Kannada Cinema News

ಅಮೇರಿಕ ಅಮೇರಿಕ ಖ್ಯಾತಿಯ ನಟಿ ಭೂಮಿ ಈಗ ಎಲ್ಲಿದ್ದಾರೆ, ಏನ್ ಮಾಡ್ತಾ ಇದ್ದಾರೆ ನೋಡಿ!

ಕನ್ನಡ ಸಿನಿಮಾ ಅಮೇರಿಕ ಅಮೇರಿಕ ಎಂದಾಕ್ಷಣ ನಮಗೆ ಥಟ್ ಅಂತ ನೆನಪಾಗುವುದು, ಸೂರ್ಯ, ಭೂಮಿ ಹಾಗು ಶಶಾಂಕ್! ಹೌದು ಈ ಚಿತ್ರದಲ್ಲಿ ಸೂರ್ಯ ಪಾತ್ರವನ್ನು ರಮೇಶ್ ಅರವಿಂದ್ ಮಾಡಿದ್ದು, ಭೂಮಿಕಾ ಪಾತ್ರವನ್ನು ಹೇಮಾ ಪ್ರಭಾತ್ ಅವರು ಮಾಡಿದ್ದರು. 1997 ರಲ್ಲಿ ಬಿಡುಗಡೆ ಆಗಿದ್ದ ಅಮೇರಿಕ ಅಮೇರಿಕ ಚಿತ್ರ ಬರೋಬ್ಬರಿ 100 ಕ್ಕೂ ಹೆಚ್ಚು ದಿನಗಳು ಓಡಿತ್ತು! ಈಗ ಕೂಡ ಅಮೇರಿಕ ಅಮೇರಿಕ ಚಿತ್ರ ಟಿವಿಯಲ್ಲಿ ಪ್ರಸಾರ ವಾದರೆ, ಸಾಕಷ್ಟು ಜನ ಸಿನಿಮಾ ಎಷ್ಟು ಸಲ ನೋಡಿದ್ರೂ ಪುನಃ ಈ ಚಿತ್ರವನ್ನು ನೋಡುತ್ತಾರೆ! ಹಾಗಾದ್ರೆ ಅಮೇರಿಕ ಅಮೇರಿಕ ಚಿತ್ರದ ಭೂಮಿಕಾ (ಹೇಮಾ) ಅವರು ಸದ್ಯ ಎಲ್ಲಿದ್ದಾರೆ, ಏನ್ ಮಾಡ್ತಾ ಇದ್ದಾರೆ, ಹೇಗಿದ್ದಾರೆ ಗೊತ್ತಾ! ಈ ವಿಸ್ಯ ಪೂರ್ತಿ ಓದಿರಿ

ಮೂಲತಃ ಹೇಮಾ ಪ್ರಭಾತ್ ಅವರು ಭರತನಾಟ್ಯ ಡ್ಯಾನ್ಸರ್! ಚಿಕ್ಕ ವಯಸ್ಸಿನಿಂದ ಕೂಡ ಹೇಮಾ ಅವರು ಭರತನಾಟ್ಯ ಡಾನ್ಸ್ ಶೈಲಿಯನ್ನು ಕಲಿಯುತ್ತ, ಸಾಕಷ್ಟು ಡಾನ್ಸ್ ಶೋಗಳಲ್ಲಿ ಸ್ಪರ್ದಿಯಾಗಿ ಕೂಡ ಕಾಣಿಸಿಕೊಂಡಿದ್ದಾರೆ. ಆ ನಂತರ, ಹಿರಿಯ ನಟರಾದ ದತ್ತಣ್ಣ ಅವರಿಂದ ಹೇಮಾ ಅವರಿಗೆ ನಾಗತಿಹಳ್ಳಿ ಚಂದ್ರಶೇಖರ್ ಅವರ ನಿರ್ದೇಶನದ ಅಮೇರಿಕ ಅಮೇರಿಕ ಚಿತ್ರದಲ್ಲಿ ಪಾತ್ರಮಾಡಲು ಅವಕಾಶ ಸಿಕ್ಕಿತು! ಆ ನಂತರ ಹೇಮಾ ಅವರು ಶಿವಣ್ಣ ಅವರ ಜೊತೆ ದೊರೆ ಎಂಬ ಚಿತ್ರದಲ್ಲಿ ನಟಿಸಿದ್ದಾರೆ! ಆ ನಂತರ ಸುಮಾರು 5 ಕನ್ನಡ ಚಿತ್ರಗಳಲ್ಲಿ ನಟಿಸಿ, ಕೊನೆಯದಾಗಿ ಹೇಮಾ ಅವರು “ರವಿ ಮಾ#ಮ” ಎಂಬ ಚಿತ್ರದಲ್ಲಿ ನಟಿಸಿ ನಂತರ ಸಿನಿಮಾ ಕ್ಷೇತ್ರದಿಂದ ದೂರ ಉಳಿದರು.

