ಮತ್ತೊಮ್ಮೆ ನಿಧಿ ಅಗರ್ವಾಲ್ ಮದುವೆ ರೂಮರ್, ಸಿಎಂ ಪುತ್ರ ಆಕೆಯ ಬಗ್ಗೆ ಮಾಡಿದ ಕಾಮೆಂಟ್ ಏನು?

ಕೆಲವೇ ಸಿನೆಮಾಗಳಲ್ಲಿ ನಟಿಸಿದರೂ ಹೆಚ್ಚು ಖ್ಯಾತಿ ಪಡೆದುಕೊಂಡ ನಟಿಯರಲ್ಲಿ ನಿಧಿ ಅಗರ್ವಾಲ್ ಸಹ ಒಬ್ಬರಾಗಿದ್ದಾರೆ. ಹಿಂದಿ ಸಿನೆಮಾದ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಈಕೆ ತೆಲುಗು ಸಿನಿರಂಗದಲ್ಲಿ ಹೆಚ್ಚು ಖ್ಯಾತಿ ಪಡೆದುಕೊಂಡರು. ಅದರಲ್ಲೂ ಇಸ್ಮಾರ್ಟ್ ಶಂಕರ್‍ ಸಿನೆಮಾದ ಮೂಲಕ ಬ್ಲಾಕ್ ಬ್ಲಸ್ಟರ್‍ ಹಿಟ್ ತೆಗೆದುಕೊಂಡರು. ಬಳಿಕ ಆಕೆ ನಟಿಸಿದ್ದ ಸಿನೆಮಾಗಳು ಅಷ್ಟೊಂದು ಸಕ್ಸಸ್ ತಂದುಕೊಡಲಿಲ್ಲ. ಸದ್ಯ ನಿಧಿ ಪ್ಯಾನ್ ಇಂಡಿಯಾ ಸಿನೆಮಾ ಆದ ಸ್ಟಾರ್‍ ನಟ ಪವನ್ ಕಲ್ಯಾಣ್ ಜೊತೆ ಹರಿಹರ ವೀರಮಲ್ಲು ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಇದೀಗ ನಟಿ ನಿಧಿ ಅಗರ್ವಾಲ್ ಬಗ್ಗೆ ಮದುವೆ ರೂಮರ್‍ ಒಂದು ಹರಿದಾಡುತ್ತಿದೆ.

ನಟಿ ನಿಧಿ ಅಗರ್ವಾಲ್ ನಟಿಸಿದ್ದು ಕೆಲವೇ ಸಿನೆಮಾಗಳಲ್ಲಿ. ಆದರೆ ಆಕೆ ಯುವಜನತೆಯಲ್ಲಿ ಒಳ್ಳೆಯ ಕ್ರೇಜ್ ಪಡೆದುಕೊಂಡಿದ್ದಾರೆ. ಸವ್ಯಸಾಚಿ ಎಂಬ ತೆಲುಗು ಸಿನೆಮಾದ ಮೂಲಕ ಟಾಲಿವುಡ್ ಗೆ ಎಂಟ್ರಿ ಕೊಟ್ಟ ಈಕೆ ಪೂರಿ ಜಗನ್ನಾಧ್ ನಿರ್ದೇಶನದ ಇಸ್ಮಾರ್ಟ್ ಶಂಕರ್‍ ಸಿನೆಮಾ ಮೂಲಕ ಬಿಗ್ ಹಿಟ್ ಪಡೆದುಕೊಂಡರು. ಇದೀಗ ನಿಧಿ ಅಗರ್ವಾಲ್ ರವರಿಗೆ ಸಾಲು ಸಾಲು ಸಿನೆಮಾ ಅವಕಾಶಗಳು ಬರುತ್ತಿವೆ. ಈ ಹಾದಿಯಲ್ಲೇ ಆಕೆ ಪವನ್ ಕಲ್ಯಾಣ್ ಅಭಿನಯಿಸುತ್ತಿರುವ ಹರಿಹರ ವೀರಮಲ್ಲು ಎಂಬ ಪ್ಯಾನ್ ಇಂಡಿಯಾ ಸಿನೆಮಾದಲ್ಲಿ ನಟಿಸುವ ಅವಕಾಶ ಪಡೆದುಕೊಂಡರು. ಜೊತೆಗೆ ತಮಿಳುನಾಡು ಸಿಎಂ ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್ ಜೊತೆಗೆ ಕಲಗ ತಲೈವನ್ ಎಂಬ ಸಿನೆಮಾದಲ್ಲೂ ಸಹ ನಿಧಿ ಹೆಜ್ಜೆ ಹಾಕಿದ್ದಾರೆ. ಈ ಸಿನೆಮಾ ಇದೇ ನವೆಂಬರ್‍ 18 ರಂದು ರಿಲೀಸ್ ಆಗಲಿದೆ.

