News

Bigg boss ನಲ್ಲಿ ಅಕ್ಷತಾ ಹಾಗು ರಾಕೇಶ್ ಚಕ್ಕಂದ! ವಾರ್ನಿಂಗ್ ಕೊಟ್ಟ ನವೀನ ಸಜ್ಜು

naveen-sajju

ಸದ್ಯ ನಮ್ಮ ಕನ್ನಡದ ಬಿಗ್ ಬಾಸ್ 6 ರಲ್ಲಿ ಸ್ಪರ್ಧಿಗಳಾದ ರಾಕೇಶ್ ಹಾಗು ಅಕ್ಷತಾ ಅವರದ್ದೇ ಹವಾ ಕಣ್ರೀ! ಕಳೆದ ವಾರ ಬಿಗ್ ಬಾಸ್ ಕನ್ನಡದ ಎಪಿಸೋಡ್ ಗಳಲ್ಲಿ ಸ್ಪರ್ದಿಗಳಾದ ಅಕ್ಷತಾ ಹಾಗು ರಾಕೇಶ್ ಅವರು ಮಾಡಿದ ಅವಾಂತರಗಳು ಒಂದೆರಡಲ್ಲ. ಯಾರು ಇಲ್ಲದ ಜಾಗಕ್ಕೆ ಹೋಗಿ, ಇಬ್ಬರೇ ತಬ್ಬಿ ಕೊಳ್ಳುವುದು, ಮುತ್ತಿಡುವುದು, ಬೇರೆ ಸ್ಪರ್ಧಿಗಳ ಜೊತೆ ಸೇರದೆ ಇಬ್ಬರೇ ಓಡಾಡುವುದು etc etc . ಇದರಿಂದಾಗಿ ಬಿಗ್ ಬಾಸ್ ನೋಡುವ ಜನರ ಕಣ್ಣು ಕೆಂಪಾಗಿದೆ.
ಕೆಲವರು ಹೇಳುವ ಪ್ರಕಾರ “ನಾವು ಫ್ಯಾಮಿಲಿ ಸಮೇತ ಕೂತುಕೊಂಡು, ಬಿಗ್ ಬಾಸ್ ಅನ್ನು ನೋಡುತ್ತೀವಿ, ನೀವಿಬಾರು ಇಂತಹ ಕೆಲಸಗಳನ್ನು ಮಾಡಿದರು ನಮಗೆ ನೋಡಲು ಆಗುವುದಿಲ್ಲ” ಎಂದು ಹೇಳಿದ್ದಾರೆ. ಈ ವಿಷ್ಯದ ಬಗ್ಗೆ, ಇವರಿಬ್ಬರ ಆಟಗಳನ್ನು ನೋಡಿ ನೋಡಿ ಬೇಜಾರ್ ಆಗಿ ಸ್ವತಃ ಕಿಚ್ಚ ಸುದೀಪ್ ಅವರೇ ಇವರಿಬ್ಬರಿಗೆ ವಾರ್ನಿಂಗ್ ಕೊಟ್ಟಿದ್ದಾರೆ. ಇದಲ್ಲದೆ ಅಕ್ಷತಾ ಅವರ ತಾಯಿ ವೀಕೆಂಡ್ ಸಮಯದಲ್ಲಿ ಕಿಚ್ಚ ಸುದೀಪ್ ಅವರಿಗೆ ಕಾಲ್ ಮಾಡಿ ಇಬರಿಗೆ ಬುದ್ದಿ ಹೇಳಲು ಹೇಳಿದ್ದಾರೆ.
ಈಗ ವಿಷ್ಯ ಏನಪ್ಪಾ ಅಂದರೆ, ಇವರಿಬ್ಬರ ಆಟಗಳನ್ನು ನೋಡಿ ನೋಡಿ ಬೇಸತ್ತ ಮತ್ತೊಬ್ಬ ಸ್ಪರ್ಧಿ, ಹೆಸರಾಂತ ಗಾಯಕ ನವೀನ ಸಜ್ಜು ಅವರು ಇವರಿಬ್ಬರಿಗೆ ಸರಿ ಯಾಗಿ ವಾರ್ನಿಂಗ್ ಕೊಟ್ಟಿದ್ದಾರೆ. ನವೀನ ಸಜ್ಜು ಹೇಳುವ ಪ್ರಕಾರ “ನೀವು ಇದನೆಲ್ಲ ಬಿಗ್ ಬಾಸ್ ಮನೆಯಲ್ಲಿ ಇಟ್ಟುಕೋ ಬೇಡಿ, ಇದನೆಲ್ಲ ಬಿಗ್ ಬಾಸ್ ಮನೆಯಿಂದ ಆಚೆ ಇಟ್ಟುಕೊಳ್ಳಿ, ಇದನ್ನು ಕರ್ನಾಟಕದ ಕೋಟಿ ಜನ ನೋಡುತ್ತಾರೆ, ನಿಮ್ಮ ಈ ಆಟಗಳಿಂದ ನಮ್ಮ ಮಾನ ಮರ್ಯಾದೆ ತೆಗಿಬೇಡಿ” ಎಂದು ಖಡಕ್ ಆಗಿ ಹೇಳಿದ್ದಾರೆ.
