ಮದುವೆಯಾಗಿ ಏಳು ತಿಂಗಳ ಕಳೆಯುವುದಕ್ಕೂ ಮುಂಚೆಯೇ ಹೆಣ್ಣು ಮಗುವಿಗೆ ಜನ್ಮ ಕೊಟ್ಟ ಆಲಿಯಾ, ಸಿಕ್ಕಾಪಟ್ಟೆ ಟ್ರೋಲ್ಸ್….!

ಬಾಲಿವುಡ್ ಸ್ಟಾರ್‍ ಜೋಡಿಗಳಲ್ಲಿ ಒಂದಾದ ರಣಬೀರ್‍ ಕಪೂರ್‍ ಹಾಗೂ ಆಲಿಯಾ ಭಟ್ ಜೋಡಿಗೆ ಮುದ್ದಾದ ಹೆಣ್ಣು ಮಗುವಾಗಿದೆ. ಈ ಜೋಡಿಯ ಮದುವೆಯಾಗಿ ಏಳು ತಿಂಗಳು ಕಳೆಯುವುದಕ್ಕೂ ಮುಂಚೆಯೇ ಆಕೆ ಹೆಣ್ಣು ಮಗುವಿಗೆ ಜನ್ಮ ಕೊಟ್ಟಿದ್ದಾರೆ. ಇನ್ನೂ ಆಲಿಯಾ ಗೆ ಅಭಿಮಾನಿಗಳು, ಸೆಲೆಬ್ರೆಟಿಗಳೂ ಎಲ್ಲರೂ ಸೇರಿ ಈ ಜೋಡಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದಾರೆ. ಶುಭಾಷಯಗಳ ಜೊತೆಗೆ ಟ್ರೋಲ್ಸ್ ಸಹ ಜೋರಾಗಿಯೇ ನಡೆಯುತ್ತಿವೆ.

ಬಾಲಿವುಡ್ ಸ್ಟಾರ್‍ ನಟ ರಣಬೀರ್‍ ಹಾಗೂ ಆಲಿಯಾ ಭಟ್ ಪ್ರೀತಿಸಿ ಮದುವೆಯಾದರು. ಕಳೆದ ಏಪ್ರಿಲ್ ಮಾಹೆಯಲ್ಲಿ ಇವರಿಬ್ಬರೂ ಮದುವೆಯಾದರು. ಮದುವೆಯಾದ ಎರಡು ತಿಂಗಳಲ್ಲೆ ಆಕೆ ಗರ್ಭೀಣಿಯಾಗಿದ್ದಾರೆ ಎಂಬ ವಿಚಾರ ಪ್ರಕಟಿಸಿದ್ದರು. ಇನ್ನೂ ಗರ್ಭಿಣಿಯಾದ ವಿಚಾರವನ್ನು ಪ್ರಕಟಿಸಿದ ನಾಲ್ಕು ತಿಂಗಳಲ್ಲೇ ಆಲಿಯಾ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಇನ್ನೂ ಈ ವಿಚಾರ ಹೊರಬರುತ್ತಿದ್ದಂತೆ ಈ ಜೋಡಿಯ ಅಭಿಮಾನಿಗಳು, ಸಿನೆಮಾ ಸೆಲಬ್ರೆಟಿಗಳು ಶುಭಾಷಯಗಳ ಸುರಿಮಳೆಗೈದಿದ್ದಾರೆ. ಒಂದು ಕಡೆ ಶುಭಾಷಯಗಳು ಹರಿದು ಬರುತ್ತಿದ್ದರೇ, ಮತ್ತೊಂದು ಕಡೆ ಟ್ರೋಲ್ ಗಳೂ ಸಹ ಅದೇ ರೀತಿಯಲ್ಲಿ ಹರಿದುಬರುತ್ತಿವೆ. ನಟಿ ಆಲಿಯಾ ಇಷ್ಟೊಂದು ಬೇಗ ಮಗುವಿಗೆ ಜನ್ಮ ನೀಡಿರುವುದು ಅನೇಕ ಸಂದೇಹಗಳಿಗೆ ಸಹ ಕಾರಣವಾಗಿದೆ.

