News

(video)ಅಮರ್ ಚಿತ್ರದ ಹಾಡಿನಲ್ಲಿ ದರ್ಶನ್, ರಚಿತಾ ರಾಮ್ ಸಕತ್ ಮಾದಕ ಡಾನ್ಸ್! ವಿಡಿಯೋ ಸಾಂಗ್ ಬಿಡುಗಡೆ

darshan-rachitamra

ಅಮರ್ ಚಿತ್ರ ನಮ್ಮ ಅಭಿಷೇಕ್ ಅಂಬರೀಷ್ ಅವರ ಬಹು ನಿರೀಕ್ಷೆಯ ಚಿತ್ರಗಳಲ್ಲಿ ಒಂದಾಗಿತ್ತು! ಕಳೆದ ತಿಂಗಳು ಅಮರ್ ಚಿತ್ರ ಬಿಡುಗಡೆ ಆಗಿ ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣಿತ್ತು! ಈ ಚಿತ್ರದಲ್ಲಿ ಅಭಿಷೇಕ್ ಅಂಬರೀಷ್ ಅವರ ಜೊತೆ, ತಾನ್ಯಾ ಹೋಪ್ ಅವರು ಕೂಡ ನಟಿಸಿದ್ದಾರೆ. ಈ ಚಿತ್ರದ ಒಂದು ಹಾಡಿನಲ್ಲಿ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್, ಹಾಗು ರಚಿತಾ ರಾಮ್ ಅವರು ಸಕತ್ ಆಗಿ ಡಾನ್ಸ್ ಮಾಡಿದ್ದಾರೆ! ಸದ್ಯ ಈ ಹಾಡಿನ ವಿಡಿಯೋ ಸಾಂಗ್ ಯೌಟ್ಯೂಬ್ ನಲ್ಲಿ ಬಿಡುಗಡೆ ಆಗಿ, ಸೋಶಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗಿದೆ! ಈ ಚಿತ್ರದ ಸೂಪರ್ ಹಾಡು, ನಮ್ಮ ದರ್ಶನ್ ಹಾಗು ರಚಿತಾ ರಾಮ್ ಅವರ ಸಕತ್ ಡಾನ್ಸ್, ಈ ಕೆಳಗಿನ ವಿಡಿಯೋದಲ್ಲಿ ತಪ್ಪದೆ ನೋಡಿರಿ
ಅಮರ್ ಚಿತ್ರ ಸುಮಾರು ಒಂದೂವರೆ ವರ್ಷಗಳಿಂದ ಚಿತ್ರೀಕರಣ ಶುರು ಆಗಿತ್ತು. ಕನ್ನಡದ ಅಮರ್ ಚಿತ್ರ, ನಮ್ಮ ರೆಬೆಲ್ ಸ್ಟಾರ್ ಅಂಬರೀಷ್ ಅವರ ಪುತ್ರನಾದ ಅಭಿಷೇಕ್ ಅಂಬರೀಷ್ ಅವರ ಮೊದಲ ಕನ್ನಡ ಚಿತ್ರ. ಅಭಿಷೇಕ್ ಅಂಬರೀಷ್ ಅವರು ಸುಮಾರು 8 ವರ್ಷಗಳ ಕಾಲ ವಿದೇಶದಲ್ಲಿ ತಮ್ಮ ವಿದ್ಯಾಭ್ಯಾಸ ವನ್ನು ಮುಗಿಸಿದ್ದಾರೆ. ಇದಾದ ಮೇಲೆ ಭಾರತಕ್ಕೆ ಬಂದ ಅಭಿಷೇಕ್ ಅವರು ಸಿನಿಮಾ ಫೀಲ್ಡನ್ನು ಆಯ್ಕೆ ಮಾಡಿಕೊಂಡರು. ಇದಾದ ನಂತರ ಅಂಬರೀಷ್ ಅವರ ಮೂಲಕ ನಮ್ಮ ನಿರ್ಮಾಪಕರಾದ ಸಂದೇಶ್ ನಾಗರಾಜ್ ಅವರನ್ನು ಭೇಟಿ ಮಾಡಿದ ಅಭಿಷೇಕ್ ಅಂಬರೀಷ್ ಅವರು ಒಂದು ಹೊಸ ಚಿತ್ರವನ್ನು ಮಾಡಲು ಶುರು ಮಾಡಿದರು. ಈ ಚಿತ್ರವನ್ನು ಮೈನಾ ಖ್ಯಾತಿಯ ನಾಗಶೇಖರ್ ಅವರು ನಿರ್ದೇಶನ ಮಾಡಿದ್ದಾರೆ.
