ವಿಚ್ಛೇದನದ ನಂತರ ಪತ್ನಿ ಜೊತೆ ಟೇಬಲ್ ಟೆನ್ನಿಸ್ ಆಡಿದ ಅಮೀರ್ ಖಾನ್

ಬಾಲಿವುಡ್ ಮಿಸ್ಟರ್ ಪರ್ಫೆಕ್ಟ್ ನಟ ಅಮೀರ್ ಖಾನ್ ವಿಚ್ಛೇದನದ ಬಳಿಕ ಮಾಜಿ ಪತ್ನಿ ಕಿರಣ್ ರಾವ್ ಜೊತೆ ಟೇಬಲ್ ಟೆನ್ನಿಸ್ ಆಟವನ್ನ ಆಡಿದ್ದಾರೆ. ಸದ್ಯ ಇವರಿಬ್ಬರ ಫೋಟೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ನಟ ಅಮೀರ್ ಖಾನ್ ವಿಚ್ಛೇಧನ ನೀಡಿದ ಬಳಿಕ ಮಾಜಿ ಪತ್ನಿ ಕಿಟನ್ ರಾವ್ ಜೊತೆ ಹೆಚ್ಚಾಗಿ ಕ್ಯಾಮೆರಾ ಮುಂದೆ ಕಾಣಿಸಿಕೊಳ್ಳುತ್ತಿದ್ದಾರೆ.

ಕೆಲವು ದಿನದ ಹಿಂದೆ ಅಷ್ಟೇ ವಿಚ್ಛೇಧನ ಪಡೆದ ಈ ದಂಪತಿ ಮಗ ಆಜಾದ್ ಗೆ ಪೋಷಕರಾಗಿ ಮುಂದುವರೆದಿದ್ದಾರೆ. ಸದ್ಯ ಲಾಲ್ ಚಡ್ಡಾ ಸಿನಿಮಾದಲ್ಲಿ ಬ್ಯುಸಿಯಾಗಿರುವ ಅಮೀರ್ ಖಾನ್ ಜೊತೆ ಮಾಜಿ ಪತ್ನಿ ಕಿರಣ್ ರಾವ್ ಹಾಗೂ ಆಜಾದ್ ಕೂಡ ಶೂಟಿಂಗ್ ಸೆಟ್ ನಲ್ಲಿ ಇದ್ದಾರೆ. ಈ ಸಿನಿಮಾದ ಚಿತ್ರೀಕರಣ ಲಡಾಖ್ ನಲ್ಲಿ ನಡೆಯುತ್ತಿದ್ದು ಶೂಟಿಂಗ್ ವೇಳೆ ಕೊಂಚ ಫ್ರೀ ಆದ ಅಮೀರ್ ಚಿತ್ರ ತಂಡದವರಿಗೆ ಟೇಬಲ್ ಟೆನ್ನಿಸ್ ಆಟವನ್ನ ಅಯೋಜಿಸಿದ್ದಾರೆ.

ಈ ವೇಳೆ ಅಮೀರ್ ಹಾಗೂ ಕಿರಣ್ ರಾವ್ ಇಬ್ಬರು ಎದುರಾಗಿ ಟೇಬಲ್ ಟೆನ್ನಿಸ್ ಆಟವನ್ನ ಆಡಿ ಸಂಭ್ರಮಿಸಿದ್ದಾರೆ.ಅಲ್ಲದೆ ಲಾಲ್ ಚಡ್ಡಾ ಸಿನಿಮಾದಲ್ಲಿ ಪ್ರಮುಖ ಪಾತ್ರ ಅಭಿನಯಿಸುತ್ತಿರುವಂತಹ ಟಾಲಿವುಡ್ ನಟ ನಾಗ ಚೈತನ್ಯ ಕೂಡ ಟೇಬಲ್ ಟೆನ್ನಿಸ್ ಆಟ ಅಡಿದ್ದಾರೆ.ವಿಚ್ಛೇಧನ ನಂತರವೂ ಅಮೀರ್ ಖಾನ್ ಮತ್ತು ಕಿರಣ್ ರಾವ್ ಆಟ ಆಡಿ ಸಂಭ್ರಮಿಸುತ್ತಿರುವುದನ್ನು ಕಂಡು ಅಭಿಮಾನಿಗಳು ಫುಲ್ ಕುಶ್ ಆಗಿದ್ದಾರೆ.