ನಟಿ ಆಲಿಯಾ ಭಟ್ ರಣವೀರ್‍ ಜೋಡಿಗೆ ಮದುವೆಯಾಗಿ ಏಳು ತಿಂಗಳಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿರುವುದು ಅನೇಕ ಚರ್ಚೆಗಳಿಗೆ ಕಾರಣವಾಗಿದೆ. ಇನ್ನೂ ಮದುವೆಗೂ ಮುಂಚೆಯೇ ರಣವೀರ್‍ ಹಾಗೂ ಆಲಿಯಾ ಡೇಟಿಂಗ್ ನಲ್ಲಿದ್ದರು. ಅನೇಕ ವರ್ಷಗಳ ಕಾಲ ಪ್ರೀತಿಸಿ ದೊಡ್ಡವರ ಅಂಗಿಕಾರದೊಂದಿಗೆ ಮದುವೆಯಾದರು. ಇನ್ನೂ ಮದುವೆಗೂ ಮುಂಚೆಯೇ ಆಲಿಯಾ ಗರ್ಭಿಣಿಯಾದರು. ಈ ಕಾರಣದಿಂದಲೇ ಈ ಜೋಡಿ ಸೈಲೆಂಟ್ ಆಗಿ ಮದುವೆ ಸಹ ಆಗಿದ್ದಾರೆ ಎಂಬ ಮಾತುಗಳೂ ಸಹ ಕೇಳಿಬರುತ್ತಿವೆ. ಇನ್ನೂ ಇದೀಗ ಆಕೆ ಮದುವೆಯಾದ 7 ತಿಂಗಳಲ್ಲೆ ಮಗುವಿಗೆ ಜನ್ಮ ನೀಡಿರುವುದು ಅನೇಕ ಚರ್ಚೆಗಳಿಗೆ ಕಾರಣವಾಗಿದೆ. ನೆಟ್ಟಿಗರು ಇದೇ ವಿಚಾರವನ್ನು ಮುಂದಿಟ್ಟುಕೊಂಡು ಆಲಿಯಾರವರನ್ನು ಟ್ರೋಲ್ ಮಾಡುತ್ತಿದ್ದಾರೆ. ಸಿನೆಮಾ ಸೆಲಬ್ರೆಟಿಗಳ ವಿಚಾರದಲ್ಲಿ ಇಂತಹ ಟ್ರೋಲ್ ಗಳು ನಡೆಯುತ್ತಲೇ ಇರುತ್ತವೆ. ಜೊತೆಗೆ ಸೆಲಬ್ರೆಟಿಗಳಿಗೂ ಸಹ ಇದೆಲ್ಲಾ ಕಾಮನ್ ಆಗಿರುತ್ತದೆ.

ಇನ್ನೂ ಆಲಿಯಾ ರಾಜಮೌಳಿ ನಿರ್ದೇಶನದ ರೆಕಾರ್ಡ್ ಬ್ರೇಕ್ RRR ಸಿನೆಮಾದ ಮೂಲಕ ತೆಲುಗು ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. ಜೊತೆಗೆ ತನ್ನ ಪತಿ ರಣಬೀರ್‍ ಕಪೂರ್‍ ಜೊತೆಗೆ ಬ್ರಹ್ಮಾಸ್ತ್ರ ಸಿನೆಮಾದಲ್ಲೂ ಸಹ ಆಕೆ ನಟಿಸಿದ್ದರು. ಬಾಲಿವುಡ್ ನಿಂದ ಹಾಲಿವುಡ್ ಗೂ ಸಹ ಎಂಟ್ರಿ ಕೊಟ್ಟ ಆಲಿಯಾ ಹಾರ್ಟ್ ಆಫ್ ಸ್ಟೋನ್ ಎಂಬ ಸಿನೆಮಾದಲ್ಲಿ ನಟಿಸಿದ್ದಾರೆ.

Previous articleಪ್ರೇಯಸಿಗೆ ಪ್ರೀತಿಯಿಂದ ಹುಟ್ಟುಹಬ್ಬದ ಶುಭಾಷಯಗಳನ್ನು ಕೋರಿ ಕೆ.ಎಲ್.ರಾಹುಲ್, ವೈರಲ್ ಆಯ್ತು ರಾಹುಲ್ ಪೋಸ್ಟ್….!
Next articleಮೆಕಪ್ ಲೆಸ್ ಪೊಟೋಸ್ ಹಂಚಿಕೊಂಡ ಪೂಜಾ ಹೆಗ್ಡೆ, ವೈರಲ್ ಆದ ಪೊಟೊ….!