Film News

ಸಿಲ್ಕ್ ಮಂಜು ನಿರ್ಮಾಣದಲ್ಲಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ ಐಂದ್ರಿತಾ ದಿಂಗತ್ ಜೋಡಿ

ಬೆಂಗಳೂರು: ಸುಮಾರು 8 ವರ್ಷಗಳ ನಂತರ ಸ್ಯಾಂಡಲ್‌ವುಡ್‌ನಲ್ಲಿ ಪ್ರಸಿದ್ದವಾದ ಜೋಡಿ ದೂದ್‌ಪೇಡ ದಿಗಂತ್ ಹಾಗೂ ಐಂದ್ರಿತಾ ರೈ ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಚಿತ್ರದ ಮೂಲಕ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಈ ವಿಚಾರವನ್ನು ಐಂದ್ರಿತಾ ರೈ ರವರೇ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಐಂದ್ರಿತಾ ಹಾಗೂ ದಿಗಂತ್ ಈ ಹಿಂದೆ ಮನಸಾರೆ, ಪಾರಿಜಾತ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿದ್ದು, ಇವರ ನಟನೆಗೆ ಕನ್ನಡ ಸಿನಿಮಾ ಪ್ರಿಯರು ಸೇರಿದಂತೆ ವಿವಿಧ ಭಾಗಗಳಿಂದ ಅಭಿಮಾನಿಗಳ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಪ್ರಸ್ತುತ ವಿನಾಯಕ ಕೋಡ್ಸರ ನಿರ್ದೇಶನದಲ್ಲಿ ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಎಂಬ ಚಿತ್ರದಲ್ಲಿ ಇಬ್ಬರೂ ನಟಿಸುತ್ತಿದ್ದು, ಕರ್ನಾಟಕದ ಅನೇಕ ಸುಂದರ ತಾಣಗಳಲ್ಲಿ ಚಿತ್ರೀಕರಣ ಸಹ ಪ್ರಾರಂಭವಾಗಿದೆ.

ಇನ್ನೂ ಈ ಚಿತ್ರದ ಕುರಿತು ಐಂದ್ರಿತಾ ರವರೇ ಸ್ವತಃ ಬರೆದುಕೊಂಡಿದ್ದು, ಮಲೆನಾಡಿದ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ನನ್ನ ಆಫ್ ಸ್ಕ್ರೀನ್ ಲವ್‌ನೊಂದಿಗೆ ಪುರ್ನ ೮ ವರ್ಷಗಳ ನಂತರ ಪರದೆಯ ಮೇಲೆ ದಿಗಂತ್‌ರೊಂದಿಗೆ ಕಾಣಿಸಿಕೊಳ್ಳುತ್ತಿರುವುದು ಖುಷಿ ಸಾಗರಕ್ಕೂ ಮಿಗಿಲಾದದು ಎಂದು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಇನ್ನೂ ಈ ಚಿತ್ರ ಸಿಲ್ಕ್ ಮಂಜು ನಿರ್ಮಾಣದಲ್ಲಿ ತಯಾರಾಗುತ್ತಿದ್ದು, ಕನ್ನಡತಿ ಚಿತ್ರದಲ್ಲಿ ಖ್ಯಾತಿ ಪಡೆದಿರುವ ರಂಜನಿ ರಾಘವನ್ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಜ್ವಲ್ ಪೈ ಸಂಗೀತ ಸಂಯೋಜನೆ ಮಾಡಿದ್ದು, ಕಿಚ್ಚ ಸುದೀಪ್‌ರವರು ಈ ಚಿತ್ರ ಯಶಸ್ಸು ಗಳಿಸಲಿ ಎಂದು ಶುಭ ಹಾರೈಸಿದ್ದಾರೆ.

Trending

To Top