ಅಡಿವಿ ಶೇಷ್ ಅಕ್ಕಿನೇನಿ ಫ್ಯಾಮಿಲಿಯೊಂದಿಗೆ ಕ್ರಿಸ್ ಮಸ್ ಸೆಲಬ್ರೇಷನ್ಸ್, ಆಕೆಯೊಂದಿಗೆ ರಿಲೇಷನ್ ಶಿಪ್ ಎಂಬ ರೂಮರ್ ಶುರು…!

ತೆಲುಗು ಸಿನಿರಂಗದಲ್ಲಿ ವಿಭಿನ್ನ ಸಿನೆಮಾಗಳು, ವಿಭಿನ್ನ ಪಾತ್ರಗಳ ಮೂಲಕ ಕ್ರೇಜ್ ಪಡೆದುಕೊಂಡ ಅಡಿವಿಶೇಷ್ ಇತ್ತಿಚಿಗಷ್ಟೆ ಹಿಟ್-2 ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಅಡಿವಿಶೇಷ್ ಇತ್ತಿಚಿಗೆ ಅನೇಕ ಹಿಟ್ ಸಿನೆಮಾಗಳ ಮೂಲಕ ಸಕ್ಸಸ್ ಪುಲ್ ಕೆರಿಯರ್‍ ಸಾಗಿಸುತ್ತಿದ್ದಾರೆ. ಆತ ನಟಿಸಿದ ಬಹುತೇಕ ಎಲ್ಲಾ ಸಿನೆಮಾಗಳೂ ಸಹ ಒಳ್ಳೆಯ ಸಕ್ಸಸ್ ಕಂಡುಕೊಳ್ಳುತ್ತಾ, ಬಾಕ್ಸ್ ಆಫೀಸ್ ನಲ್ಲೂ ಸಹ ಒಳ್ಳೆಯ ಕಲೆಕ್ಷನ್ ಮಾಡುತ್ತಿವೆ. ಇದೀಗ ಅಡಿವಿ ಶೇಷ್ ಅಕ್ಕಿನೇನಿ ಕುಟುಂಬದೊಂದಿಗೆ ಕ್ರಿಸ್ ಮಸ್ ಸೆಲಬ್ರೇಷನ್ ನಲ್ಲಿ ಭಾಗಿಯಾಗಿದ್ದು, ಹೊಸ ರೂಮರ್‍ ಒಂದು ಹರಿದಾಡುತ್ತಿದೆ.

ಸಾಮಾನ್ಯವಾಗಿ ಸಿನೆಮಾ ಸೆಲೆಬ್ರೆಟಿಗಳಿಗೆ ಎದುರಾಗುವಂತಹ ಸಾಮಾನ್ಯ ಪ್ರಶ್ನೆ ಮದುವೆ ಯಾವಾಗ ಎಂದು. ಇದೀಗ ಅಡಿವಿಶೇಷ್ ಗೂ ಸಹ ಇದೇ ರೀತಿಯ ಪ್ರಶ್ನೆಗಳು ಎದುರಾಗಿದೆ. ಆದರೆ ಎಂದೂ ಸಹ ಆತ ಮದುವೆಯ ಬಗ್ಗೆ ಓಪನ್ ಆಗಿಲ್ಲ. ಇದೀಗ ಆತನ ಕುರಿತಂತೆ ಹೊಸ ರೂಮರ್‍ ಒಂದು ಹರಿದಾಡುತ್ತಿದೆ. ಅದಕ್ಕೆ ಸಾಕ್ಷಿ ಅಕ್ಕಿನೇನಿ ಫ್ಯಾಮಿಲಿಯೊಂದಿಗೆ ಕ್ರಿಸ್ ಮಸ್ ಹಬ್ಬದಲ್ಲಿ ಅಡಿವಿ ಶೇಷ್ ಭಾಗಿಯಾಗಿರುವುದು. ಅಕ್ಕಿನೇನಿ ಕುಟುಂಬದ ಅಖಿಲ್, ಸುಶಾಂತ್, ಸುಮಂತ್ ಹಾಗೂ ಸುಪ್ರಿಯಾ ಸೇರಿದಂತೆ ಅಕ್ಕಿನೇನಿ ಕುಟುಂಬದ ಮತಷ್ಟು ಸದಸ್ಯರು ಸಂಭ್ರಮದಿಂದ ಕ್ರಿಸ್ ಮಸ್ ಹಬ್ಬವನ್ನು ಆಚರಿಸಿಕೊಂಡರು. ಆದರೆ ಅಕ್ಕಿನೇನಿ ಕುಟುಂಬಕ್ಕೆ ಸಂಬಂಧವಿಲ್ಲದ ಅಡಿವಿಶೇಷ್ ಈ ಸಂಭ್ರಮದಲ್ಲಿ ಭಾಗಿಯಾಗಿದ್ದು ಅನೇಕ ರೂಮರ್‍ ಗಳು ಹುಟ್ಟಿಕೊಳ್ಳಲು ಕಾರಣವಾಗಿದೆ. ಅದರಲ್ಲೂ ಅಡಿವಿ ಶೇಷ್ ಅಕ್ಕಿನೇನಿ ಕುಟುಂಬದ ಸುಪ್ರಿಯಾ ಪಕ್ಕದಲ್ಲಿ ಕುಳಿತಿರುವುದು ಹೊಸ ರೂಮರ್‍ ಹುಟ್ಟಲು ಕಾರಣವಾಗಿದೆ.

