ಮತ್ತೆ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಪೊಟೋಸ್ ಶೇರ್ ಮಾಡಿದ ಬ್ಯೂಟಿ ಮೀರಾ ಜಾಸ್ಮೀನ್…..

ಸುಮಾರು ವರ್ಷಗಳ ಹಿಂದೆ ದಕ್ಷಿಣ ಭಾರತದ ಸಿನಿರಂಗದಲ್ಲಿ ಬಹುಬೇಡಿಕೆಯಿದ್ದ ನಟಿಯರಲ್ಲಿ ಮೀರಾ ಜಾಸ್ಮಿನ್ ಸಹ ಒಬ್ಬರಾಗಿದ್ದರು. ದೊಡ್ಡ ದೊಡ್ಡ ಸ್ಟಾರ್‍ ನಟರೊಂದಿಗೆ ತೆರೆ ಹಂಚಿಕೊಂಡು ಬ್ಲಾಕ್ ಬಸ್ಟರ್‍ ಹಿಟ್ಸ್ ನೀಡಿದ್ದರು.  ತೆಲಗು ಸೇರಿದಂತೆ ಕನ್ನಡ, ತಮಿಳು, ಮಲಯಾಳಂ ಸಿನೆಮಾಗಳಲ್ಲಿ ಅವಕಾಶಗಳಿದ್ದರೂ ಸಹ ಮದುವೆಯಾಗಿ ದೇಶವನ್ನು ತೊರೆದಿದ್ದರು. ಸದ್ಯ ಸಿನಿರಂಗಕ್ಕೆ ಮೀರಾ ಜಾಸ್ಮೀನ್ ಕಮ್ ಬ್ಯಾಕ್ ಆಗುವ ಸೂಚನೆ ಯಿದ್ದು, ಇದರಿಂದಲೇ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಹಾಟ್ ಪೊಟೋಗಳನ್ನು ಶೇರ್‍ ಮಾಡುತ್ತಿದ್ದಾರೆ.

ನಟಿ ಮೀರಾ ಜಾಸ್ಮೀನ್ ಪುನಃ ಸಿನಿರಂಗದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ಈಕೆ ಇತ್ತೀಚಿಗೆ ಕೆಲವೊಂದು ಹಾಟ್ ಹಾಟ್ ಪೊಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಈಕೆ ಪೊಟೋಗಳನ್ನು ಹಾಕಿದ್ದೆ ತಡ ವೈರಲ್ ಮಾಡಿಬಿಡುತ್ತಿದ್ದಾರೆ. ಮದುವೆ ಬಳಿಕ ಮತ್ತೇ ಮೀರಾ ಜಾಸ್ಮೀನ್ ಸಿನೆಮಾಗಳ ಮೇಲೆ ಆಸಕ್ತಿ ತೋರಿದ್ದಾರೆ. ಈ ಹಿನ್ನೆಲೆಯಲ್ಲಿ ಆಕೆ ಸಿನೆಮಾಗಳಲ್ಲಿ ನಟಿಸಲು ತಯಾರಾಗಿದ್ದೇನೆ ಎಂದು ತೋರಿಸುವ ನಿಟ್ಟಿನಲ್ಲಿ ಸೋಷಿಯಲ್ ಮಿಡಿಯಾ ಮೂಲಕ ಪೊಟೋಗಳನ್ನು ಶೇರ್‍ ಮಾಡುತ್ತಿದ್ದಾರೆ. ಮೀರಾ ಗೆ ವಯಸ್ಸು ಮೂವತ್ತೈದಾದರೂ ಸಹ ತಮ್ಮ ಗ್ಲಾಮರಸ್ ಲುಕ್ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಮುಖ್ಯವಾಗಿ ಈ ಹಿಂದೆ ಫ್ಯಾಮಿಲಿ ಪ್ರೇಕ್ಷಕರನ್ನು ಸೆಳೆದ ಈ ನಟಿ ಕೋಂಚ ಹಾಟ್ ಲುಕ್ ನಲ್ಲಿ ಕಾಣಿಸಿಕೊಳ್ಳಲು ಹಿಂದೆಟು ಹಾಕುತ್ತಿಲ್ಲ. ಸದ್ಯ ಮೀರಾ ಹಂಚಿಕೊಂಡ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ. ಜೊತೆಗೆ ಅಭಿಮಾನಿಗಳಿಂದ ಕಾಮೆಂಟ್ಸ್ ಸಹ ಹರಿದು ಬರುತ್ತಿವೆ.

