಧ ಕೆಲಸಗಳ ಅಭಿವೃದ್ಧಿಗಳಿಗೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅನಂತ್ ಕುಮಾರ್ ಅವರು ಬಿಎಸ್‍ಎನ್‍ಎಲ್ ಅನ್ನು ಸರಿಪಡಿಸಲು ನಮ್ಮ ಸರ್ಕಾರದಿಂದಲೂ ಸಾಧ್ಯವಾಗಲಿಲ್ಲ. ಸಮರ್ಪಕವಾದ ಒಳ್ಳೆಯ ಸೇವೆಯನ್ನು ಜನರಿಗೆ ಒದಗಿಸಲು ಬಿಎಸ್‍ಎನ್‍ಎಲ್ ಸಂಸ್ಥೆಯ ಕೆಲಸಗಾರರಿಂದ ಸಾಧ್ಯವಾಗುವುದಿಲ್ಲ. ಈಗಾಗಲೇ 85 ಸಾವಿರ ಅಧಿಕಾರಿಗಳನ್ನು ಮನೆಗೆ ಕಳುಹಿಸಲಾಗಿದೆ, ಮುಂದಿನ ದಿನಗಳಲ್ಲಿ ಮತ್ತಷ್ಟು ಕೆಲಸಗಾರರನ್ನು ಮನೆಗೆ ಕಳುಹಿಸುತ್ತೇವೆ ಎಂದಿದ್ದಾರೆ.

ಬೇಕಾದ ಎಲ್ಲ ಸೌಕರ್ಯಗಳು ಇದ್ದರೂ ಸಂಸ್ಥೆಯ ಕೆಲಸಗಾರರು ಸರಿಯಾಗಿ ಕೆಲಸ ಮಾಡುವುದಿಲ್ಲ, ಮುಂದಿನ ದಿನಗಳಲ್ಲಿ ಬಿಎಸ್‍ಎನ್‍ಎಲ್ ಸಂಸ್ಥೆಯನ್ನು ಸ್ಥಗಿತಗೊಳಿಸುತ್ತೇವೆ ಎಂಬ ಶಾಕಿಂಗ್ ಹೇಳಿಕೆಯನ್ನು ನೀಡಿದ್ದಾರೆ. ಬಿಎಸ್‍ಎನ್‍ಎಲ್ ಎಂಬ ಸಂಸ್ಥೆಯನ್ನು ಖಾಸಗೀಕರಣ ಗೊಳಿಸುತ್ತೇವೆ ಎಂದು ಹೇಳುವ ಮೂಲಕ ತಮ್ಮದೇ ಸರ್ಕಾರದ ಅಧೀನದಲ್ಲಿರುವ ಬಿಎಸ್‍ಎನ್‍ಎಲ್ ಸಂಸ್ಥೆ ವಿರುದ್ಧ ಸಿಡಿಮಿಡಿಗೊಂಡಿದ್ದಾರೆ.ಬಿ.ಎಸ್.ಎನ್. ಎಲ್ ಸಂಸ್ಥೆಯ ಕಾರ್ಯ ವೈಖರಿ ವಿರುದ್ಧ ಅಸಮದಾನ ವ್ಯಕ್ತಪಡಿಸಿದ್ದಾರೆ. ಕಳೆದ ತಿಂಗಳು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಂಸದ ಅನಂತಕುಮಾರ್ ಹೆಗ್ಡೆ ಅವರು ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿಎಸ್‍ಎನ್‍ಎಲ್ ಅಧಿಕಾರಿಗಳ ಸಭೆ ನಡೆಸಿದ್ದರು, ಜಿಲ್ಲೆಯಲ್ಲಿ ನೆಟ್‍ವರ್ಕ್ ಸಮಸ್ಯೆ ಹಾಗೂ ಪಂಚಾಯಿತಿಗಳಿಗೆ ಇಂಟರ್‍ನೆಟ್ ಸೇವೆಗಳನ್ನು ಒದಗಿಸಿರುವುದಾಗಿ ಸುಳ್ಳು ಮಾಹಿತಿ ನೀಡಿದ್ದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.

ಅಲ್ಲದೆ ಸಭೆಯಲ್ಲೇ ಪ್ರತಿಭಟನೆ ಮಾಡಿ, ಒಂದು ವಾರದ ವರೆಗೆ ಸಮಯ ನೀಡಿ ಹೋಗಿದ್ದರು. ಆದರೆ ಅಧಿಕಾರಿಗಳು ಮಾತ್ರ ಜಿಲ್ಲೆಯಲ್ಲಿ ನಡೆಯಬೇಕಾಗಿದ್ದ ಯಾವುದೇ ಕೆಲಸಗಳನ್ನು ಮಾಡದೇ ಹಾಗೆಯೇ ಬಿಟ್ಟಿದ್ದರು. ಹೀಗಾಗಿ ಮತ್ತೆ ಸಭೆ ಕರೆದು ಅಸಮಾಧಾನ ಹೊರಹಾಕಿದ್ದರು ಅನಂತ್ ಕುಮಾರ್ ಹೆಗ್ಡೆ. ಇದರ ಬೆನ್ನಲ್ಲೇ ಇಂದು ಬಿಎಸ್‍ಎನ್‍ಎಲ್ ನೆಟ್‍ವರ್ಕ್ ಸಮಸ್ಯೆ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

Trending

To Top