ಅಭಿಷೇಕ್ ಅಂಬರೀಷ್ ಅವರ ಅಮರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ ದರ್ಶನ್! ಎಸ್ಕ್ಲ್ಯೂಸಿವ್ ಸುದ್ದಿ

amar-kannada
amar-kannada

ನಮ್ಮ ರೆಬೆಲ್ ಸ್ಟಾರ್ ಅಂಬರೀಷ್ ಅವರ ಪುತ್ರ ಅಭಿಷೇಕ್ ಅಂಬರೀಷ್ ಅವರ ಮೊದಲ ಚಿತ್ರದ ಹೆಸರು ಅಮರ್. ಅಮರ್ ಚಿತ್ರವನ್ನು ನಾಗಶೇಖರ್ ಅವರು ನಿರ್ದೇಶನ ಮಾಡುತ್ತಿದ್ದಾರೆ ಹಾಗು ಈ ಚಿತ್ರವನ್ನು ಸಂದೇಶ್ ನಾಗರಾಜ್ ಅವರು ನಿರ್ಮಾಣ ಮಾಡುತ್ತಿದ್ದಾರೆ. ಇದೊಂದು ಪಕ್ಕಾ ಆಕ್ಷನ್ ಚಿತ್ರ ಎಂದು ತಿಳಿದು ಬಂದಿದೆ. ಅಮರ್ ಚಿತ್ರದಲ್ಲಿ ಅಭಿಷೇಕ್ ಅಂಬರೀಷ್ ಅವರ ಜೊತೆ ಹೀರೋಯಿನ್ ಆಗಿ ತಾನ್ಯಾ ಹೋಪ್ ಅವರು ನಟಿಸಿದ್ದಾರೆ. ಮತ್ತೊಂದು ವಿಶೇಷ ಸುದ್ದಿ ಏನಪ್ಪಾ ಅಂದರೆ ಅಮರ್ ಚಿತ್ರದಲ್ಲಿ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಟಿಸುತ್ತಿದ್ದಾರೆ. ದರ್ಶನ್ ಅವರು ಈ ಚಿತ್ರದಲ್ಲಿ ಒಂದು ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ತಮ್ಮ ಚಿತ್ರದಲ್ಲಿ ಒಂದು ವಿಶೇಷ ಪಾತ್ರವನ್ನು ಮಾಡಲು ಅಂಬರೀಷ್ ಅವರ ಪುತ್ರ ಅಭಿಷೇಕ್ ಅವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಮನವಿ ಮಾಡಿಕೊಂಡಿದ್ದರು. ಅಂಬರೀಷ್ ಅವರ ದತ್ತು ಪುತ್ರನಂತೆ ಇರುವ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಅಭಿಷೇಕ್ ಅವರು ಕೇಳಿದ ತಕ್ಷಣ ಹಿಂದೂ ಮುಂದು ನೋಡದೆ ಈ ಪಾತ್ರ ಮಾಡಲು ಒಪ್ಪಿಕೊಂಡಿದ್ದಾರೆ. ಇದಲ್ಲದೆ ನೆನ್ನೆ ಬೆಂಗಳೂರಿನಲ್ಲಿ ಅಮರ್ ಚಿತ್ರದ ಶೂಟಿಂಗ್ ನಲ್ಲಿ ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಭಾಗವಹಿಸಿದ್ದಾರೆ. ಅಮರ್ ಚಿತ್ರದಲ್ಲಿ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಒಂದು ವಿಶೇಷ ಪಾತ್ರವನ್ನು ಮಾಡಲಿದ್ದಾರೆ. ಇದು ದರ್ಶನ್ ಅಭಿಮಾನಿಗಳಿಗೆ ಬಹಳ ಖುಷಿ ತಂದಿದೆ ಹಾಗು ಈ ಸುದ್ದಿ ಸೋಶಿಯಲ್ ಮೀಡಿಯಾ ಗಳಲ್ಲಿ ಸಕತ್ ವೈರಲ್ ಆಗಿದೆ.
ನಿಮಗೆಲ್ಲ ಗೊತ್ತಿರೋ ಹಾಗೆ ಕಳೆದ ವರ್ಷ ನಮ್ಮ ನಿಮ್ಮೆಲ್ಲರ ಮೆಚ್ಚಿನ ರೆಬೆಲ್ ಸ್ಟಾರ್ , ಕರುನಾಡ ಕರ್ಣ ಅಂಬರೀಷ್ ಅವರು ವಿಧಿ ವಶರಾದರು. ಅವರು ತೀರಿಕೊಂಡ ಸಮಯದಲ್ಲಿ ದೂರದ ಸ್ವೀಡನ್ ದೇಶದಲ್ಲಿ ಇದ್ದ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಶೂಟಿಂಗ್ ಅನ್ನು ಸ್ಥಗಿತ ಗೊಳಿಸಿ ಸ್ವೀಡನ್ ನಿಂದ ಬೆಂಗಳೂರಿಗೆ ಬಂದು ಅಂಬರೀಷ್ ಅವರ ಕೊನೆಯ ಎಲ್ಲಾ ಕಾರ್ಯಗಳನ್ನು ಮಾಡಲು ಸಹಕಾರ ನೀಡಿದರು. ಇದಲ್ಲದೆ ಅಂಬರೀಷ್ ಅವರ ಆಸ್ತಿಯನ್ನು ಕೂಡ ಕುದ್ದು ದರ್ಶನ್ ಅವರು ಶ್ರೀರಂಗಪಟ್ಟಣಕ್ಕೆ ಹೋಗಿ ವಿಸರ್ಜನೆ ಮಾಡಿದರು. ಇದಲ್ಲದೆ ನಮ್ಮ ದರ್ಶನ್ ಅವರು ಅಂಬಿ ಮನೆಗೆ ಭೇಟಿ ಕೊಟ್ಟು ಸುಮಲತಾ ಹಾಗು ಅಭಿಷೇಕ್ ಅವರನ್ನು ಭೇಟಿ ಮಾಡಿ ಸಮಾಧಾನ ಹೇಳಿದ್ದರು. ಈಗ ಅಭಿಷೇಕ್ ಅವರ ಅಮರ್ ಚಿತ್ರದಲ್ಲಿ ಒಂದು ಬಹು ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್.
ಸದ್ಯ ದರ್ಶನ್ ಅವರು ತಮ್ಮ ಯಜಮಾನ ಚಿತ್ರದಲ್ಲಿ ಬಹಳ ಬ್ಯುಸಿ ಆಗಿದ್ದಾರೆ. ಇದಲ್ಲದೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕುರುಕ್ಷೇತ್ರ ಚಿತ್ರ ಕೂಡ ಬಿಡುಗಡೆಗೆ ಸಿದ್ಧವಾಗಿದೆ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ ಎಲ್ಲಾ ಲೇಟೆಸ್ಟ್ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ನಮಗೆ ತಿಳಿಸಿರಿ.

Previous article(video)ಫ್ಯಾನ್ಸ್ ಗೆ ಖಡಕ್ ವಾರ್ನಿಂಗ್ ಕೊಟ್ಟ ಯಶ್! ಇಷ್ಟೊಂದು ಗರಂ ಎಂದೂ ಆಗಿರಲಿಲ್ಲ ಯಶ್, ವಿಡಿಯೋ ನೋಡಿ
Next articleಧಿಡೀರನೇ ಡಬಲ್ ಆಯಿತು ಸರಿಗಮಪ ಹನುಮಂತನ ಸಂಭಾವನೆ! ಎಷ್ಟು ಗೊತ್ತ ಊಹಿಸಕ್ಕೂ ಕಷ್ಟ