Film News

ಹಿರಿಯನಟ ಅನಂತ್ ನಾಗ್ ಅವರ ಪರ ನಿಂತ ರಾಕಿಂಗ್ ಸ್ಟಾರ್ ಯಶ್

ಕಳೆದ ಎರಡು ದಿನಗಳಿಂದ ಕನ್ನಡ ಚಿತ್ರರಂಗದ ಜನಪ್ರಿಯ ನಟ ಅನಂತ್ ನಾಗ್ ಅವರಿಗೆ ಪದ್ಮ ಪ್ರಶಸ್ತಿ ನೀಡಬೇಕೆಂಬ ಕೂಗು ಸಾಮಾಜಿಕ ಜಾಲತಾಣಗಳಲ್ಲಿ ಎದ್ದಿದೆ.ಇದೀಗ ಈ ಕೂಗಿಗೆ ರಾಕಿಂಗ್ ಸ್ಟಾರ್ ಯಶ್ ಕೂಡ ಧನಿ ಗೂಡಿಸಿದ್ದಾರೆ.ನಟ ರಾಕಿಂಗ್ ಸ್ಟಾರ್ ಯಶ್ ಅವರು ಅನಂತ್ ನಾಗ್ ಅವರಿಗೆ ಪದ್ಮ ಪ್ರಶಸ್ತಿ ನೀಡಬೇಕೆಂಬ ಅಭಿಯಾನಕ್ಕೆ ಬೆಂಬಲ ಸೂಚಿಸುವ ಮೂಲಕ ಕೈ ಜೋಡಿಸಿದ್ದಾರೆ.

ಈ ಸಂಬಂಧ ಅನಂತ್ ನಾಗ್ ಜೊತೆಗಿರುವ ತಮ್ಮ ಫೋಟೋದೊಂದಿಗೆ ಬರೆದುಕೊಂಡು ಟ್ವಿಟ್ ಮಾಡಿ ನಟನೆಗೆ ಪದ್ಮ ಪ್ರಶಸ್ತಿ ನೀಡುವಂತೆ ಒತ್ತಾಯಿಸಿದ್ದಾರೆ.ಅನಂತ್ ನಾಗ್ ಅವರು ಕಂಡು ನನಗೆ ಆಕ್ಟಿಂಗ್ ಇಸ್ ಬಿಹೆವಿಂಗ್ ಎಂದು ಹೇಳಿದ್ದರು ಅವರು ಹೇಳಿರುವ ಈ ಮಾತು ನನ್ನ ಮನಸ್ಸಲ್ಲಿ ಈಗಲೂ ಇದೆ. ಅನಂತ್ ನಾಗ್ ಅವರ ಸಿನಿಮಾಗಳನ್ನು ನೋಡಿ ನಾನು ಬೆಳೆದವನು ನಾನು, ಸಿನಿಮಾದಲ್ಲಿ ಅವರ ಹಾಸ್ಯಗಳನ್ನು ನೋಡಿ ನಾನು ನಕ್ಕಿದ್ದೇನೆ ಹಾಗೆಯೇ ಅವರು ಕಣ್ಣೀರು ಹಾಕಿದಾಗ ನಾನು ಅತ್ತಿದ್ದೇನೆ.

ಅಲ್ಲದೆ ಅವರು ನಟಿಸಿರುವ ಹಾರರ್ ದೃಶ್ಯಗಳನ್ನು ನೋಡಿ ಭಯ ಪಟ್ಟಿದ್ದೇನೆ ಕೂಡ ಅನಂತ್ ನಾಗ್ ಜೊತೆ ತೆರೆ ಹಂಚಿಕೊಳ್ಳಬೇಕು ಎಂಬ ಮಹದಾಸೆ ನನ್ನದಾಗಿತ್ತು ಎವರ್ ಗ್ರೀನ್ ಆಕ್ಟರ್ ಎನ್ನುವುದಕ್ಕೆ ಅವರೇ ಉತ್ತಮ ನಿದರ್ಶನ.ಅವರ ಚಿತ್ರಗಳು ಅವರ ನಟನೆ ಸೃಜನಶೀಲತೆ ಇಂದಿಗೂ ಪ್ರಸ್ತುತ ಅವರ ಜೊತೆ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಅಭಿನಯಿಸುವ ಅವಕಾಶ ನನಗೆ ಸಿಕ್ಕಿತು.

ಅವರಲ್ಲಿರುವ ಅಪಾರ ಜ್ಞಾನ ನನಗೆ ಪ್ರೇರಣೆಯಾಗಿದೆ ಅನಂತ್ ನಾಗ್ ಎಂದೆಂದಿಗೂ ಕರ್ನಾಟಕದ ಹೆಮ್ಮೆ ಅನಂತ್ ನಾಗ್ ಬರಿ ನಟ ಮಾತ್ರ ಅಲ್ಲ ಭಾರತೀಯ ಚಿತ್ರರಂಗದ ಅಭಿಜ್ಞ ಈಗಾಗಿ ಪದ್ಮ ಪ್ರಶಸ್ತಿಗೆ ಇವರಿಗಿಂತ ಉತ್ತಮರು ಯಾರು ಎಂದು ಯಶ್ ಟ್ವಿಟ್ ನಲ್ಲಿ ತಿಳಿಸಿದ್ದಾರೆ.

Trending

To Top