Film News

ಸಾಕು ನಾಯಿಗಳನ್ನೇ ತಮ್ಮ ಮಕ್ಕಳೆಂದ ಐಂದ್ರಿತಾ!

ಬೆಂಗಳೂರು: ಚಂದನವನದ ಲವ್ಲಿ ದಂಪತಿ ದಿಂಗತ್ ಹಾಗೂ ಐಂದ್ರಿತಾ ರೇ ಅವರು ತಮ್ಮ ಸಾಕು ನಾಯಿಗಳನ್ನೇ ತಮ್ಮ ಮಕ್ಕಳೆಂದು ಭಾವಿಸಿ ಪ್ರೀತಿಯಿಂದ ಸಾಕುತ್ತಿದ್ದೇವೆ ಎಂದು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.

ಸುಮಾರು ದಿನಗಳಿಂದ ಐಂದ್ರಿತಾ ಹಾಗೂ ದಿಗಂತ್ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಇದಕ್ಕೆ ಐಂದ್ರಿತಾ ರೇ ರವರೇ ಸಾಮಾಜಿಕ ಜಾಲತಾಣಗಳ ಮೂಲಕ ಈ ಸುದ್ದಿಗೆ ಸ್ಪಷ್ಟನೆ ನೀಡಿದ್ದಾರೆ. ನಾವು ಮಗುವಿನ ನಿರೀಕ್ಷೆಯಲ್ಲಿದ್ದೇವೆ ಎಂದು ಕೆಲ ಮಾದ್ಯಮಗಳು ವರದಿ ಮಾಡಿವೆ. ಆದರೆ ಈಗಾಗಲೇ ನಾವು ಪೋಷಕರಾಗಿದ್ದೇವೆ. ನಾನು ಮತ್ತು ದಿಗಂತ್ ಎರಡು ನಾಯಿಗಳನ್ನು ಮಕ್ಕಳಂತೆ ಸಾಕುತ್ತಿದ್ದೇವೆ. ಇದು ಮುಂದರೆವರೆಯುತ್ತದೆ ಎಂದಿದ್ದಾರೆ.

ಇತ್ತೀಚಿಗಷ್ಟೆ ನಡೆದ ಸಂದರ್ಶನವೊಂದರಲ್ಲಿ ದಿಗಂತ್ ಸಂದರ್ಶಕಿಯೊಬ್ಬರು ಪ್ರಶ್ನೆ ಕೇಳುತ್ತಾರೆ. ಮಗುವಿನ ನಿರೀಕ್ಷೆಯಲ್ಲಿದ್ದಾರಾ ಎಂದು ದಿಗಂತ್ ರವರನ್ನು ಕೇಳಿದಾಗ, ಅದಕ್ಕೆ ಉತ್ತರಿಸಿದ ದಿಗಂತ್ ಸುಮ್ಮನೇ ಇರಿ ಅದರ ಬಗ್ಗೆ ಮಾತನಾಡಬೇಡಿ ಎಂದು ತಮಾಷೆ ಮಾಡಿದ್ದರು. ಇದನ್ನೆ ಆಧರಿಸಿ ದಿಗಂತ್ ದಂಪತಿ ಮಗುವಿನ ನಿರೀಕ್ಷೆಯಲ್ಲಿರಬಹುದೆಂಬ ಸುದ್ದಿ ಹರಿದಾಡಿತ್ತು.

ಕಳೆದ 2018 ರಲ್ಲಿ ದಿಗಂತ್ ಹಾಗೂ ಐಂದ್ರಿತಾ ಹಸೆಮಣೆ ಏರಿದ್ದರು. ಮದುವೆಯ ಬಳಿಕವೂ ಇಬ್ಬರೂ ಅನೇಕ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಕೆಲವು ಸಾಹಸಗಳನ್ನು ಸಹ ಮಾಡುತ್ತಿರುತ್ತಾರೆ. ರಿವರ್ ರ್‍ಯಾಪ್ಟಿಂಗ್, ಸೈಕ್ಲಿಂಗ್, ಕಸರತ್ತು, ಸರ್ಫಿಂಗ್ ಸೇರಿದಂತೆ ಹಲವಾರು ಸಾಹಸ ಕ್ರೀಡೆಗಳಲ್ಲಿ ಜೋಡಿ ಪಾಲ್ಗೊಳ್ಳುತ್ತಿರುತ್ತಾರೆ. ಜೊತೆಗೆ ಕೆಲವೊಂದು ಪೊಟೋಗಳನ್ನು ಸಹ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

Trending

To Top