Film News

ರೊಮ್ಯಾಂಟಿಕ್ ಪೋಸ್ಟರ್ ಮೂಲಕ ಸುದ್ದಿಯಾದ ಡೈರೆಕ್ಟರ್ ಪುತ್ರ

ಹೈದರಾಬಾದ್: ಟಾಲಿವುಡ್‌ನ ಟಾಪ್ ನಿರ್ದೆಶಕರಲ್ಲೊಬ್ಬರಾದ ಪೂರಿ ಜಗನ್ನಾಥ್ ಪುತ್ರ ಆಕಾಶ್ ಪೂರಿ ಅಭಿನಯದ ರೊಮ್ಯಾಂಟಿಕ್ ಚಿತ್ರದ ಪೋಸ್ಟರ್ ಇದೀಗ ಬಿಡುಗಡೆಯಾಗಿದ್ದು, ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವುದರ ಜೊತೆಗೆ ಅನೇಕ ವಿಮರ್ಶೆಗಳ ಕಾಮೆಂಟ್‌ಗಳು ಸಹ ಬರುತ್ತಿದೆ.

ಅನೇಕ ಹಿರೋಗಳಿಗೆ ಹಿಟ್ ಸಿನೆಮಾಗಳನ್ನು ನೀಡಿದ ಪೂರಿ ಜಗನ್ನಾಥ್ ತಮ್ಮ ಮಗನಿಗೆ ಒಂದು ಹಿಟ್ ಸಿನೆಮಾ ನೀಡಲು ಸಾಧ್ಯವಾಗಲಿಲ್ಲ. ಎಂತಹೇ ಹಿರೋ ಆದರೂ ಸಹ ತನ್ನದೇ ಆದ ಶೈಲಿಯಲ್ಲಿ ನಿರ್ದೇಶನ ಮಾಡಿ ಸಿನೆಮಾ ಹಿಟ್ ಆಗುವಂತೆ ಮಾಡುವ ತಾಕತ್ತು ಪೂರಿ ಜಗನ್ನಾಥ್ ರವರಿಗಿದೆ. ಆದರೆ ತನ್ನ ಮಗನ ವಿಚಾರದಲ್ಲಿ ಇದು ವರ್ಕೌಟ್ ಆಗಿಲ್ಲ. ಈ ಹಿನ್ನೆಲೆಯಲ್ಲಿ ಪೂರಿ ಜಗನ್ನಾಥ್ ತನ್ನ ಶಿಷ್ಯನಾದ ಅನೀಲ್ ಪೋದೂರಿ ಎಂಬುವವರ ನಿರ್ದೇಶಕತ್ವದಲ್ಲಿ ರೊಮ್ಯಾಂಟಿಕ್ ಎಂಬ ಚಿತ್ರದಲ್ಲಿ ಆಕಾಶ್ ಪೂರಿ ನಾಯಕನಾಗಿ ನಟಿಸುತ್ತಿದ್ದು, ಇದೀಗ ಪೋಸ್ಟರ್ ಸಹ ಬಿಡುಗಡೆಯಾಗಿದೆ. ಈ ಪೋಸ್ಟರ್ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಇನ್ನೂ ಈ ರೊಮ್ಯಾಂಟಿಕ್ ಚಿತ್ರದಲ್ಲಿ ಆಕಾಶ್ ಪೂರಿ ನಾಯಕನಾಗಿ, ಕೇತಿಕಾ ಶರ್ಮಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಜೊತೆಗೆ ಪ್ರಮುಖ ಪಾತ್ರವೊಂದರಲ್ಲಿ ಹಿರಿಯ ನಟಿ ರಮ್ಯಕೃಷ್ಣಾ ಸಹ ನಟಿಸುತ್ತಿದ್ದಾರೆ. ಜೊತೆಗೆ ಈ ಚಿತ್ರವನ್ನು ಚಾರ್‍ಮಿ ಹಾಗೂ ಪೂರಿ ಇಬ್ಬರೂ ನಿರ್ಮಾಣ ಮಾಡುತ್ತಿದ್ದಾರೆ. ಇನ್ನೂ ಇತ್ತೀಚಿಗಷ್ಟೆ ಬಿಡುಗಡೆಯಾದ ರೊಮ್ಯಾಂಟಿಕ್ ಚಿತ್ರದ ಪೋಸ್ಟರ್ ನಲ್ಲಿ ನಾಯಕ ಹಾಗೂ ನಾಯಕಿ ಇಬ್ಬರೂ ತಬ್ಬಿಕೊಂಡು ಲಿಪ್ ಲಾಕ್ ಮಾಡುವ ಚಿತ್ರ ಟ್ರೆಂಡಿಂಗ್ ನಲ್ಲಿದೆ.

ಇನ್ನೂ ಈ ಚಿತ್ರದ ಶೂಟಿಂಗ್ ಈಗಾಗಲೇ ಮುಗಿದಿದ್ದು, ಕೊರೊನಾ ಕಾರಣದಿಂದಾಗಿ ತೆರೆಗೆ ಬಂದಿರಲಿಲ್ಲ. ಇದೀಗ ಜೂನ್ 18 ರಂದು ಬಿಡುಗಡೆಯಾಗಲಿದೆ ಎಂಬ ವಿಚಾರವನ್ನು ಚಿತ್ರತಂಡ ತಿಳಿಸಿದ್ದು, ಈ ಸಿನೆಮಾ ಯಾವ ರೀತಿಯಲ್ಲಿ ಪ್ರೇಕ್ಷಕರ ಮನ ಗೆಲ್ಲಲಿದೆ ಎಂಬುದನ್ನು ಕಾದು ನೋಡಬೇಕಿದೆ.

Trending

To Top