Film News

ಅಮೇರಿಕಾ ಕ್ರೀಡಾಪಟು ಸಹ ಕೆಜಿಎಫ್-2 ಚಿತ್ರಕ್ಕಾಗಿ ಕಾಯುತ್ತಿದ್ದಾರಂತೆ!

ಬೆಂಗಳೂರು: ದೇಶದ ಚಿತ್ರರಂಗದಲ್ಲೇ ಇತಿಹಾಸ ಸೃಷ್ಟಿ ಮಾಡುತ್ತಿರುವ ಕೆಜಿಎಫ್-2 ಚಿತ್ರ ಈಗಾಗಲೇ ಜೋರಾಗಿ ಸದ್ದು ಮಾಡುತ್ತಿದೆ. ಇದೀಗ ಈ ಚಿತ್ರವನ್ನು ವೀಕ್ಷಣೆ ಮಾಡಲು ಅಮೇರಿಕಾ ಮೂಲದ ಖ್ಯಾತ ಕುಸ್ತಿಪಟು ವಿಲ್ಲಿ ಮ್ಯಾಕ್ ಚಿತ್ರವನ್ನು ವೀಕ್ಷಣೆ ಮಾಡಲು ಕಾಯುತ್ತಿದ್ದಾರಂತೆ.

ಕೆಜಿಎಫ್-2 ಚಿತ್ರ ಕರ್ನಾಟಕ ಮಾತ್ರವಲ್ಲದೇ ಇಡೀ ವಿಶ್ವದಲ್ಲಿಯೇ ಕ್ರೇಜ್ ಸೃಷ್ಟಿಸಿದೆ. ಇನ್ನೂ ಕೆಜಿಎಫ್-2 ಹವಾ ಜೋರಾಗಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ಅನೇಕರು ಚಿತ್ರ ವೀಕ್ಷಣೆ ಮಾಡಲು ಕಾಯುತ್ತಿದ್ದಾರೆ. ಇದೇ ಹಾದಿಯಲ್ಲಿ ಅಮೇರಿಕಾ ಮೂಲಕ ಕುಸ್ತಿಪಟು ವಿಲ್ಲಿ ಮ್ಯಾಕ್ಸ್ ಕೂಡ ಚಿತ್ರಕ್ಕಾಗಿ ಕಾಯುತ್ತಿದ್ದಾರೆ. ಈ ಕುರಿತು ವಿಲ್ಲಿ ಮ್ಯಾಕ್ ಅವರ ಅಧಿಕೃತ ಟ್ವಿಟರ್ ನಲ್ಲಿ ಪ್ರಕಟಿಸಿದ್ದಾರೆ.

ಕೆಜಿಎಫ್-2 ಚಿತ್ರದ ಟ್ರೈಲರ್ ಕಂಡ ವಿಲ್ಲಿ ಮ್ಯಾಕ್ ಫಿಧಾ ಆಗಿದ್ದು, ಚಿತ್ರವನ್ನು ನೋಡಲು ಕಾಯುತ್ತಿದ್ದೇ ಎನ್ನುವ ಅರ್ಥದಲ್ಲಿ ಟ್ವೀಟ್ ಮಾಡಿದ್ದಾರೆ. ಇನ್ನೂ ಕೆಲವು ದಿನಗಳ ಹಿಂದೆಯಷ್ಟೆ ಕೆಜಿಎಫ್-೨ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ವಿಶ್ವದಾದ್ಯಂತ ಟ್ರೆಂಡಿಂಗ್ ಕ್ರಿಯೇಟ್ ಮಾಡಿತ್ತು. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಮಿಲಿಯನ್ ಗಟ್ಟಲೇ ವೀಕ್ಷಣೆ ಕಂಡಿತ್ತು. ಟ್ರೈಲರ್ ಬಿಡುಗಡೆಯಾದಾಹಿನಿಂದ ಇಲ್ಲಿಯವರೆಗೂ ಸುಮಾರು 169 ಮಿಲಿಯನ್ ವೀಕ್ಷಣೆ, ೬.೯ ಲಕ್ಷ ಕಾಮೆಂಟ್ಸ್ ಹಾಗೂ ೭.೯ ಲಕ್ಷ ಲೈಕ್ಸ್  ಬಂದಿದೆ.

ಪ್ರಶಾಂತ್ ನೀಲ್ ನಿರ್ದೇಶನದಲ್ಲಿ, ಹೊಂಬಾಳೆ ಫಿಲ್ಮಂ ಬ್ಯಾನರ್‌ನಡಿ ನಿರ್ಮಾಣವಾಗಿರುವ ಕೆಜಿಎಫ್-೨ ಚಿತ್ರ ಪ್ಯಾನ್ ಇಂಡಿಯಾದಡಿ ಜುಲೈ 16 ರಂದು ವಿಶ್ವದಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಕನ್ನಡ ಸೇರಿದಂತೆ ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಗಳಲ್ಲಿ ತೆರೆಕಾಣಲಿದ್ದು, ಈ ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಬಣ್ಣ ಹಚ್ಚಿದೆ.

Trending

To Top