“ರವಿ ಮಾಮ” ಎಂಬ ಚಿತ್ರವನ್ನು 1999 ರಲ್ಲಿ ಮಾಡಿದ ನಂತರ ಹೇಮಾ ಅವರು ಸಿನಿಮಾ ಕ್ಷೇತ್ರದಿಂದ ದೂರ ಉಳಿದರು. ಆನಂತರ ಸ್ವಾಮೆಂದ್ರ ಪಂಚಮುಖಿ ಅವರನ್ನು ವಿವಾಹ ಆದರೂ, ಕಾರಣಾಂತರಗಳಿಂದ ವಿ#ಚ್ಛೇದನವಾಗಿ ಈಗ ಪ್ರಶಾಂತ್ ಗೋಪಾಲ ಶಾಸ್ತ್ರೀ ಅವರನ್ನು ಮದುವೆ ಆಗಿ ಫ್ಯಾಮಿಲ್ಲೈಫ್ ನಲ್ಲಿ ಖುಷಿಯಾಗಿದ್ದಾರೆ. ಕಳೆದ ವರ್ಷ ಹೇಮಾ ಅವರು “ರಕ್ಷಾ ಬಂಧನ” ಎಂಬ ಧಾರಾವಾಹಿಯಲ್ಲಿ ಕೂಡ ನಟನೆ ಮಾಡಿದರು. ಸದ್ಯ ಸುಮಾರು 10 ವರ್ಷಗಳಿಂದ ಹೇಮಾ ಅವರು “ಸುಕೃತಿ ನಾಟ್ಯಶಾಲೆ” ಎಂಬ ಸಂಸ್ಥೆಯನ್ನು ಶುರು ಮಾಡಿ, ಪ್ರತಿ ದಿನ ನೂರಾರು ಮಕ್ಕಳಇಗೆ ಭರತನಾಟ್ಯ ನೃತ್ಯವನ್ನು ಹೇಳಿಕೊಡುತ್ತಿದ್ದಾರೆ.

ಸದ್ಯ ನಟಿ ಹೇಮಾ ಅವರು ಸುಮಾರು 10 ಕ್ಕೂ ಹೆಚ್ಚು ವರ್ಷಗಳಿಂದ ತಮ್ಮ ಪತಿ ಪ್ರಶಾಂತ್ ಅವರ ಜೊತೆ ಸೇರಿಕೊಂಡು ನಾಟ್ಯ ಕ್ಲಾಸ್ಗಳನ್ನು ಶುರು ಮಾಡಿದ್ದಾರೆ. ಬೆಂಗಳೂರಿನ ಸುಮಾರು 5 ದೊಡ್ಡ ಅರೆಗಳಲ್ಲಿ ಇವರು ಡಾನ್ಸ್ ಕ್ಲಾಸ್ ನಾಡಿಸುತ್ತಿದ್ದು, ಪ್ರತಿ ನಿತ್ಯ ನೂರಾರು ಜನ ಮಕ್ಕಳಿಗೆ ಭರತನಾಟ್ಯವನ್ನು ಹೇಳಿಕೊಡಲಾಗುತ್ತಿದೆ. ಹೇಮಾ ಹಾಗು ಅವರ ಪತಿ ಪ್ರಶಾಂತ್ ಇಬ್ಬರೂ ಕೂಡ ಭರತನಾಟ್ಯ ದಲ್ಲಿ ಪರಿಣತಿ ಹೊಂದಿರುವಾದ್ದರಿಂದ ಇವರೀಬ್ಬರೇ ಈ ಎಲ್ಲವನ್ನು ನಡೆಸುತ್ತಿದ್ದಾರೆ! ಇದಲ್ಲದೆ ಹೇಮಾ ಅವರು ಕೆಲವೊಂದು ಧಾರಾವಾಹಿಗಳಲ್ಲಿ ಅತಿಥಿ ಪಾತ್ರಗಳನ್ನೂ ಕೂಡ ಮಾಡುತ್ತಾರೆ! ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಗಳನ್ನೂ ತಪ್ಪದೆ ಕಾಮೆಂಟ್ ಮೂಲಕ ನಮಗೆ ತಿಳಿಸಿರಿ.

Trending

To Top