Kannada Serials

ಕನ್ನಡ ನಟಿ ಅಮೂಲ್ಯ ಅವರ ಸಹೋದರಿ ಕಿರುತೆರೆಯಲ್ಲಿ ಬಹಳ ದೊಡ್ಡ ನಟಿ! ಯಾರು ಗೊತ್ತಾ

ಚಂದನವನದ ಗೋಲ್ಡನ್ ಕ್ವೀನ್ ನಟಿ ಅಮೂಲ್ಯ. ಪರ್ವ ಸೈನಿಕ ಮೂಲಕ ಬಾಲನಟಿಯಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ ನಟಿ ಅಮೂಲ್ಯ ಬಾಲನಟಿಯಾಗಿಯೇ ಹಲವಾರು ಸಿನಿಮಾಗಳಲ್ಲಿ ಕನ್ನಡದ ಮೇರು ಕಲಾವಿದರೊಡನೆ ನಟಿಸಿದ್ದರು.ಆನಂತರ 2007 ರಲ್ಲಿ 14ನೇ ವಯಸ್ಸಿನಲ್ಲಿ ಚೆಲುವಿನ ಚಿತ್ತಾರ ಸಿನಿಮಾ ಮೂಲಕ ನಾಯಕಿಯಾಗಿ ಎಂಟ್ರಿ ಕೊಟ್ಟರು. ಈ ಮೂಲಕ ಅತಿ ಚಿಕ್ಕ ವಯಸ್ಸಿಗೆ ಹೀರೋಯಿನ್ ಆದ ನಟಿಯರ ಸಾಲಿಗೆ ಸೇರಿಕೊಂಡರು ಅಮೂಲ್ಯ. ಕಿರಿಯ ವಯಸ್ಸಿಗೆ ಹೀರೋಯಿನ್ ಆದ ಈ ನಟಿ ಸ್ಯಾಂಡಲ್ ವುಡ್ ನಲ್ಲಿ ತಮ್ಮದೇ ಮುಗ್ದತೆ ಮತ್ತು ಬಬ್ಲಿ ನೇಚರ್ ಇರುವ ಪಾತ್ರಗಳ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಗಳಿಸಿದ್ದಾರೆ.
ಅಭಿನಯದಲ್ಲಿ ಸಾಕಷ್ಟು ಸಕ್ಸಸ್ ಕಂಡ ನಟಿ ಅಮೂಲ್ಯ, ರಾಜಕರಾಣದ ಹಿನ್ನಲೆ ಇರುವ ಜಗದೀಶ್ ಅವರನ್ನು ಮದುವೆಯಾಗಿ ಸುಖಜೀವನ ನಡೆಸುತ್ತಿದ್ದಾರೆ. ಮದುವೆ ನಂತರ ಅಮೂಲ್ಯ ನಟಿಸಿಲ್ಲ. ಲಾಕ್ ಡೌನ್ ಸಮಯದಲ್ಲಿ ಈ ಪತಿ ಪತ್ನಿ ಬಡವರಿಗೆ ಬಹಳ ಸಹಾಯ ಮಾಡುತ್ತಿದ್ದಾರೆ. ನಿಮಗೆ ಗೊತ್ತಾ ಅಮೂಲ್ಯ ಅವರಿಗೆ ಒಬ್ಬ ತಂಗಿ ಇದ್ದಾಳೆ .. ಅವರು ಸಹ ಒಬ್ಬ ನಟಿ.. ಅವರು ಯಾರು ಅಂತ ತಿಳಿಯಲು ಮುಂದೆ ಓದಿ.. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ಗೀತಾ ಕೂಡ ಒಂದು. ಶ್ರೀಮಂತ ಮನೆತನದ ಹುಡುಗ ಹಾಗೂ ಹೂಮಾರುವ ಹುಡುಗಿ, ಬಡತನವಿದ್ದರೂ ಸ್ವಾಭಿಮಾನದಿಂದ ಇರುವ ಹುಡುಗಿ. ಇವರಿಬ್ಬರ ನಡೆವೆ ನಡೆಯುವ ಜಗಳ ಇತ್ಯಾದಿಗಳ ಕಥೆ ಗೀತ. ಕೊನೆಗೆ ಇವರಿಬ್ಬರ ಸಂಬಂಧ ಏನಾಗಲಿದೆ ಎಂಬುದು ಕಥೆ..
ಈ ಧಾರಾವಾಹಿಯ ನಾಯಕಿ, ಗೀತಾ ಪಾತ್ರಧಾರಿ ನಟಿ ಭವ್ಯ ಗೌಡ ಅಮೂಲ್ಯ ಅವರ ಕಸಿನ್ ಅಂತೆ.. ಈ ಕುರಿತು ಸ್ವತಃ ಅಮೂಲ್ಯ ಅವರೇ ಒಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ..ಗೀತಾ ಧಾರಾವಾಹಿಯಲ್ಲಿ ಗೀತಾ ಪಾತ್ರ ಮಾಡುತ್ತಿರುವವಳು ನನ್ನ ಕಸಿನ್ ತಂಗಿ. ಆಕೆ ಅದ್ಭುತ ಕೆಲಸ ಮಾಡುತ್ತಿದ್ದಾಳೆ. ನಾವೆಲ್ಲ ಕುಟುಂಬದವರೂ 8 ಗಂಟೆ ಆದ್ರೆ ಸಾಕು ಸೀರಿಯಲ್ ನೋಡೋಕೆ ಶುರು ಮಾಡುತ್ತೇವೆ. ಪ್ರತಿದಿನವೂ ವಿಭಿನ್ನವಾದ ಕ್ಯೂರಿಯಾಸಿಟಿ ಬಿಲ್ಡ್ ಮಾಡುತ್ತಿದೆ.. ನೀವೆಲ್ಲರೂ ಕೂಡ ತಪ್ಪದೆ ನೋಡಿ..” ಎಂದಿದ್ದಾರೆ ಅಮೂಲ್ಯ. ಗೀತಾ ಧಾರಾವಾಹಿಯನ್ನು ಕೆ.ಎಸ್.ರಾಮ್ ಜಿ ನಿರ್ದೇಶನ ಮಾಡುತ್ತಿದ್ದಾರೆ. ಈ ಹಾಡಿನ ಶೀರ್ಷಿಕೆ ಗೀತೆಗೆ ಜನಪ್ರಿಯ ಗಾಯಕ ಎಸ್.ಪಿ.ಬಿ ಧ್ವನಿ ನೀಡಿದ್ದಾರೆ. ಮುಖ್ಯಪಾತ್ರಧಾರಿಗಳಾದ ಧನಶ್ ಗೌಡ ಮತ್ತು ಭವ್ಯ ಗೌಡ ಅವರ ಜೋಡಿ ಎಲ್ಲರ ಮೆಚ್ಚುಗೆ ಗಳಿಸಿದೆ.

Trending

To Top