ಅಮರ್ ಚಿತ್ರದಲ್ಲಿ ಅಭಿಷೇಕ್ ಅಂಬರೀಷ್ ಅವರ ಜೊತೆ, ಯಜಮಾನ ಖ್ಯಾತಿಯ ತಾನ್ಯಾ ಹೋಪ್ ಅವರು ನಾಯಕಿ ಯಾಗಿ ನಟಿಸಿದ್ದಾರೆ. ಇದು ಅಭಿಷೇಕ್ ಅಂಬರೀಷ್ ಅವರ ಮೊದಲ ಚಿತ್ರವಾದರೂ, ಚಿತ್ರದಲ್ಲಿ ಎಲ್ಲೂ ಕೂಡ ಇದು ಅವರ ಮೊದಲ ಚಿತ್ರ ವೆಂದು ಅನಿಸುವುದಿಲ್ಲ! ಅಮರ್ ಚಿತ್ರದಲ್ಲಿ ನಟಿ ತಾನ್ಯಾ ಹೋಪ್ ಅವರು ಕೂಡ ಅದ್ಭುತವಾಗಿ ನಟನೆ ಮಾಡಿದ್ದಾರೆ. ಈ ಚಿತ್ರದಲ್ಲಿ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಒಂದು ಮುಖ್ಯ ಅತಿಥಿ ಪಾತ್ರ ಮಾಡಿದ್ದಾರೆ! ದರ್ಶನ್ ಅವರು ಅಮರ್ ಸ್ಕ್ರೀನ್ ನಲ್ಲಿ 5 ರಿಂದ 6 ನಿಮಿಷ ಕಾಣಿಸಿಕೊಳ್ಳುತ್ತಾರೆ.
ಇದಲ್ಲದೆ ಅಮರ್ ಚಿತ್ರದಲ್ಲಿ ದೊಡ್ಡ ತಾರೆಗಳ ಹಿಂಡೇ ಇದೆ. ಅಮರ್ ಚಿತ್ರದಲ್ಲಿ ಅಭಿಷೇಕ್, ತಾನ್ಯಾ ಹೋಪ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಹೊರೆತುಪಡಿಸಿ ನಟ ದೇವರಾಜ್ , ಸುಧಾ ರಾಣಿ , ಸಾಧು ಕೋಕಿಲ, ಚಿಕ್ಕಣ್ಣ, ದೀಪಕ್ ಶೆಟ್ಟಿ, ಅನೂಪ್ ಭಂಡಾರಿ, ರಚಿತಾ ರಾಮ್ ಅವರು ಕೂಡ ನಟಿಸಿದ್ದಾರೆ. ರಚಿತಾ ರಾಮ್ ಅವರು ಒಂದು ಹಾಡಿನಲ್ಲಿ ಬರುತ್ತಾರೆ. ಒಟ್ಟಿನಲ್ಲಿ ಅಮರ್ ಒಂದೊಳ್ಳೆ ಫ್ಯಾಮಿಲಿ ಚಿತ್ರ! ಕುಟುಂಬಸಮೇತರಾಗಿ ಚಿತ್ರವನ್ನು ಆರಾಮಾಗಿ ನೋಡಬಹುದು. ಚಿತ್ರ ಬಿಡುಗಡೆ ಆದ ಎಲ್ಲೆಡೆ ಭರ್ಜರಿ ಆಗಿ ಪ್ರದರ್ಶನ ಕಾಣುತ್ತಿದೆ! ತಪ್ಪದೆ ಇಂದೇ ಚಿತ್ರವನ್ನು ಥಿಯೇಟರ್ ನಲ್ಲಿ ಹೋಗಿ ನೋಡಿರಿ!

Trending

To Top