Film News

ಅಮೀರ್ ಖಾನ್ ಕಾಣಿಸಿಕೊಳ್ಳಲಿದ್ದಾರೆ ಚೆಸ್ ಮಾಂತ್ರಿಕನ ಪಾತ್ರದಲ್ಲಿ!

ಮುಂಬೈ: ಬಾಲಿವುಡ್ ನ ಸ್ಟಾರ್ ನಟ ಅಮೀರ್ ಖಾನ್ ಇದೀಗ ಖ್ಯಾತ ಕ್ರೀಡಾಪಟುವಿನ ಪಾತ್ರವೊಂದರಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದ್ದು, ಭಾರತದ ಚೆಸ್ ಮಾಂತ್ರಿಕ, ಮಾಜಿ ವಿಶ್ವ ಚೆಸ್ ಚಾಂಪಿಯನ್ ವಿಶ್ವನಾಥನ್ ಆನಂದ್ ಬಯೋಪಿಕ್ ನಲ್ಲಿ ಅಮೀರ್ ಖಾನ್ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

ಸದ್ಯ ಬಾಲಿವುಡ್‌ನಲ್ಲಿ ಬಯೋಪಿಕ್‌ಗಳ ಸಿನೆಮಾಗಳು ಸಾಲು ಸಾಲಾಗಿ ಬರುತ್ತಿದೆ. ಈಗಾಗಲೇ ಕೆಲವೊಂದು ಬಯೋಪಿಕ್ ಆಧಾರಿತ ಸಿನೆಮಾಗಳು ರಿಲೀಸ್ ಆಗಿದ್ದು ಹಿಟ್ ಆಗಿದ್ದರೆ, ಕೆಲವೊಂದು ಫ್ಲಾಪ್ ಆಗಿದೆ. ಇನ್ನೂ ಕೆಲವು ಬಾಲಿವುಡ್ ನಿರ್ಮಾಪಕರು ಹಾಗೂ ನಿರ್ದೇಶಕರು ಕ್ರೀಡಾ ತಾರೆಗಳ ಜೀವನವನ್ನು ತೆರೆಗೆ ತರಲು ಮುಂದಾಗುತ್ತಿದ್ದಾರೆ. ಅಷ್ಟೇ ಅಲ್ಲದೇ ಸ್ಟಾರ್ ನಟರು ಸಹ ಕ್ರೀಡಾಪಟುಗಳ ಚಿತ್ರಗಳಲ್ಲಿ ನಟಿಸಲು ಉತ್ಸುಕರಾಗಿದ್ದಾರೆ ಎನ್ನಲಾಗುತ್ತಿದೆ. ಈ ಹಾದಿಯಲ್ಲಿ ಸ್ಟಾರ್ ನಟ ಅಮೀರ್ ಖಾನ್ ಚೆಸ್ ಮಾಂತ್ರಿಕ ವಿಶ್ವನಾಥನ್ ಆನಂದ್ ಪಾತ್ರದಲ್ಲಿ ನಟಿಸಲಿದ್ದಾರಂತೆ.

ಇನ್ನೂ ಈ ಚಿತ್ರವನ್ನು ಆನಂದ್ ಎಲ್ ರಾಯ್ ನಿರ್ದೇಶನ ಮಾಡುತ್ತಿದ್ದು, ವಿಶ್ವನಾಥನ್ ಆನಂದ್ ಬಳಿ ಅನೇಕ ನಿರ್ದೇಶಕರು ಅವರ ಬಯೋಪಿಕ್ ಸಿನೆಮಾ ಮಾಡಲು ಅನುಮತಿ ಕೋರಿದ್ದರಂತೆ. ಆದರೆ ಎಲ್ಲರಿಗೂ ನೋ ಎಂದು ಹೇಳಿದ ವಿಶ್ವನಾಥನ್ ರವರು ಆನಂದ್ ಎ ರಾಯ್ ರವರಿಗೆ ಒಕೆ ಹೇಳಿದ್ದಾರಂತೆ. ಸದ್ಯ ಅಮೀರ್ ಖಾನ್ ಲಾಲ್ ಸಿಂಗ್ ಛಡ್ಡಾ ಎಂಬ ಚಿತ್ರದಲ್ಲಿ ಬ್ಯುಸಿಯಾಗಿದ್ದು, ಇದಾದ ನಂತರ ಈ ಬಯೋಪಿಕ್ ನಲ್ಲಿ ಬಣ್ಣ ಹಚ್ಚುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಅಂದಹಾಗೆ ವಿಶ್ವನಾಥನ್ ಆನಂದ್ ಬಯೋಪಿಕ್ ಚಿತ್ರದಲ್ಲಿ ಅಮೀರ್ ಖಾನ್ ಗೂ ಮೊದಲೇ ಕಾಲಿವುಡ್ ಯುವನಟ ಧನುಷ್ ರವರನ್ನು ಆಯ್ಕೆ ಮಾಡಲಾಗಿತ್ತಂತೆ. ಆದರೆ ಚಿತ್ರವನ್ನು ನಿರ್ಮಾಣ ಮಾಡಲಿರುವ ಮಹಾವೀರ್ ಜೈನ್ ಅವರಿಗೆ ಧನುಷ್ ಆಯ್ಕೆ ಸರಿಬರದ ಕಾರಣ ಅಮೀರ್ ಖಾನ್ ರವರನ್ನು ಆಯ್ಕೆ ಮಾಡಲಾಗಿದೆಯಂತೆ. ಇನ್ನೂ ಅಮೀರ್ ಖಾನ್ ಸಹ ಒಪ್ಪಿಕೊಂಡಿದ್ದು, ಶೀಘ್ರವೇ ಚಿತ್ರ ಸೆಟ್ಟೇರಲಿದೆ ಎನ್ನಲಾಗುತ್ತಿದೆ.

Trending

To Top