Film News

ಮಾಲ್ಡೀವ್ಸ್ ನಲ್ಲಿ ಎಂಜಾಯ್ ಮಾಡಿದ ಅಕ್ಕಿನೇನಿ ದಂಪತಿ

ಹೈದರಾಬಾದ್: ಇತ್ತಿಚಿಗೆ ಸೆಲೆಬ್ರೆಟಿಗಳ ಸ್ವರ್ಗವಾಗಿದೆ ಮಾಲ್ಡೀವ್ಸ್. ಕೆಲವು ದಿನಗಳ ಹಿಂದೆಯಷ್ಟೆ ಕೆಜಿಎಫ್ ನಾಯಕ ಯಶ್ ಕುಟುಂಬ, ಟಾಲಿವುಡ್‌ನ ಮೋಹನ್ ಬಾಬು ಕುಟುಂಬ ಮಾಲ್ಡೀವ್ಸ್ ನಲ್ಲಿ ರಜೆಯನ್ನು ಕಳೆದಿದ್ದು, ಈ ಪೊಟೋಗಳು ಸಖತ್ ವೈರಲ್ ಆಗಿತ್ತು.

ಅಂದಹಾಗೆ ಮಾಲ್ಡೀವ್ಸ್ ನಲ್ಲಿ ಎಂಜಾಯ್ ಮಾಡುತ್ತಿರುವ ದಂಪತಿ ಬೆರ್‍ಯಾವುದೇ ಅಲ್ಲ ಟಾಲಿವುಡ್‌ನ ಕಿಂಗ್ ನಾಗಾರ್‍ಜುನ ಹಾಗೂ ಅಮಲಾ ಜೋಡಿ ಮಾಲ್ಡೀವ್ಸ್ ಸೇರಿದೆ. ಕೆಲವು ದಿನಗಳ ಹಿಂದೆಯಷ್ಟೆ ನಾಗಾರ್‍ಜುನ ಹಾಗೂ ಅಮಲ ದಂಪತಿ ಮಾಲ್ಡೀವ್ಸ್‌ಗೆ ರಜಾ ದಿನಗಳನ್ನು ಕಳೆಯಲು ತೆರಳಿದ್ದರು. ಅಲ್ಲಿನ ಅವರು ಎಂಜಾಯ್ ಮಾಡಿರುವ ಕೆಲವೊಂದು ಪೊಟೋಗಳನ್ನು ಅಮಲ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಸೇರ್ ಮಾಡಿದ್ದು, ಈ ಪೊಟೋಗಳು ಸಖತ್ ವೈರಲ್ ಆಗಿದೆಯಂತೆ.

ಆದರೆ ಈ ಪೊಟೋಗಳಲ್ಲಿ ನಾಗಾರ್‍ಜುನ ಕುಟುಂಬದ ಅಖಿಲ್, ಚೈತನ್ಯ, ಸಮಂತಾ ಯಾರು ಇಲ್ಲ. ನಾಗಾರ್‍ಜುನ ಅಮಲಾ ಇಬ್ಬರೂ ಮಾಲ್ಡೀವ್ಸ್ ತೆರಳುವುದಕ್ಕೂ ಮುನ್ನವೇ ಕುಟುಂಬದ ಇತರರು ಮಾಲ್ಡೀವ್ಸ್ ಗೆ ತೆರಳಿ ಎಂಜಾಯ್ ಮಾಡಿದ್ದರು. ಇನ್ನೂ ಈ ಪ್ರವಾಸಕ್ಕೆ ಸಂಬಂಧಿಸಿದ ಕೆಲವೊಂದು ಪೊಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಇನ್ನೂ ಕಾಜಲ್ ಅಗರ್ವಾಲ್ ತಮ್ಮ ಮದುವೆಯ ನಂತರ ಹನಿಮೂನ್ ಗಾಗಿ ಮಾಲ್ಡೀವ್ಸ್ ಗೆ ಹೋಗಿಬಂದ ನಂತರ ಕ್ರಮೇಣವಾಗಿ ರಕುಲ್ ಪ್ರೀತ್ ಸಿಂಗ್, ದಿಶಾ ಪಟಾನಿ, ಪ್ರಣಿತಾ, ಶಾನ್ವಿ, ನಾಗಚೈತನ್ಯ ಹಾಗೂ ಸಮಂತಾ ಜೋಡಿ, ನಿಹಾರಿಕಾ ಚೈತನ್ಯ ಸೇರಿದಂತೆ ಅನೇಕರು ಮಾಲ್ಡೀವ್ಸ್ ನಲ್ಲಿ ರಜಾ ದಿನಗಳನ್ನು ಕಳೆದು ಬರುತ್ತಿರುತ್ತಾರೆ.

Trending

To Top