ಈ ಸಿನೆಮಾದ ಪ್ರೀ ರಿಲೀಸ್ ಕಾರ್ಯಕ್ರಮವನ್ನು ಇತ್ತೀಚಿಗೆ ಚೆನೈನಲ್ಲಿ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ನಟ ಉದಯನಿಧಿ ನಟಿ ನಿಧಿ ಅಗರ್ವಾಲ್ ಕುರಿತಂತೆ ಕೆಲವೊಂದು ಕಾಮೆಂಟ್ ಗಳನ್ನು ಮಾಡಿದ್ದಾರೆ. ನಿಧಿಯ ಬಗ್ಗೆ ಉದಯನಿಧಿ ಆಸಕ್ತಿಕರವಾದ ಹೇಳಿಕೆಗಳನ್ನು ನೀಡಿದ್ದು, ಇದರಿಂದ ಮದುವೆ ರೂಮರ್‍ ಹಬ್ಬಲು ಕಾರಣವಾಗಿದೆ. ಉದಯನಿಧಿ ಮಾತನಾಡುತ್ತಾ ಈ ಸಿನೆಮಾದಲ್ಲಿ ನಿಧಿ ಅಗರ್ವಾಲ್ ನನಗಿಂತ ಹೆಚ್ಚು ಕಷ್ಟಪಟ್ಟಿದ್ದಾರೆ. ಆಕ್ಷನ್ ದೃಶ್ಯಗಳಲ್ಲೂ ಸಹ ನಟಿಸಿದ್ದಾರೆ. ಆಕೆಗೆ ಗಾಯಗಳು ಸಹ ಆಗಿದೆ. ಪಾಪ ನಿಧಿ ಇನ್ನೂ ತಮಿಳು ಸಿನೆಮಾಗಳಲ್ಲಿ ನಟಿಸುತ್ತಾರೋ ಇಲ್ಲೋವೆ ಎಂದು ತಮಾಷೆಯಾಗಿ ಮಾತನಾಡಿದ್ದಾರೆ.

ಇದೀಗ ಉದಯನಿಧಿಯವರ ಈ ಕಾಮೆಂಟ್ ಗಳ ಕಾರಣದಿಂದ ನಿಧಿ ಅರ್ಗಾವಾಲ್ ಮದುವೆ ರೂಮರ್‍ ಮತ್ತೊಮ್ಮೆ ಹರಿದಾಡಿದೆ. ಈ ಹಿಂದೆ ನಿಧಿ ಹಾಗೂ ತಮಿಳಿನ ಸ್ಟಾರ್‍ ನಟ ಶಿಂಬು ಜೊತೆಗೆ ಪ್ರೇಮ ಪಯಣ ಸಾಗಿಸಿದ್ದರು. ಶೀಘ್ರದಲ್ಲೇ ಈ ಜೋಡಿ ಮದುವೆಯಾಗಲಿದೆ ಎಂದೂ ಸಹ ಹೇಳಲಾಗಿತ್ತು. ಇದೀಗ ಉದಯನಿಧಿ ಮಾಡಿದ ಕಾಮೆಂಟ್ ಗಳ ಕಾರಣದಿಂದ ಮತ್ತೊಮ್ಮೆ ನಿಧಿ ಹಾಗೂ ಶಿಂಬು ಮದುವೆ ರೂಮರ್‍ ಹರಿದಾಡುತ್ತಿದೆ. ಜೊತೆಗೆ ಮದುವೆಯಾದ ಬಳಿಕ ನಿಧಿ ಸಿನೆಮಾಗಳಿಂದಲೂ ದೂರವಾಗಲಿದ್ದಾರೆ ಎಂಬ ಸುದ್ದಿ ಸಹ ಹರಿದಾಡಿತ್ತು. ಆದರೆ ಈ ಸುದ್ದಿಯಲ್ಲಿ ಯಾವುದೇ ಸತ್ಯಾಶಂ ಇಲ್ಲ. ಉದಯನಿಧಿ ರವರು ನಿಧಿ ಅಗರ್ವಾಲ್ ಸಿನೆಮಾದಲ್ಲಿ ತುಂಬಾ ಕಷ್ಟಪಟ್ಟಿದ್ದಾರೆ. ಈ ಕಾರಣದಿಂದ ಆಕೆ ಮುಂದೆ ತಮಿಳು ಸಿನೆಮಾಗಳಲ್ಲಿ ನಟಿಸುತ್ತಾರೋ ಇಲ್ಲವೋ ಎಂದು ತಮಾಷೆಯಿಂದ ಹೇಳಿದ್ದಾರೆ ಅಷ್ಟೆ ಎಂಬ ಮಾತುಗಳೂ ಸಹ ಕೇಳಿಬರುತ್ತಿವೆ.

Previous articleಹೋಮ್ಲಿ ಬ್ಯೂಟಿ ಸ್ನೇಹಾ ಪತಿಯೊಂದಿಗೆ ವಿಚ್ಚೇಧನ ಎಂಬ ರೂಮರ್ ಗೆ ಸ್ಟ್ರಾಂಗ್ ಕೌಂಟರ್ ಕೊಟ್ಟ ಸೀನಿಯರ್ ಬ್ಯೂಟಿ…!
Next article80ರ ದಶಕದ ಸ್ಟಾರ್ ಗಳು ಒಂದೇ ಫ್ರೇಂ ನಲ್ಲಿ, ವೈರಲ್ ಆದ ಗ್ರೂಪ್ ಪೊಟೋ….!