Film News

10 ಭಾಷೆಯಲ್ಲಿ ಬಿಡುಗಡೆಯಾಗಲಿದೆಯಂತೆ ಅಲ್ಲುಅರ್ಜುನ್ ಪುಷ್ಪ ಸಿನೆಮಾ!

ಹೈದರಾಬಾದ್: ಮೆಗಾ ಫ್ಯಾಮಿಲಿಯಿಂದ ಸಿನೆಮಾರಂಕ್ಕೆ ಕಾಲಿಟ್ಟರೂ ಸಹ, ತನ್ನದೇ ಆದ ಶೈಲಿಯಲ್ಲಿ ತನಗೆ ಪ್ರತ್ಯೇಕವಾದ ಐಡೆಂಟಿಟಿಯನ್ನು ಕಲ್ಪಿಸಿಕೊಂಡ ನಟ ಸ್ಟೈಲಿಶ್ ಸ್ಟಾರ್ ಅಲ್ಲುಅರ್ಜುನ್ ಅಭಿನಯದ ಪುಷ್ಪ ಚಿತ್ರ 10 ಭಾಷೆಗಳಲ್ಲಿ ರಿಲೀಸ್ ಆಗಲಿದೆಯಂತೆ.

ನಟ ಅಲ್ಲು ಅರ್ಜುನ್ ಸೋಲು-ಗೆಲುವನ್ನು ಸಮನಾಗಿ ಸ್ವೀಕರಿಸುವಂತಹ ವ್ಯಕ್ತಿತ್ವವನ್ನು ಹೊಂದಿದ್ದವರಾಗಿದ್ದಾರೆ. ಇದೇ ಹಾದಿಯಲ್ಲಿ ಇದೀಗ ಸಿದ್ದವಾಗುತ್ತಿರುವ ಪುಷ್ಪ ಸಿನೆಮಾವನ್ನು ಪ್ಯಾನ್ ಇಂಡಿಯಾದಡಿ ಬಿಡುಗಡೆ ಮಾಡುವ ಉದ್ದೇಶದಿಂದ ಪುಷ್ಪ ಚಿತ್ರವನ್ನು ತೆಲುಗು, ತಮಿಳು, ಕನ್ನಡ, ಮಲಯಾಳಂ, ಹಿಂದಿ ಸೇರಿದಂತೆ ಒಟ್ಟು 10 ಭಾಷೆಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡಲಿದ್ದಾರಂತೆ. ಈ ಚಿತ್ರದಲ್ಲಿ ಯೂನಿವರಸಲ್ ಕಟೆಂಟ್ ಇರುವುದರಿಂದ ಇಷ್ಟು ಭಾಷೆಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಯೋಜನೆ ರೂಪಿಸಿದ್ದಾರಂತೆ.

ಕಳೆದ ವರ್ಷ ಅಲ್ಲುಅರ್ಜುನ್ ಹಾಗು ತ್ರಿವಿಕ್ರಮ್ ಕಾಂಬಿನೇಷನ್‌ನಲ್ಲಿ ಮೂಡಿಬಂದ ಅಲಾ ವೈಕುಂಟಪುರಂಲೋ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ನಂತರ ಪುಷ್ಪ ಯಾವ ಮಟ್ಟಿಗೆ ಹಿಟ್ ಹೊಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ. ಇನ್ನೂ ಈ ಹಿಂದೆ ಆರ್ಯ, ಆರ್ಯ-2 ಚಿತ್ರಗಳ ಮೂಲಕ ಅಲ್ಲುಅರ್ಜುನ್ ಹಾಗೂ ಸುಕುಮಾರ್ ಇಬ್ಬರ ಕಾಂಬಿನೇಷನ್ ವರ್ಕೌಟ್ ಆಗಿದ್ದು, ಇದೀಗ ಇವರಿಬ್ಬರ ಕಾಂಬಿನೇಷನ್ ನಲ್ಲಿ ಪುಷ್ಟ ಚಿತ್ರ ಸಹ ಮೂಡಿಬರಲಿದೆ.

ಇನ್ನೂ ಈ ಚಿತ್ರದಲ್ಲಿ ರಷ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸುತ್ತಿದ್ದು, ತಮಿಳು ಸ್ಟಾರ್ ಹಿರೋ ವಿಜಯ್ ಸೇತುಪತಿ ಅರಣ್ಯ ಇಲಾಖೆಯ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮುಖ್ಯವಾಗಿ ಈ ಚಿತ್ರದಲ್ಲಿ ಸ್ಪೆಷಲ್ ಸಾಂಗ್ ಇದ್ದು, ಈ ಹಾಡಿನಲ್ಲಿ ಬಾಲಿವುಡ್ ಸ್ಟಾರ್ ನಟಿಯರು ಹೆಜ್ಜೆ ಹಾಕಲಿದ್ದಾರಂತೆ. ಆ ನಟಿ ಯಾರೆಂಬುದು ಇನ್ನೂ ನಿಗೂಡವಾಗಿದೆ.

Trending

To Top