ಚೆನೈ: ದಕ್ಷಿಣ ಭಾರತದ ಬಹುಬೇಡಿಕೆಯ ನಟಿ ಕಾಜಲ್ ಅಗರ್ ವಾಲ್ ತಮ್ಮ ಮದುವೆಯ ನಂತರ ಹಾರರ್ ಚಿತ್ರವೊಂದಕ್ಕೆ ಸಹಿ ಹಾಕುವ ಮೂಲಕ ತಮ್ಮ ಅಭಿಮಾನಿಗಳಲ್ಲಿ ಹಾರರ್ ಥ್ರಿಲ್ ಹುಟ್ಟಿಸಿದ್ದಾರೆ.
ಇತ್ತಿಚಿಗಷ್ಟೆ ಮುಂಬೈ ಮೂಲದ ಉದ್ಯಮಿ ಗೌತಮ್‌ರನ್ನು ಮದುವೆಯಾಗಿ ಮದುವೆ ಮೂಡ್ ನಿಂದ ಹೊರಬಂದ ಕಾಜಲ್ ಪ್ರಸ್ತುತ ತಮಿಳು ಭಾಷೆಯಲ್ಲಿ ತೆರೆಗೆ ಬರಲಿರುವ ಹಾರರ್ ಚಿತ್ರವೊಂದರಲ್ಲಿ ನಟಿಸಲಿದ್ದಾರೆ. ತಮ್ಮ ಮದುವೆ ಬಳಿಕ ಸಹಿ ಮಾಡಿದ ಮೊದಲ ಚಿತ್ರವಿದಾಗಿದ್ದು, ಮಹಿಳಾ ಪ್ರಧಾನ ಕಥೆಯಾಗಿದೆ. ಇನ್ನೂ ಈ ಚಿತ್ರಕ್ಕೆ ಕಲ್ಯಾಣ್ ನಿರ್ದೇಶನ ಮಾಡಲಿದ್ದು, ಚಿತ್ರಕ್ಕೆ ಗೋಸ್ಟಿ ಎಂಬ ಹೆಸರನ್ನಿಡಲಾಗಿದೆ ಎನ್ನಲಾಗಿದೆ. ಕೆಲವೊಂದು ಮೂಲಗಳಿಂದ ಈ ವಿಷಯ ತಿಳಿದಿದ್ದು, ಅಧಿಕೃತ ಘೋಷಣೆಯಾಗಿಲ್ಲ. ಇನ್ನೂ ಈ ಚಿತ್ರದಲ್ಲಿ ೨೩ಕ್ಕೂ ಅಧಿಕ ಕಲಾವಿಧರು ನಟಿಸಲಿದ್ದಾರೆ.
ಇನ್ನೂ ಕಾಜಲ್ ಅಗರ್ ವಾಲ್ ಚಿರಂಜೀವಿ ನಟನೆಯ ಆಚಾರ್ಯ, ಕಮಲ್ ಹಾಸನ್ ನಟನೆಯ ಇಂಡಿಯನ್-೨, ಹೇ ಸಿನಾಮಿಕಾ, ಮೋಸಗಾಳ್ಳು ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಲಿದ್ದಾರೆ.