ನಟಿ ಮೀರಾ ಜಾಸ್ಮೀನ್ ಮದುವೆಯಾದ ಬಳಿಕ ಸಿನೆಮಾಗಳಲ್ಲಿ ಕಾಣಿಸಿಕೊಂಡಿದ್ದು ತುಂಭಾ ಕಡಿಮೆ, ಕೋವಿಡ್ ಲಾಕ್ ಡೌನ್ ಗೂ ಮುಂಚೆ ಪೂಮರಮ್ ಎಂಬ ಮಲಯಾಳಂ ಸಿನೆಮಾದಲ್ಲಿ ಕಾಣಿಸಿಕೊಂಡಿದ್ದರು. ಕೇರಳದಲ್ಲಿ ಹುಟ್ಟಿದ ಈಕೆ ತಮ್ಮ ಹದಿನಾರನೇ ವಯಸ್ಸಿನಲ್ಲಿಯೇ ಸಿನೆಮಾದಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದರು. ಸೂತ್ರಧಾರಣ್ ಎಂಬ ಸಿನೆಮಾ ಮೂಲಕ ಸಿನಿರಂಗಕ್ಕೆ ಪರಿಚಯವಾದರು. ಆ ಸಿನೆಮಾ ಬಳಿಕ ದಕ್ಷಿಣ ಸ್ಟಾರ್‍ ನಟರ ಜೊತೆ ನಟಿಸುವ ಅವಕಾಶವನ್ನು ದಕ್ಕಿಸಿಕೊಂಡ ಈಕೆ ಅನೇಕ ಹಿಟ್ ಸಿನೆಮಾಗಳನ್ನು ನೀಡಿದ್ದರು. ಸ್ಟಾರ್‍ ನಟರಾದ ಪವನ್ ಕಲ್ಯಾಣ್ ರೊಂದಿಗೆ ಗುಡುಂಬಾ ಶಂಕರ್‍, ನಂದಮೂರಿ ಬಾಲಕೃಷ್ಣರೊಂದಿಗೆ ಮಹಾರಥಿ ಸಿನೆಮಾಗಳಲ್ಲಿ ನಟಿಸಿದ್ದರು. ಜೊತೆಗೆ ಭದ್ರ, ರಾರಾಜು, ಗೊರಿಂಟಾಕು ಸೇರಿದಂತೆ ಅನೇಕ ಹಿಟ್ ಸಿನೆಮಾಗಳಲ್ಲಿ ನಟಿಸಿದ್ದರು.

ಇನ್ನೂ ನಟಿ ಮೀರಾ ಕಳೆದ 2014 ರಲ್ಲಿ ದುಬೈನಲ್ಲಿ ಕೆಲಸ ಮಾಡುತ್ತಿದ್ದ ಅನಿಲ್ ಜಾನ್ ಎಂಬಾತನೊಂದಿಗೆ ವಿವಾಹವಾದರು. ಮದುವೆಯಾದ ಬಳಿಕ ದುಬೈನಲ್ಲಿ ಸೆಟಲ್ ಆದರೂ ಸಹ ವರ್ಷಕ್ಕೆ ಒಂದು ಸಿನೆಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಸದ್ಯ ಮೀರಾ ಮಕಾಲ್ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಮೀರಾ ತಮ್ಮ ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಗ್ಲಾಮರಸ್ ಲುಕ್ ಕಾಣಿಸಿಕೊಳ್ಳಲು ಸಿದ್ದವಾಗುತ್ತಿದ್ದಾರೆ. ಈ ಹಾದಿಯಲ್ಲೇ ಹಾಟ್ ಪೊಟೋಗಳನ್ನು ಶೇರ್‍ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

Previous articleಹಾಟ್ ಪೋಸ್ ನಲ್ಲಿ ದರ್ಶನ ಕೊಟ್ಟ ಮಲ್ಲಿಕಾ ಶೆರಾವತ್.. ವಯಸ್ಸಾದರೂ ಮಲ್ಲಿಕಾರ ಹಾಟ್ ಲುಕ್ ಗೆ ಫಿದಾ…
Next articleಸೋಷಿಯಲ್ ಮಿಡಿಯಾದಲ್ಲಿ ಹಾಟ್ ರೀಲ್ಸ್ ಹಂಚಿಕೊಂಡ ಮಿಲ್ಕೀ ಬ್ಯೂಟಿ ತಮನ್ನಾ…..