Cinema

ಹೀರೋಗಳಿಗೆ ಕೊಡುವ 5 ಪೆರ್ಸೆಂಟ್ ಸಂಭಾವನೆ ಹೀರೋಯಿನ್ ಗಳಿಗೆ ಕೊಡಲ್ಲ! ಐಂದ್ರಿತಾ ರೇ ಹೇಳಿದ್ದೇನು ನೋಡಿ

ಮೂಲತಃ ಬೆಂಗಾಲಿ ಕುಟುಂಬದವರಾದ ಐಂದ್ರಿತಾ ರೇ ಅವರು ಹುಟ್ಟಿದ್ದು, ರಾಜಸ್ತಾನದ ಉದೈಪುರ್ ನಲ್ಲಿ! ವಿದ್ಯಾಭ್ಯಾಸ ಮುಗಿಸಿ ಮೊಡೀಲಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡಿದ ಐಂದ್ರಿತಾ ರೇ ಅವರು ನಂತರ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟರು. ಐಂದ್ರಿತಾ ರೇ ಅವರ ಮೊದಲ ಸಿನಿಮಾ ಪ್ರಜ್ವಲ್ ದೇವರಾಜ್ ಅವರ ಜೊತೆ 2008 ರಲ್ಲಿ ಬಿಡುಗಡೆ ಆದ ಮೆರವಣಿಗೆ. ನಂತರ ಮಸ್ತ್ ಮಜಾ ಮಾಡಿ, ಜಂಗ್ಲಿ ಸೇರಿದಂತೆ ಹಲವಾರು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. 2017 ರಲ್ಲಿ ಐಂದ್ರಿತಾ ರೇ ಅವರು ಹೀರೋಯಿನ್ ಆಗಿ ಮೇಲುಕೋಟೆ ಮಂಜ ಎಂಬ ಚಿತ್ರದಲ್ಲಿ ಜಗ್ಗೇಶ್ ಅವರ ಜೊತೆ ನಟಿಸಿದ್ದಾರೆ! ಆ ನಂತರ ಹೀರೋಯಿನ್ ಆಗಿ ಐಂದ್ರಿತಾ ರೇ ಅವರು ಯಾವ ಕನ್ನಡ ಸಿನಿಮಾಗಳಲ್ಲಿ ಕೂಡ ನಟಿಸಿಲ್ಲ! ಕಾರಣ ಏನು ಗೊತ್ತಾ, ಮುಂದೆ ಓದಿರಿ

ಹೌದು! ಐಂದ್ರಿತಾ ರೇ ಅವರು ಕೇವಲ 15 ಕನ್ನಡ ಸಿನಿಮಾಗಳಲ್ಲಿ ಹೀರೋಯಿನ್ ಆಗಿ ನಟಿಸಿದ್ದು, ಹಾಗು 5 ಚಿತ್ರಗಳಲ್ಲಿ ಗೆಸ್ಟ್ ಆಗಿ ಕೂಡ ಮಾಡಿದ್ದಾರೆ! ನಂತರ ಐಂದ್ರಿತಾ ರೇ ಅವರು ಕೆಲವು ಹಿಂದಿ ಹಾಗು ಬೆಂಗಾಲಿ ಚಿತ್ರಗಳಲ್ಲಿ ಕೂಡ ನಟಿಸಿದ್ದಾರೆ. ಹಿಂದಿ ಯಲ್ಲಿ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಅವರ ಜೊತೆ ಕೂಡ ಕೆಲಸ ಮಾಡಿದ್ದಾರೆ. ಐಂದ್ರಿತಾ ರೇ ಅವರ ಪ್ರಕಾರ ಕನ್ನಡದಲ್ಲಿ ನಟಿಯರಿಗೆ ಸಂಭಾವನೆ ಬಹಳ ಕಡಿಮೆ, ಹೀರೋಗೆ ಕೊಡುವ ಶೇಕಡಾ 5 ಪೆರ್ಸೆಂಟ್ ಕೂಡ ನಟಿಯರಿಗೆ ಕೊಡಲ್ಲ, ಇಷ್ಟು ಕಡಿಮೆ ಹಣ ಯಾಕೆ ಹೀರೋಗಳಿಗೆ ಕೋಟಿ ಕೋಟಿ ಕೊಡುತ್ತೀರಾ, ನಟಿಯರಿಗೆ ಮಾತ್ರ ಕೊಡಲ್ಲ” ಅಂತ ಕೇಳಿದ್ದಾರೆ. ಕಳೆದ ಎರಡು ವರ್ಷಗಳಿಂದ ಐಂದ್ರಿತಾ ರೇ ಅವರು ಅಲ್ಲೊಂದು ಇಲ್ಲೊಂದು ಸಿನಿಮಾಗಳ ಐಟಂ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಇವೆಲ್ಲದರ ನಡುವೆ ಕೂಡ ಐಂದ್ರಿತಾ ರೇ ಅವರು ಈ ವರ್ಷ ಪ್ರೇಮಾಂ ಪೂಜೆಯಂ ಹಾಗು ಗರುಡ ಎಂಬ ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಇದಲ್ಲದೆ ದಿಗಂತ್ ಅವರ ಜೊತೆ ನಮ್ಮ ಮದುವೆಯ ನಂತರ ಫ್ಯಾಮಿಲಿ ಲೈಫ್ ನಲ್ಲಿ ಬಹಳ ಬ್ಯುಸಿ ಆಗಿದ್ದು, ಯಾವುದೇ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ! ಇದಲ್ಲದೆ ದಿಗಂತ್ ಅವರ ಪ್ರವಾಸಗಳಿಗೆ ಕೂಡ ಐಂದ್ರಿತಾ ರೇ ಹಾಗು ಅವರ ಕುಟುಂಬ ಹೋಗುತ್ತಾರೆ! ಸದ್ಯ ನೆನ್ನೆ ಅಷ್ಟೇ ಐಂದ್ರಿತಾ ರೇ ಹಾಗು ದಿಗಂತ್ ಅವರಿಗೆ ಸಿಸಿಬಿ ಇಂದ ನೋಟೀಸ್ ಕೊಡಲಾಗಿದ್ದು, ಇದರ ಬಗ್ಗೆ ಸದ್ಯ ವಿಚಾರಣೆ ನಡೆಯುತ್ತಾ ಇದೆ! ಇತ್ತ ಸದ್ಯ ದಿಗಂತ್ ಅವರು ಇಂದು ಮಾರಿ ಗೋಲ್ಡ್ ಎಂಬ ಚಿತ್ರದ ಚಿತ್ರೀಕರಣದಲ್ಲಿ ಬೆಂಗಳೂರಿನಲ್ಲೇ ಪಾಲ್ಗೊಳ್ಳಲಿದ್ದಾರೆ! ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ಕಾಮೆಂಟ್ ಮೂಲಕ ನಮಗೆ ತಿಳಿಸಿರಿ. ಕನ್ನಡ ಚಿತ್ರಗಳ ಬಗ್ಗೆ ಎಲ್ಲಾ ಲೇಟೆಸ್ಟ್ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿ.

Trending

To Top