ಮಗಳೊಂದಿಗೆ ನೈಟ್ ಔಟ್ ಹೊರಟ ಅಲ್ಲು ಅರ್ಜುನ್, ವೈರಲ್ ಆದ ಪೊಟೋ…!

ತೆಲುಗು ಸಿನಿರಂಗದಲ್ಲಿ ಪಕ್ಕಾ ಫ್ಯಾಮಿಲಿ ಮ್ಯಾನ್ ಎಂದು ಅಲ್ಲು ಅರ್ಜುನ್ ರವರನ್ನು ಕರೆಯುತ್ತಾರೆ. ತಾನು ಸಿನೆಮಾಗಳಲ್ಲಿ ಎಷ್ಟೇ ಬ್ಯುಸಿಯಾಗಿದ್ದರೂ ಸಹ ತನ್ನ ಕುಟುಂಬಕ್ಕೆ ತುಂಬಾನೆ ಪ್ರಾಶಸ್ತ್ಯ ನೀಡುತ್ತಾರೆ.  ಅದರಲ್ಲೂ ಬನ್ನಿಗೆ ಮಗಳು ಎಂದರೇ ತುಂಬಾ ಇಷ್ಟ ಎಂದು ಹೇಳಲಾಗುತ್ತಿದೆ. ಇದೀಗ ತನ್ನ ಮುದ್ದಿನ ಮಗಳೊಂದಿಗೆ ನೈಟ್ ಔಟ್ ಹೊರಟಿದ್ದು, ಅದಕ್ಕೆ ಸಂಬಂಧಿಸಿದ ಪೊಟೋ ಒಂದು ಇಂಟರ್‍ ನೆಟ್ ನಲ್ಲಿ ವೈರಲ್ ಆಗುತ್ತಿದೆ. ಅಷ್ಟಕ್ಕೂ ಅಲ್ಲು ಅರ್ಜುನ್ ಮಗಳೊಂದಿಗೆ ಮಾಡಿದ್ದು ಏನು ಎಂಬ ವಿಚಾರಕ್ಕೆ ಬಂದರೇ…

ತೆಲುಗು ಐಕಾನ್ ಸ್ಟಾರ್‍ ಅಲ್ಲು ಅರ್ಜುನ್ ಪುಷ್ಪಾ ಸಿನೆಮಾದ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್‍ ಆಗಿದ್ದಾರೆ. ಸದ್ಯ ಪುಷ್ಪಾ-2 ಸಿನೆಮಾದ ಶೂಟಿಂಗ್ ಇತ್ತಿಚಿಗಷ್ಟೆ ಆರಂಭವಾಗಿದೆ. ಇನ್ನೂ ದೇಶದ ಸಿನಿರಂಗದಲ್ಲಿ ಅಲ್ಲು ಅರ್ಜುನ್ ಟಾಪ್ ಸ್ಥಾನದಲ್ಲಿದ್ದಾರೆ. ಇನ್ನೂ ಅಲ್ಲು ಅರ್ಜುನ್ ಸಿನೆಮಾಗಳಲ್ಲಿ ಎಷ್ಟೇ ಬ್ಯುಸಿಯಾಗಿದ್ದರೂ ಸಹ ಕುಟುಂಬಕ್ಕೆ ಟೈಂ ನೀಡುತ್ತಿರುತ್ತಾರೆ. ತನ್ನ ಪತ್ನಿ ಸ್ನೇಹಾ, ಮಗ ಅಯಾನ್, ಮಗಳು ಅಲ್ಲು ಅರ್ಹಾ ಜೊತೆಗೆ ಹೆಚ್ಚಿನ ಸಮಯ ಕಳೆಯುತ್ತಿರುತ್ತಾರೆ. ಜೊತೆಗೆ ಸಮಯ ಸಿಕ್ಕರೇ ಸಾಕು ಕುಟುಂಬದೊಂದಿಗೆ ದೇಶ ವಿದೇಶಗಳಿಗೆ ಟ್ರಿಪ್ ಹೊಡೆಯುತ್ತಾ, ಕುಟುಂಬದೊಂದಿಗೆ ಎಂಜಾಯ್ ಮಾಡುತ್ತಿರುತ್ತಾರೆ.

