ಅಲ್ಲು ಅರ್ಜುನ್ ನಟನೆಯ ಪುಷ್ಪ ಚಿತ್ರ ಆ.13 ರಂದು ಬಿಡುಗಡೆ!

ಹೈದರಾಬಾದ್: ಪೋಸ್ಟರ್‌ಗಳ ಮೂಲಕವೇ ಭಾರಿ ಕುತೂಹಲ ಮೂಡಿಸಿರುವ ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಚಿತ್ರ ಆ.13, 2021 ರಂದು ಬಿಡುಗಡೆಯಾಗಲಿದೆ ಎಂಬ ಮಾಹಿತಿಯನ್ನು ಚಿತ್ರತಂಡ ಅಧಿಕೃತವಾಗಿ ಬಹಿರಂಗಪಡಿಸಿದೆ.

ಈಗಾಗಲೇ ಬಿಗ್ ಬಜೆಟ್ ಸಿನೆಮಾಗಳಾದ ಆರ್.ಆರ್.ಆರ್. ಹಾಗೂ ಅಣ್ಣಾತೆ ಸೇರಿದಂತೆ ಹಲವು ಸಿನೆಮಾಗಳ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಇದೀಗ ಪುಷ್ಪ ಸರದಿ. ಪುಷ್ಪ ಚಿತ್ರ ಸಹ ಇದೇ ಆಗಸ್ಟ್ ೧೩ ರಂದು ಬಿಡುಗಡೆಯಾಗಲಿದೆಯಂತೆ. ಇನ್ನೂ ಈ ಚಿತ್ರವನ್ನು ಸುಮಾರು ೧೦ ಭಾಷೆಗಳಲ್ಲಿ ಬಿಡುಗಡೆ ಮಾಡಲಾಗುವುದಂತೆ. ಪ್ಯಾನ್ ಇಂಡಿಯಾ ಮೂಲಕ ಈ ಚಿತ್ರ ಬಿಡುಗಡೆಯಾಗಲಿದೆ. ಅಲ್ಲು ಅರ್ಜುನ್ ಅಲಾ ವೈಕುಂಟಪುರಂಲೋ ಚಿತ್ರ ಸೂಪರ್ ಹಿಟ್ ಹೊಡೆದಿದ್ದು, ಇದಾದ ನಂತರ ಪುಷ್ಪ ಚಿತ್ರ ಸುಕುಮಾರ್ ನಿರ್ದೇಶನದಲ್ಲಿ ಸೆಟ್ಟೇರಿದೆ. ಈ ಚಿತ್ರದ ಮೇಲೂ ಭಾರಿ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿದೆ. ಈ ಚಿತ್ರವನ್ನು ಮೈತ್ರಿ ಮೇಕರ್ಸ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಆ.13 ರಂದು ಭರ್ಜರಿಯಾಗಿ ತೆರೆಮೇಲೆ ಬರಲಿದೆ.

ಅಷ್ಟೇ ಅಲ್ಲದೇ ಮುಂದಿನ ದಿನಗಳಲ್ಲಿ ದೊಡ್ಡ ದೊಡ್ಡ ಸ್ಟಾರ್ ನಟರ ಸಿನೆಮಾಗಳು ಬಿಡುಗಡೆಯಾಗಲಿದೆ. ಈ ಪೈಕಿ ರಾಮ್ ಚರಣ್ ತೇಜ್ ಹಾಗೂ ಜೂನಿಯರ್ ಎನ್.ಟಿ.ಆರ್ ಕಾಂಬಿನೇಷನ್‌ನಲ್ಲಿ ರಾಜಮೌಳಿ ನಿರ್ದೇಶನದಲ್ಲಿ ತಯಾರಾದ ಆರ್.ಆರ್.ಆರ್. ಚಿತ್ರ ಅ.೧೩ ರಂದು ತೆರೆಕಾಣಲಿದ್ದು, ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಅಣ್ಣಾತೆ ಸಿನೆಮಾ ನ.೪ ರಂದು ಬಿಡುಗಡೆಯಾಗಲಿದೆ. ಜೊತೆಗೆ ತಮಿಳು ಸ್ಟಾರ್ ನಟ ಅಜಿತ್ ನಟನೆಯ ವಾಲಿಮೈ ಚಿತ್ರ ಸಹ ಆಗಸ್ಟ್ ಮಾಹೆಯಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗಿದೆ.

ಮತ್ತೊಂದು ಕೂತೂಹಲಕಾರಿ ವಿಚಾರವೆಂದರೇ, ಕೆಜಿಎಫ್ ಚಿತ್ರದ ಮೂಲಕ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿಯಾಗಿ ಕಲೆಕ್ಷನ್ ಮಾಡಿ ವಿಶ್ವವ್ಯಾಪಿ ಖ್ಯಾತಿ ಗಳಿಸಿದ್ದು, ಇದೀಗ ಕೆಜಿಎಫ್-೨ ಚಿತ್ರ ಬಹುತೇಕ ರೆಡಿಯಾಗಿದ್ದು, ಬಿಡುಗಡೆಯ ದಿನಾಂಕ ಶೀಘ್ರದಲ್ಲೇ ದಿನಾಂಕ ಸಹ ಘೋಷಣೆಯಾಗಬಹುದಾಗಿದೆ.

Previous articleಸಲಾರ್ ಚಿತ್ರದಲ್ಲಿ ನಾಯಕಿಯಾಗಿ ಶ್ರುತಿ ಹಾಸನ್ ಆಯ್ಕೆ
Next articleಶ್ರುತಿ ಹಾಸನ್ ಯಾರ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದು ಯಾರ ಜೊತೆ?