ಬಿಗ್ ಬಾಸ್ ಅಲ್ಲಿ ನಿಮಗೆಲ್ಲ ಗೊತ್ತಿರೋ ಹಾಗೆ ಸ್ಪರ್ಧಿಗಳಾದ ಅಕ್ಷತಾ ಹಾಗು ರಾಕೇಶ್ ಅವರು ಬಹಳ ಕ್ಲೋಸ್ ಆಗಿ ಇರುತ್ತಾರೆ. ಯಾರು ಇಲ್ಲ ದಿದ್ದಾಗ ತಬ್ಬಿ ಕೊಳ್ಳುವುದು, ಕೈ ಕೈ ಹಿಡಿದುಕೊಂಡು ಓಡಾಡುವುದು, ಮುತ್ತಿಡುವುದು, ಇದೆಲ್ಲ ಮಾಡುತ್ತಾರೆ. ಇವರ ಆಟಗಳನ್ನು ನೋಡಿ ನೋಡಿ ಬೇಸತ್ತು ಇತ್ತೀಚಿಗೆ ಕಿಚ್ಚ ಸುದೀಪ್ ಅವರು ಕೂಡ ವಾರ್ನ್ ಮಾಡಿದ್ದರು. ಇದಲ್ಲದೆ ಅಕ್ಷತಾ ಅವರು ಮದುವೆ ಆಗಿರುವ ಹುಡುಗಿ, ಆಕೆ ಹೇಗೆ ಈತರ ಮಾಡುತ್ತಾಳೆ ಎಂಬ ಪ್ರಶ್ನೆ ಎಲ್ಲರಿಗೂ ಇದೆ. ಇದನೆಲ್ಲ ನೋಡಿ ಮತೊಬ್ಬ ಸ್ಪರ್ಧಿ ಜಯಶ್ರೀ ಅವರು ರಾಕೇಶ್ ಅವರಿಗೆ ಬಾಯಿಗೆ ಬಂದಹಾಗೆ ಬೈದ್ದಿದ್ದಾರೆ. ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ ನಾವು ಇತ್ತೀಚಿಗೆ ಕನ್ನಡದ ಬಿಗ್ ಬಾಸ್ ಸೀಸನ್ 06 ರಲ್ಲಿ ಸ್ಪರ್ಧಿಗಳಾದ ರಾಕೇಶ್ ಹಾಗು ಅಕ್ಷತಾ ಅವರ ನಡುವಳಿಕೆ ಬಗ್ಗೆ ಈಗ ಎಲ್ಲರಿಗೂ ಗೊತ್ತೇ ಇದೆ ಕಣ್ರೀ. ಸೋಶಿಯಲ್ ಮೀಡಿಯಾ ಗಳಲ್ಲಿ ಜನರು ಇದು ಫ್ಯಾಮಿಲಿ ಷೋ ದಯವಿಟ್ಟು ರಾಕೇಶ್ ಹಾಗು ಅಕ್ಷತಾ ಅವರನ್ನು ಬಿಗ್ ಬಾಸ್ ಇಂದ ತಗೆಯಿರಿ ಎಂದು ಟ್ರೊಲ್ ಮಾಡುತ್ತಾ ಇದ್ದಾರೆ ಹಾಗು ಕಾಮೆಂಟ್ ಮಾಡ್ತಾ ಇದ್ದಾರೆ. ಅವರಿಬ್ಬರ ಆತ್ಮೀಯತೆ ಯನ್ನು ನೋಡಿ ನೋಡಿ ಸಾಕಾಗಿ ಕಳೆದ ವಾರ ನಮ್ಮ ಕಿಚ್ಚ ಸುದೀಪ್ ಅವರು ಇವರಿಬ್ಬರಿಗೆ ಸೂಕ್ಷ್ಮ ವಾಗಿ ಎಚ್ಚರಿಕೆ ಕೊಟ್ಟಿದ್ದರು.
ಆದರೆ ಇದಕ್ಕೆಲ್ಲ ಕೇರ್ ಮಾಡದೆ ಬಿಗ್ ಬಾಸ್ ಸ್ಪರ್ಧಿಗಳಾದ ರಾಕೇಶ್ ಹಾಗು ಅಕ್ಷತಾ ಅವರು ಮತ್ತೆ ತಮ್ಮ ಆತ್ಮೀಯತೆಯನ್ನು ಮುಂದು ವರಿಸಿ, ಯಾರು ಇಲ್ಲದಿದ್ದಾಗ ತಬ್ಬಿ ಕೊಳ್ಳುವುದು, ಕೈ ಕೈ ಹಿಡಿದುಕೊಂಡು ಓಡಾಡುವುದು, ಇಬ್ಬರೇ ಇರುವುದು ಇದೆಲ್ಲ ಮತ್ತೆ ಮಾಡಲು ಶುರು ಮಾಡಿದ್ದಾರೆ. ಇದಲ್ಲದೆ ರಾತ್ರಿ ವೇಳೆ ಇವರಿಬ್ಬರು ಹಾಡು ಹಾಕಿ ಕೊಂಡು ಡಾನ್ಸ್ ಮಾಡುವುದು, ಯಾರು ಇಲ್ಲದ ಜಾಗಕ್ಕೆ ಹೋಗಿ ತಬ್ಬಿಕೊಳ್ಳುವುದನ್ನು ಮಾಡುತ್ತಿದ್ದಾರೆ.

Trending

To Top