Film News

ಹಾಸ್ಯನಟ ಬ್ರಹ್ಮಾನಂದಂ ರಿಂದ ಸುಂದರ ಉಡುಗೊರೆ ಪಡೆದ ಅಲ್ಲು ಅರ್ಜುನ್

ಹೈದರಾಬಾದ್: ಸುಮಾರು 40 ವರ್ಷಗಳಿಂದ ತೆಲುಗು ಸಿನಿರಂಗದಲ್ಲಿ ಹಾಸ್ಯ ಕಲಾವಿದರಾಗಿ ಹೆಮ್ಮರದಂತೆ ಬೆಳೆದಿರುವ ಹಾಸ್ಯಬ್ರಹ್ಮ ಎಂದೇ ಕರೆಯಲಾಗುವ ನಟ ಬ್ರಹ್ಮಾನಂದ ರವರು ಸ್ಟಾರ್ ನಟ ಅಲ್ಲು ಅರ್ಜುನ್ ರವರಿಗೆ ಸುಂದರ ಉಡುಗೊರೆ ನೀಡಿದ್ದಾರೆ. ಇನ್ನೂ ಈ ಉಡುಗೊರೆ ಪಡೆದ ಅಲ್ಲು ಅರ್ಜುನ್ ಭಾವುಕರಾಗಿದ್ದಾರೆ ಎನ್ನಲಾಗಿದೆ.

ಕಾಲೇಜೊಂದರ ಉಪನ್ಯಾಸಕರಾಗಿದ್ದ ಬ್ರಹ್ಮನಂದಂ ರವರು ತೆರೆಯ ಮೇಲೆ ಕಾಮಿಡಿ ಮಾಡಿದರೂ ನಿಜ ಜೀವನದಲ್ಲಿ ಗಂಭೀರ ಸ್ವಭಾವದವರು. ಕೇವಲ ನಟನೆ ಮಾತ್ರವಲ್ಲದೇ ಅದ್ಬುತವಾದ ಚಿತ್ರಗಳನ್ನು ಬಿಡಿಸುವುದರಲ್ಲಿ ನಿಸ್ಸೀಮರು. ಪೆನ್ಸಿಲ್ ಸ್ಕೆಚ್ ಮಾದರಿಯ ಚಿತ್ರಕಲೆಯಲ್ಲಿ ಸಾಕಷ್ಟು ಅನುಭವಸ್ಥರು. ಅಷ್ಟೇ ಅಲ್ಲದೇ ತಾವು ಬಿಡಿಸುವಂತಹ ಚಿತ್ರಗಳನ್ನು ಸಿನಿರಂಗದ ಸ್ನೇಹಿತರಿಗೆ ನೀಡುವುದು ಬ್ರಹ್ಮನಂದಂರವರ ಸ್ವಭಾವವಾಗಿದೆ. ಅದೇ ರೀತಿ ನಟ ಅಲ್ಲು ಅರ್ಜುನ್ ರವರಿಗೆ ಸುಂದರವಾದ ಚಿತ್ರವನ್ನು ಬಿಡಿಸಿ ಉಡುಗೊರೆಯಾಗಿ ನೀಡಿದ್ದಾರಂತೆ.

ನಟ ಬ್ರಹ್ಮಾನಂದರವರು ಸುಮಾರು 45 ದಿನಗಳ ಕಾಲ ಪೆನ್ಸಿಲ್ ಸ್ಕೆಚ್ ನಿಂದ ಬಿಡಿಸಿದಂತಹ ತಿರುಪತಿ ವೆಂಕಟೇಶ್ವರ ಸ್ವಾಮಿ ರವರ ಸುಂದರವಾದ ಚಿತ್ರವನ್ನು ಅಲ್ಲು ಅರ್ಜುನ್ ರವರಿಗೆ ನೀಡಿದ್ದಾರೆ. ಇನ್ನೂ ಈ ಚಿತ್ರ ಅನೇಕ ವಿವರಗಳನ್ನು ತಿಳಿಸುವ ಚಿತ್ರವಾಗಿದೆ. ಇನ್ನೂ ಈ ಕುರಿತು ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಅಲ್ಲು ಅರ್ಜುನ್ ಬ್ರಹ್ಮಾನಂದಂ ರವರು ನನಗೆ ನೀಡಿದ ಉಡುಗೊರೆ ಬೆಲೆ ಕಟ್ಟಲು ಸಾಧ್ಯವಾಗದಂತಹುದು. ಬ್ರಹ್ಮಾನಂದಂ ರವರು ಬರೆದಿರುವಂತಹ ಪೆನ್ಸಿಲ್ ಸ್ಕೆಚ್ ಚಿತ್ರವಿದು. 45 ದಿನಗಳ ಪರಿಶ್ರಮದ ಫಲ ಇದು ಎಂದು ಬರೆದುಕೊಂಡಿದ್ದಾರೆ. ಮತ್ತೋಂದು ಕೌತುಕದ ವಿಚಾರವೆಂದರೇ ರೇಸುಗುರ್ರಂ ಚಿತ್ರದಲ್ಲಿನ ಬ್ರಹ್ಮಾನಂದ ಇರುವ ಸನ್ನಿವೇಶಗಳು ಇಂದಿಗೂ ಸಹ ಸಾಮಾಜಿಕ ಜಾಲತಾಣಗಳಲ್ಲಿ ಪುಲ್ ವೈರಲ್ ಆಗುತ್ತಲೇ ಇದೆ.

 

Trending

To Top