ಇನ್ನೂ ಅಲ್ಲು ಅರ್ಜುನ್ ಗೆ ತನ್ನ ಮಗಳಾದ ಅರ್ಹಾ ಎಂದರೇ ತುಂಬಾನೆ ಪ್ರಾಣ. ಮಗಳೊಂದಿಗೆ ತುಂಬಾನೆ ಫನ್ನಿಯಾಗಿ, ಫ್ರೇಂಡ್ಲಿಯಾಗಿಯೂ ಸಹ ಇರುತ್ತಾರೆ. ಇನ್ನೂ ಸೋಷಿಯಲ್ ಮಿಡಿಯಾದಲ್ಲೂ ಸಹ ಇಬ್ಬರ ಜೋರು ಕಡಿಮೆ ಇರೊದಿಲ್ಲ. ಈ ಹಾದಿಯಲ್ಲೇ ಇತ್ತೀಚಿಗೆ ಸ್ವತಂತ್ರ ದಿನಾಚರಣೆ, ಗಣೇಶ ಹಬ್ಬದ ಸಮಯದಲ್ಲಿ ಅಲ್ಲು ಅರ್ಜುನ್ ಹಾಗೂ ಅಲ್ಲು ಅರ್ಹಾ ಸಖತ್ ಸದ್ದು ಮಾಡಿದ್ದರು. ಇದೀಗ ಮತ್ತೊಮ್ಮೆ ಸೋಷಿಯಲ್ ಮಿಡಿಯಾದಲ್ಲಿ ಪ್ರತ್ಯಕ್ಷರಾಗಿದ್ದಾರೆ. ಈ ಬಾರಿ ಮಗಳೊಂದಿಗೆ ನೈಟ್ ರೈಡ್ ಹೊರಟಿದ್ದಾರೆ. ಇನ್ನೂ ನೈಟ್ ರೈಡ್ ನಲ್ಲಿ ಅಲ್ಲು ಅರ್ಜುನ್ ಹಾಗೂ ಅರ್ಹಾ ನೈಟ್ ಮೀಲ್ಸ್ ತಿನ್ನುತ್ತಾ ಕ್ಯಾಮೆರಾಗೆ ಕಾಣಿಸಿಕೊಂಡಿದ್ದಾರೆ. ಕಾರಿನಲ್ಲೇ ಇಬ್ಬರೂ ರುಚಿಕರವಾದ ಊಟವನ್ನು ಸವಿದಿದ್ದಾರೆ. ನಟ ಅಲ್ಲು ಅರ್ಜುನ್ ಪ್ಯಾನ್ ಇಂಡಿಯಾ ಸ್ಟಾರ್‍ ಆಗಿದ್ದು, ಮಗಳಿಗಾಗಿ ನೈಟ್ ಔಟ್ ಮಾಡಿದ್ದು ವಿಶೇಷ ಎನ್ನಬಹುದಾಗಿದೆ. ಇನ್ನೂ ತಂದೆ ಮಗಳು ಕಾರಿನಲ್ಲಿ ಕುಳಿತು ಊಟ ಮಾಡುತ್ತಿರುವ ಪೊಟೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ಇನ್ನೂ ಪುಷ್ಪಾ-2 ಸಿನೆಮಾ ಶೂಟಿಂಗ್ ಸಹ ಶುರುವಾಗಿದ್ದು, ಶೂಟಿಂಗ್ ಕೆಲಸಗಳು ಭರದಿಂದ ಸಾಗುತ್ತಿವೆ. ಪುಷ್ಪಾ ಸಿನೆಮಾ ಈಗಲೂ ಸಹ ತುಂಬಾನೆ ಕ್ರೇಜ್ ಪಡೆದುಕೊಂಡಿದೆ. ಪುಷ್ಪಾ-2 ಸಿನೆಮಾವನ್ನು ಸುಕುಮಾರ್‍ ತುಂಬಾನೆ ಕೇರ್‍ ತೆಗೆದುಕೊಂಡು ನಿರ್ದೇಶನ ಮಾಡುತ್ತಿದ್‌ಆರೆ. ಇನ್ನೂ ಪುಷ್ಪಾ-2 ಪೋಸ್ಟರ್‍  ಗಾಗಿ ಅಲ್ಲು ಅರ್ಜುನ್ ಹಾಗೂ ರಷ್ಮಿಕಾ ಪೊಟೋಶೂಟ್ಸ್ ಸಹ ಮಾಡಿಸಿದ್ದಾರೆ ಎನ್ನಲಾಗುತ್ತಿದೆ. ಇನ್ನೂ ಪುಷ್ಪಾ-2 ಸಿನೆಮಾವನ್ನು ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್‍ ನಡಿ ಸುಮಾರು 350 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ ಎನ್ನಲಾಗಿದೆ.

Previous articleಮೂರು ವರ್ಷದ ಬಳಿಕ ತಾಯ್ನಾಡಿಗೆ ಬಂದ ಗ್ಲೋಬಲ್ ಸ್ಟಾರ್ ಪ್ರಿಯಾಂಕಾ ಚೋಪ್ರಾ….!
Next articleಸೆಕೆಂಡ್ ಇನ್ನಿಂಗ್ಸ್ ನಲ್ಲೂ ಭಾರಿ ಸಂಭಾವನೆ ಏರಿಸಿಕೊಂಡ ಸ್ಟಾರ್ ನಟಿ ತ್ರಿಷಾ…!