ಚೆನೈ: ಕಳೆದ 2007 ರಲ್ಲಿ ರಿಲೀಸ್ ಆಗಿದ್ದ ಬಿಲ್ಲಾ ಎಂಬ ಚಿತ್ರವನ್ನು ಪುನಃ ಚಿತ್ರಮಂದಿರಗಳಲ್ಲಿ ರಿ ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ ಎನ್ನಲಾಗುತ್ತಿದೆ. ಇನ್ನೂ ಈ ಸುದ್ದಿ ಚಿತ್ರದಲ್ಲಿ ನಾಯಕನಾಗಿ ಪಾತ್ರ ನಿರ್ವಹಿಸಿದ್ದ ಅಜಿತ್ ಅಭಿಮಾನಿಗಳಿಗೆ ಸಿಹಿ ಸುದ್ದಿ ಎನ್ನಲಾಗುತ್ತಿದೆ.
ಕಾಲಿವುಡ್ನ ಸ್ಟಾರ ನಟರೊಲ್ಲೊಬ್ಬರಾದ ಅಜಿತ್ ಅಭಿನಯದ ಬಿಲ್ಲ ಚಿತ್ರ ಸೂಪರ್ ಹಿಟ್ ಹೊಡೆದಿತ್ತು. ಈ ಚಿತ್ರದಲ್ಲಿ ದ್ವಿಪಾತ್ರದಲ್ಲಿ ಅಜಿತ್ ಅಭಿನಯಿಸಿದ್ದು, ನಯನತಾರಾ ಹಾಗೂ ನಮಿತ ಇಬ್ಬರು ನಟಿಯರು ಬಣ್ಣ ಹಚ್ಚಿದ್ದರು. ಇದೀಗ ಮಾರ್ಚ್ 12 ರಂದು ಬಿಲ್ಲಾ ಸಿನೆಮಾದ ತಮಿಳುನಾಡಿನಾದ್ಯಂತ ಪುನಃ ರಿಲೀಸ್ ಆಗಲಿದೆಯಂತೆ.
ಇನ್ನೂ ಬಿಲ್ಲಾ ಸಿನೆಮಾವನ್ನು ವಿಷ್ಣುವರ್ಧನ್ ನಿರ್ದೇಶನ ಮಾಡಿದ್ದು, ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಬಿಲ್ಲಾ ಸಿನೆಮಾ ರಿಮೇಕ್ ಇದಾಗಿದೆ. ಬಿಡುಗಡೆಯಾಗಿ ಅನೇಕ ಸಿನಿ ರಸಿಕರನ್ನು ರಂಜಿಸಿದ ಬಿಲ್ಲಾ ಚಿತ್ರ ಮತ್ತೊಮ್ಮೆ ಪ್ರೇಕ್ಷಕರನ್ನು ರಂಜಿಸಲು ರಿ ರಿಲೀಸ್ ಆಗುತ್ತಿದೆ.
ಸದ್ಯ ನಟ ಅಜಿತ್ ವಾಲಿಮೈ ಸಿನೆಮಾದಲ್ಲಿ ಪುಲ್ ಬ್ಯುಸಿಯಾಗಿದ್ದು, ಕೊರೋನಾ ಲಾಕ್ಡೌನ್ ನಿಮಿತ್ತ ಚಿತ್ರೀಕರಣ ನಿಲ್ಲಿಸಲಾಗಿತ್ತು, ಇದೀಗ ಲಾಕ್ಡೌನ್ ತೆರವುಗೊಳಿಸಿದ್ದು, ಪುನಃ ಚಿತ್ರೀಕರಣ ಪ್ರಾರಂಭವಾಗಿತ್ತು. ಆದರೆ ಅಜಿತ್ ಅನಾರೋಗ್ಯದಿಂದ ಕೆಲವು ದಿನಗಳು ಪುನಃ ಚಿತ್ರೀಕರಣಕ್ಕೆ ಬ್ರೇಕ್ ನೀಡಲಾಗಿತ್ತು. ಇದೀಗ ಪುನಃ ಚಿತ್ರೀಕರಣ ಪ್ರಾರಂಭವಾಗಿದೆ. ಸದ್ಯ ಅಜಿತ್ ಅಭಿಮಾನಿಗಳು ಬಿಲ್ಲಾ ಸಿನೆಮಾ ರಿಲೀಸ್ ಗಾಗಿ ಕಾಯುತ್ತಿದ್ದು, ಮತ್ತೊಮ್ಮೆ ಹಿಟ್ ಹೊಡೆಯುತ್ತಾ ಎಂಬುದನ್ನು ಕಾದು ನೋಡಬೇಕಿದೆ.
