ಹೈದರಾಬಾದ್: ಅಲ್ಲರಿ ನರೇಶ್ ಎಂದ ಕೂಡಲೇ ಕಾಮಿಡಿ ಆಧರಿತ ಚಿತ್ರಗಳೇ ನಮ್ಮ ಕಣ್ಣ ಮುಂದೆ ಬರುತ್ತದೆ. ಆದರೆ ಇದೀಗ ಕ್ರೈಂ ಥ್ರಿಲ್ಲರ್ ಚಿತ್ರ ನಾಂದಿ ಚಿತ್ರದಲ್ಲಿ ನರೇಶ್ ನಟಿಸಿದ್ದು, ಇದೀಗ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.
ಟಾಲಿವುಡ್ ನಿರ್ದೇಶಕ ವಿಜಯ ಕನಕಮೇಡಲ ಸಾರಥ್ಯದಲ್ಲಿ ಅಲ್ಲರಿ ನರೇಶ್ ನಾಯಕನಾಗಿ ನಟಿಸಿದ ನಾಂದಿ ಚಿತ್ರ ಯೂಟೂಬ್ನಲ್ಲಿ ಹಲ್ ಚಲ್ ಸೃಷ್ಟಿಸಿದೆ. ನಟ ನರೇಶ್ ಇಂತಹ ಪಾತ್ರಗಳನ್ನೂ ಸಹ ಮಾಡುತ್ತಾರಾ ಎಂಬಂತೆ ಈ ಚಿತ್ರದಲ್ಲಿ ನಟಿಸಿದ್ದಾರೆ. ಅಂದಹಾಗೆ ಕೆಲವು ಡಿಫರೆಂಟ್ ಚಿತ್ರಗಳಲ್ಲೂ ಸಹ ನಟಿಸಿದ್ದರೂ ಕೂಡ ಯಾವುದೇ ಚಿತ್ರ ನರೇಶ್ ರವರಿಗೆ ಹಿಟ್ ಕೊಡಲಿಲ್ಲ. ಆದರೆ ನಾಂದಿ ಚಿತ್ರ ನರೇಶ್ ಗೆ ಪಕ್ಕಾ ಹಿಟ್ ಕೊಡಲಿದೆ ಎಂದು ಹೇಳಲಾಗುತ್ತಿದೆ.
ತೆಲುಗು ಸಿನಿರಂಗದ ನಿರ್ಮಾಪಕ ಸತೀಶ್ ವಿಗ್ನೇಶ್ ನಿರ್ಮಾಣದಲ್ಲಿ ಈ ಚಿತ್ರ ಸಿದ್ದವಾಗಿದ್ದು, ಚಿತ್ರದ ಫಸ್ಟ್ ಲುಕ್ನಲ್ಲೆ ಗಮನ ಸೆಳೆದಿತ್ತು ನಾಂದಿ ಚಿತ್ರ. ಫಸ್ಟ್ಲುಕ್ ಪೋಸ್ಟರ್ನಲ್ಲಿ ಬಟ್ಟೆಗಳಿಲ್ಲದೇ ನರೇಶ್ ಕಾಣಿಸಿದ್ದು, ಎಲ್ಲರನ್ನೂ ಆಶ್ಚರ್ಯ ಪಡುವಂತೆ ಮಾಡಿತ್ತು. ಇದೀಗ ಟೀಸರ್ ಬಿಡುಗಡೆಯಾಗಿದ್ದು, ಟೀಸರ್ನಲ್ಲಿ ಹಲವು ಡೈಲಾಗ್ಗಳು ನೋಡುಗರನ್ನು ರಂಜಿಸುತ್ತಿದೆ ಎನ್ನಲಾಗಿದೆ.
ಅಂದಹಾಗೆ ನಟ ನರೇಶ್ ಈ ಚಿತ್ರದಲ್ಲಿ ಪೇಪರ್ ಹಾಕುವ ಹುಡುಗನಾಗಿ ಕಾಣಿಸಲಿದ್ದು, ಒಂದು ಮರ್ಡರ್ ಕೇಸ್ನಲ್ಲಿ ಸಿಕ್ಕಿಹಾಕಿಕೊಳ್ಳುತ್ತಾನೆ. ಇನ್ನೂ ನ್ಯಾಯಾಲಯ ನರೇಶ್ಗೆ ೫ ವರ್ಷ ಶಿಕ್ಷೆ ವಿಧಿಸುವ ದೃಶ್ಯದ ಜೊತೆಗೆ ಜೈಲಿನಲ್ಲಿ ಪೊಲೀಸರು ಹಿಂಸಿಸುವ ದೃಶ್ಯಗಳು ಕಾಣುತ್ತದೆ. ಇನ್ನೂ ನರೇಶ್ ರನ್ನು ಜೈಲಿನಿಂದ ಬಿಡುಗಡೆ ಮಾಡಲು ಕಾಲಿವುಡ್ ಹಿರೋಹಿನ್ ವರಲಕ್ಷ್ಮೀ ಶರತ್ ಕುಮಾರ್ ಲಾಯರ್ ಪಾತ್ರದಲ್ಲಿ ಕಾಣಸಿಕೊಳ್ಳಲಿದ್ದು, ಈ ಚಿತ್ರ ಫೆ.೧೯ ರಂದು ಬಿಡುಗಡೆಯಾಗಲಿದೆ.
