ಪತ್ನಿಗೆ ಸ್ಟೈಲಿಷ್ ಆಗಿ ವಿಶ್ ಮಾಡಿದ ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್

ಹೈದರಾಬಾದ್: ಟಾಲಿವುಡ್‌ನ ಸ್ಟೈಲಿಷ್ ಸ್ಟಾರ್ ಎಂದೇ ಕರೆಯುವ ಅಲ್ಲು ಅರ್ಜುನ್ ರವರಿಗೆ ಇಂದು ಸ್ಪೆಷಲ್ ಡೇ. ಇಂದು ಅಲ್ಲು ಅರ್ಜುನ್ ಹಾಗೂ ಸ್ನೇಹಾ ರೆಡ್ಡಿ ರವರ ಮದುವೆ ವಾರ್ಷಿಕೋತ್ಸವ. ಇನ್ನೂ ಅಲ್ಲು ಅರ್ಜುನ್ ತಮ್ಮ ಪತ್ನಿಗೆ ಸ್ಟೈಲಿಷ್ ಆಗಿ ಪ್ರೀತಿಯಿಂದ ವಿಷ್ ಮಾಡಿದ್ದಾರೆ.

ಕಳೆದ 2011 ರಲ್ಲಿ ಇದೇ ದಿನ ಹಸೆಮಣೆ ಏರಿದ ಅಲ್ಲು ಅರ್ಜುನ್ ಹಾಗೂ ಸ್ನೇಹಾರೆಡ್ಡಿ ರವರು ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿದ್ದಾರೆ. 10 ವರ್ಷಗಳ ವೈವಾಹಿಕ ಜೀವನ ಸಾಗಿಸುತ್ತಿರುವ ಈ ದಂಪತಿಗೆ ಸಿನಿತಾರೆಯರು ಹಾಗೂ ಗಣ್ಯರು, ಅಭಿಮಾನಿಗಳು ಶುಭಾಷಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ. ಇನ್ನೂ ತಮ್ಮ ಪ್ರೀತಿಯ ಮಡದಿಗೆ ವಿಶೇಷವಾಗಿ ವಿಶ್ ಮಾಡಿದ ಅಲ್ಲು ಅರ್ಜುನ್ ಸಾಮಾಜಿಕ ಜಾಲತಾಣದಲ್ಲಿ ಸುಂದರವಾದ ಪೊಟೋಗಳನ್ನು ಹಂಚಿಕೊಳ್ಳುವ ಮೂಲಕ ಪ್ರೀತಿಯಿಂದ ಶುಭಾಷಯ ಕೋರಿದ್ದಾರೆ.

ಇನ್ನೂ ಅಲ್ಲು ಅರ್ಜುನ್ ಶೇರ್ ಮಾಡಿರುವ ಪೊಟೋ ಜೊತೆಗೆ ಹೆಡ್‌ಲೈನ್ ಸಹ ಹಾಕಿದ್ದಾರೆ. ತಾಜ್‌ಮಹಲ್ ಮುಂಭಾಗ ಈ ದಂಪತಿ ತೆಗೆಸಿಕೊಂಡಿರುವ ಪೊಟೋ ಶೇರ್ ಮಾಡಿ ೧೦ನೇ ವರ್ಷದ ಮದುವೆ ವಾರ್ಷಿಕೋತ್ಸವದ ಶುಭಾಷಯಗಳು ಕ್ಯೂಟಿ ಎಂದು ಹೇಳುತ್ತಾ, ೧೦ ವರ್ಷಗಳ ಅದ್ಬುತ ಪಯಣ, ಇದೇ ರೀತಿ ಇನಷ್ಟು ವರ್ಷಗಳು ಬರಲಿ ಎಂದಿದ್ದಾರೆ.

ಇನ್ನೂ ದೊಡ್ಡ ಉದ್ಯಮಿ ಕೆ.ಪಿ.ರೆಡ್ಡಿ ಮಗಳೇ ಸ್ನೇಹಾ ರೆಡ್ಡಿ. ಈಕೆಯನ್ನು ಅಲ್ಲು ಅರ್ಜುನ್ ಸಿನೆಮಾದಲ್ಲಿ ಬೆಳೆದು ನಿಂತ ಬಳಿಕ ಮದುವೆ ಪಾರ್ಟಿಯೊಂದರಲ್ಲಿ ನೋಡಿದ್ದಾರೆ. ಇದೇ ವೇಳೆ ಲವ್ ಅಟ್ ಫಸ್ಟ್ ಸೈಟ್ ಎಂಬಂತೆ ಸ್ನೇಹಾ ರೆಡ್ಡಿ ಮೇಲೆ ಪ್ರೇಮಾಂಕುರವಾಗಿದೆ. ಇನ್ನೂ ಮೊದಲಿಗೆ ಸ್ನೇಹ ನಂತರ ಪ್ರೀತಿಯಾಗಿ ಬದಲಾಗಿದ್ದು. ಮೊದಲಿಗೆ ಸ್ನೇಹಾರೆಡ್ಡಿಯವರ ಮನೆಯಲ್ಲಿ ಇವರಿಬ್ಬರ ಮದುವೆಗೆ ಒಪ್ಪಿಗೆ ಸಿಕ್ಕಿಲ್ಲ ಎನ್ನಲಾಗಿದೆ. ನಂತರ ಅಲ್ಲು ಅರ್ಜುನ್ ರವರೇ ಸ್ವತಃ ಸ್ನೇಹಾರೆಡ್ಡಿ ಮನೆಯಲ್ಲಿ ಮದುವೆಯಾಗುವ ಬಗ್ಗೆ ಒಪ್ಪಿಸಲಾಗಿ ನಂತರ ಸ್ನೇಹಾರೆಡ್ಡಿ ಪಟ್ಟು ಹಿಡಿದ ಬಳಿಕ ಮದುವೆ ನಡೆದಿತ್ತು.

Previous articleತನ್ನ ಪತಿ ಎಷ್ಟು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ ಎಂಬುದನ್ನು ರಿವೀಲ್ ಮಾಡಿದ ನಿಹಾರಿಕಾ!
Next articleಯುವರತ್ನ ಚಿತ್ರತಂಡದಿಂದ #MyGuru ಹ್ಯಾಷ್ ಟ್ಯಾಗ್ ಅಭಿಯಾನ