Film News

ಮಾಲ್ಡೀವ್ಸ್ ನಲ್ಲಿ ಹಾಟ್ ನಟಿ ಅಲಿಯಾ! ವೈರಲ್ ಆಯ್ತು ಬಿಕಿನಿ ಪೋಟೊಗಳು

ಮುಂಬೈ: ಬಾಲಿವುಡ್‌ನ ಹಾಟ್ ನಟಿ ಎಂದು ಕರೆಯಲಾಗುವ ಆಯಿಯಾ ಭಟ್ ಮಾಲ್ಡೀವ್ಸ್ ನಲ್ಲಿ ಎಂಜಾಯ್ ಮಾಡುತ್ತಿದ್ದು, ಇದೀಗ ಅವರು ಶೇರ್ ಮಾಡಿರುವ ಬಿಕಿನಿ ಪೊಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಇತ್ತೀಚಿಗೆ ಪ್ರವಾಸಿಗರ ಸ್ವರ್ಗ ಎಂದೇ ಕರೆಯಲಾಗುವ ಮಾಲ್ಡೀವ್ಸ್ ತಾಣಕ್ಕೆ ಅನೇಕ ಸಿನೆಮಾ ತಾರೆಯರು ಭೇಟಿ ನೀಡಿ ರಜೆಯನ್ನು ಮಜಾ ಮಾಡುತ್ತಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆಯಷ್ಟೆ ಕೆಜಿಎಫ್ ಹಿರೋ ಯಶ್ ಕುಟುಂಬ, ಟಾಲಿವುಡ್‌ನ ಮೋಹನ್‌ಬಾಬು ಕುಟುಂಬ ಸೇರಿದಂತೆ ಅನೇಕ ಸ್ಟಾರ್ ಕಲಾವಿದರು ಮಾಲ್ಡೀವ್ಸ್ ನಲ್ಲಿ ಎಂಜಾಯ್ ಮಾಡುವ ಪೊಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಇನ್ನೂ ಈ ಪೊಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ವೈರಲ್ ಆಗುತ್ತಿರುತ್ತವೆ.

ಇದೀಗ ಬಾಲಿವುಡ್ ನಟಿ ಆಲಿಯಾ ಭಟ್ ಮಾಲ್ಡೀವ್ಸ್ ಪ್ರವಾಸದಲ್ಲಿದ್ದು, ಅಲ್ಲಿನ ಬೀಚ್‌ಗಳಲ್ಲಿ ತೆಗೆದ ಪೊಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಇನ್ನೂ ಈ ವಿವಿಧ ಭಂಗಿಗಳಲ್ಲಿ ತೆಗೆದ ಪೊಟೊಗಳಿಗೆ ಅಭಿಮಾನಿಗಳಿಂದ ಮೆಚ್ಚುಗೆಯ ಕಾಮೆಂಟ್‌ಗಳು ಹರಿದುಬರುತ್ತಿದೆ. ಸಮುದ್ರದ ತೀರದಲ್ಲಿ ಮರಳಿನ ಮೇಲೆ ಬಿಸಿಲಿನ ಶಾಖ ತೆಗೆದುಕೊಂಡು ಕುಳಿತಿರುವ ಆಲಿಯಾ ಭಟ್ ಪೊಟೋಗಳು ಭಾರಿ ವೈರಲ್ ಆಗುತ್ತಿದೆ.

ಇನ್ನೂ ಆಲಿಯಾ ಸಡಕ್-2 ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದು, ರಣಬೀರ್ ಕಪೂರ್ ಜೊತೆ ನಟಿಸಿರುವ ಬ್ರಹ್ಮಾಸ್ತ್ರ ಚಿತ್ರದ ಶೂಟಿಂಗ್ ಮುಗಿದಿದೆ. ಇನ್ನೂ ಬಹುನಿರೀಕ್ಷಿತ ಚಿತ್ರ ಟಾಲಿವುಡ್‌ನ ಆರ್.ಆರ್.ಆರ್ ಚಿತ್ರದಲ್ಲಿ ಸೀತಾ ಎಂಬ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಮತ್ತೊಂದು ಪ್ರಮುಖ ವಿಚಾರವೆಂದರೇ ನಟಿ ಆಲಿಯಾ ಭಟ್ ಹಾಗೂ ನಟ ರಣ್ಬೀರ್ ಕಪೂರ್ ಇಬ್ಬರೂ ಪ್ರೀತಿಯಲ್ಲಿದ್ದು, ಶೀಘ್ರದಲ್ಲಿಯೇ ಇಬ್ಬರ ಮದುವೆ ಸಹ ನಡೆಯಲಿದೆ ಎನ್ನಲಾಗುತ್ತಿದೆ.

Trending

To Top