Film News

ಅಲ್ಲು ಅರ್ಜುನ್ ಪುಷ್ಪ ಚಿತ್ರದ ಸಾಂಗ್ ಮೇಕಿಂಗ್ ವಿಡೀಯೊ ಲೀಕ್!

ಹೈದರಾಬಾದ್: ಸುಮಾರು 10 ಭಾಷೆಗಳಲ್ಲಿ ಬಿಡುಗಡೆಯಾಗಲಿರುವ ಟಾಲಿವುಡ್ ಮೆಗಾ ಕುಟುಂಬದ ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯಿಸುತ್ತಿರುವ ಪುಷ್ಪ ಚಿತ್ರ ಈಗಾಗಲೇ ಟಾಲಿವುಡ್ ನಲ್ಲಿ ದೊಡ್ಡ ಮಟ್ಟದಲ್ಲಿ ಟ್ರೆಂಡಿಂಗ್ ಆಗಿದೆ. ಇದೀಗ ಈ ಚಿತ್ರದಲ್ಲಿನ ಸಾಂಗ್ ಮೇಕಿಂಗ್ ವಿಡೀಯೋ ಲೀಕ್ ಆಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ನಿರ್ದೇಶಕ ಸುಕುಮಾರ್ ಹಾಗೂ ಅಲ್ಲು ಅರ್ಜುನ್ ಹಾಗೂ ದೇವಿ ಶ್ರೀ ಪ್ರಸಾದ್ ಈ ತ್ರಿಮೂರ್ತಿಗಳ ಕಾಂಬಿನೇಷನ್ ನಲ್ಲಿ ಚಿತ್ರ ಬರುತ್ತಿದೆ ಎಂದರೇ ಅದು ಪಕ್ಕಾ ಬಾಕ್ಸ್ ಆಫೀಸ್ ಅನ್ನು ಲೂಟಿ ಹೊಡೆಯಲಿದೆ ಎಂದೇ ಕರೆಯಲಾಗುತ್ತದೆ. ಇದಕ್ಕೆ ಉತ್ತಮ ಉದಾಹರಣೆಯೆಂದರೇ ಆರ್ಯ ಹಾಗೂ ಆರ್ಯ-೨ ಸಿನೆಮಾದ ಗೀತೆಗಳು ಇಂದಿಗೂ ಸಹ ಬೆಸ್ಟ್ ಎಂದು ಕರೆಯಲಾಗುತ್ತದೆ. ಇದೇ ತ್ರಿಮೂರ್ತಿಗಳ ಸಾರಥ್ಯದಲ್ಲಿ ಪುಷ್ಪ ಚಿತ್ರ ಸಹ ತಯಾರಾಗುತ್ತಿದ್ದು, ಇದೀಗ ಈ ಚಿತ್ರದ ಸಾಂಗ್‌ವೊಂದರ ಮೇಕಿಂಗ್ ವಿಡಿಯೋ ಲೀಕ್ ಆಗಿದೆ.

ಇನ್ನೂ ಈಗಾಗಲೇ ಪುಷ್ಪ ಚಿತ್ರದ ಬಿಡುಗಡೆ ದಿನಾಂಕವನ್ನೂ ಸಹ ಚಿತ್ರತಂಡ ಘೋಷಣೆ ಮಾಡಿದ್ದು, ಶೂಟಿಂಗ್ ಬೇಗ ಮುಗಿಸಲು ಇಡೀ ಚಿತ್ರತಂಡ ಕಸರತ್ತು ನಡೆಸುತ್ತಿದೆ. ಆಗಸ್ಟ್ ಮಾಹೆಯಲ್ಲಿ ಈ ಚಿತ್ರ ತರೆಮೇಲೆ ಬರಲಿದ್ದು, ಅಷ್ಟರೊಳಗೆ ಸಿನೆಮಾ ಶೂಟಿಂಗ್ ಮುಗಿಸಲು ಎಲ್ಲರೂ ಶ್ರಮಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಪುಷ್ಪ ಸಿನೆಮಾದ ಸಾಂಗ್ ಮೇಕಿಂಗ್ ವಿಡಿಯೋ ಲೀಕ್ ಆಗಿದೆ. ಈ ವಿಡಿಯೋದಲ್ಲಿ ಶ್ರೀಗಂಧ ಮರಗಳ ಲೂಟಿಕೋರರೆಲ್ಲರೂ ಪಾರ್ಟಿ ಮಾಡುತ್ತಿದ್ದ ಹಾಗೆ ಸಾಂಗ್ ಮೂಡಿಬರುತ್ತಿರುವ ಹಾಗಿದ್ದು, ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

ಇನ್ನೂ ಈ ಸಾಂಗ್ ಗೆ ಸಂಬಂಧಿಸಿದಂತೆ ಮ್ಯೂಸಿಕ್ ಪ್ಲೇ ಆಗುತ್ತಿದ್ದರೇ, ಎಲ್ಲರೂ ಡ್ಯಾನ್ಸ್ ಮಾಡುತ್ತಿರುತ್ತಾರೆ. ಎರಡು ಮೂರು ಬಾರಿ ರೀಟೆಕ್ ಸಹ ಮಾಡಿದ ಹಾಗಿದೆ. ಇನ್ನೂ ಬೀಟ್ ಸಖತ್ ಆಗಿದ್ದು, ಅಭಿಮಾನಿಗಳು ಫುಲ್ ಥ್ರಿಲ್ ಆಗಿದ್ದಾರೆ. ಅಂದಹಾಗೆ ಇದರಿಂದ ಚಿತ್ರಕ್ಕೆ ಸ್ವಲ್ಪ ಹಿನ್ನೆಡೆಯಾದರೂ ಕೂಡ ಸಿನೆಮಾ ಮೇಲಿನ ಕ್ರೇಜ್ ಮತಷ್ಟು ಹೈಪ್ ಆಗಿದೆ ಎನ್ನಲಾಗುತ್ತಿದೆ.

Trending

To Top