ನಟ ಅಡಿವಿ ಶೇಷ್ ಲೇಡಿ ಪ್ರೊಡ್ಯೂಸರ್‍ ಒಬ್ಬರ ಜೊತೆಗೆ ಪ್ರೇಮ ಪಯಣ ಸಾಗಿಸುತ್ತಿದ್ದಾರೆ ಎಂಬ ಸುದ್ದಿ ಕೇಳಿಬಂದಿತ್ತು. ಅಖಿಲ್ ಈ ಪೊಟೊಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಶೇರ್‍ ಮಾಡಿದ್ದರು. ಅಕ್ಕಿನೇನಿ ಕಜಿನ್ಸ್ ಎಂಬ ಕ್ಯಾಪ್ಷನ್ ಕೊಟ್ಟು ಪೊಟೋಗಳನ್ನು ಶೇರ್‍ ಮಾಡಿದ್ದರು. ಈ ಪೊಟೋಗಳಲ್ಲಿ ಅಡಿವಿ ಶೇಷ್ ಇರುವುದು ಎಲ್ಲರ ಗಮನ ಸೆಳೆದಿದೆ. ಅಡಿವಿ ಶೇಷ್ ಅಕ್ಕಿನೇನಿ ಕಜಿನ್ ಹೇಗೆ ಆಗುತ್ತಾರೆ ಎಂದು ಅನುಮಾನಗಳು ವ್ಯಕ್ತವಾಗುತ್ತಿವೆ. ಆ ಕುಟುಂಬದೊಂದಿಗೆ ಏನಾದರೂ ಒಂದು ಸಂಬಂಧ ವಿದ್ದರೇ ಕಜಿನ್ ಎಂದು ಹೇಳಬಹುದು. ಈ ಪೊಟೋಗಳಲ್ಲಿ ಅಡಿವಿಶೇಷ್ ಸುಪ್ರಿಯಾ ಪಕ್ಕದಲ್ಲಿ ಕುಳಿತುಕೊಂಡಿದ್ದಾರೆ. ಇದೀಗ ಸುಪ್ರಿಯಾ ಹಾಗೂ ಅಡಿವಿಶೇಷ್ ನಡುವೆ ರಿಲೇಷನ್ ಶಿಪ್ ಶುರುವಾಗಿದೆ ಎಂಬ ರೂಮರ್‍ ಗಳೂ ಸಹ ಹರಿದಾಡಲು ಶುರುವಾಗಿದೆ.

ಇನ್ನೂ ಸುಪ್ರಿಯಾ ಈ ಹಿಂದೆ ಅಕ್ಕಡಮ್ಮಾಯಿ ಅಕ್ಕಡ ಅಬ್ಬಾಯಿ ಎಂಬ ಸಿನೆಮಾದಲ್ಲಿ ಪವನ್ ಕಲ್ಯಾಣ್ ಜೊತೆಗೆ ನಟಿಸಿದ್ದರು. ಬಳಿಕ ಅಡಿವಿ ಶೇಷ್ ಅಭಿನಯದ ಗೂಡಾಚಾರಿ ಸಿನೆಮಾಗೆ ಸುಪ್ರಿಯಾ ನಿರ್ಮಾಪಕಿಯಾಗಿದ್ದರು. ಇದೀಗ ಅಖಿಲ್ ಹಂಚಿಕೊಂಡ ಪೊಟೋ ಮೂಲಕ ಅಡಿವಿಶೇಷ್ ಹಾಗೂ ಸುಪ್ರಿಯಾ ನಡುವೆ ಪ್ರೇಮಪಯಣ ಸಾಗಿಸುತ್ತಿದ್ದಾರೆ ಎಂಬ ಹಿಂಟ್ ಕೊಟ್ಟಿದ್ದಾರಯೇ ಎಂಬ ಚರ್ಚೆಗಳು ಅನುಮಾನಗಳೂ ಸಹ ಮೂಡಿದೆ.

Previous articleಮತ್ತೇರಿಸುವಂತಹ ಪೋಸ್ ಗಳ ಮೂಲಕ ಪಡ್ಡೆಹುಡುಗರ ಮೈಂಡ್ ಬ್ಲಾಕ್ ಮಾಡಿದ ರಶ್ಮಿಕಾ….!
Next articleಆಂಕರ್ ಆಗಿ, ನಟಿಯಾಗಿ ಕ್ರೇಜ್ ಪಡೆದುಕೊಂಡ ಅನಸೂಯ ಆ ಸಿನೆಮಾದಲ್ಲಿ ಐಟಂ ಸಾಂಗ್ ನಲ್ಲಿ ಕುಣಿಯಲಿದ್ದಾರಂತೆ…!