Film News

‘RRR’ ಸಿನಿಮಾಗಾಗಿ 18 ತಿಂಗಳು ಪ್ರಾಕ್ಟೀಸ್ ಮಾಡಿದ ಅಲಿಯಾ!

ಹೈದರಾಬಾದ್: ಟಾಲಿವುಡ್ ಖ್ಯಾತ ನಿರ್ದೇಶಕ ರಾಜಮೌಳಿ ನಿರ್ದೇಶನಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ಚಿತ್ರ ಆರ್.ಆರ್.ಆರ್. ಸಿನೆಮಾದಲ್ಲಿ ಬಾಲಿವುಡ್ ನಟಿ ಸೀತಾ ಪಾತ್ರವನ್ನು ಪೋಷಣೆ ಮಾಡುತ್ತಿದ್ದು, ಈ ಚಿತ್ರದಲ್ಲಿ ನಟಿಸಲು ಸುಮಾರು ೧೮ ತಿಂಗಳು ತೆಲುಗು ಕಲಿಯುವುದನ್ನು ಪ್ರಾಕ್ಟೀಸ್ ಮಾಡಿದ್ದಾರಂತೆ ಆಲಿಯಾ.

ಈ ಕುರಿತು ಖಾಸಗಿ ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ತೆಲುಗು ಸಿನೆಮಾದಲ್ಲಿ ನಟನೆಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಇನ್ನೂ ತೆಲುಗು ಭಾಷೆಯಲ್ಲಿ ಮೊಟ್ಟಮೊದಲ ಬಾರಿಗೆ ನಟಿಸುತ್ತಿದ್ದು, ಸುಮಾರು ೧೮ ತಿಂಗಳಿನಿಂದ ತಯಾರಿ ನಡೆಸಿದ್ದೇನೆ. ಪ್ರತೀ ದಿನ ತೆಲುಗು ಮಾತನಾಡಲು ಪ್ರಯತ್ನಿಸುತ್ತಿದ್ದೆ. ಪ್ರತೀ ಕ್ಷಣದಲ್ಲೂ ಸಿನೆಮಾ ಸಾಲುಗಳನ್ನು ಕಲಿಯುತ್ತಿದ್ದರಂತೆ. ಇನ್ನೂ ಈ ಚಿತ್ರದ ಶೂಟಿಂಗ್ ನನಗೆ ಭಿನ್ನವಾದ ಅನುಭವ ನೀಡಿದೆ ಏಕೆಂದರೇ ಹಿಂದಿಯ ಜೊತೆಗೆ ನಾನು ತೆಲುಗು ಶೂಟಿಂಗ್ ನಲ್ಲೂ ಭಾಗಿಯಾಗಬೇಕಿರುವುದು. ಇನ್ನೂ ಆರ್.ಆರ್.ಆರ್. ಚಿತ್ರದಲ್ಲಿ ನಟರಾದ ರಾಮ್ ಚರಣ್ ಹಾಗೂ ಜೂನಿಯರ್ ಎನ್.ಟಿ.ಆರ್ ರವರ ಜೊತೆ ಕೆಲಸ ಮಾಡುತ್ತಿರುವುದು ಖುಷಿಯಾಗಿದೆ ಎಂದಿದ್ದಾರೆ.

ಇನ್ನೂ ಆಲಿಯಾ ಭಟ್ ಸೀತಾ ಪಾತ್ರದಲ್ಲಿ ಆರ್.ಆರ್.ಆರ್ ಚಿತ್ರದಲ್ಲಿ ನಟಿಸುತ್ತಿರುವ ಕುರಿತು ದೊಟ್ಟ ಮಟ್ಟಕ್ಕೆ ಸುದ್ದಿಯಾಗಿತ್ತು. ಇನ್ನೂ ಆಲಿಯಾ ಗಂಗೂಭಾಯಿ ಕಥಿಯವಾಡಿ ಎಂಬ ಚಿತ್ರದಲ್ಲೂ ನಟಿಸುತ್ತಿದ್ದು, ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದೆ.

Trending

To Top