Film News

ಅಚ್ಚರಿಯ ರೂಪದಲ್ಲಿ ಆದಿತ್ಯ ರಾಯ್ ಕಪೂರ್!

ಮುಂಬೈ: ಆಶಿಕಿ-2 ಖ್ಯಾತಿಯ ನಟ ಆದಿತ್ಯರಾಯ್ ಕಪೂರ್ ರವರ ಓಂ ಚಿತ್ರದ ಪೋಸ್ಟರ್ ಈಗಾಗಲೇ ಸಕತ್ ವೈರಲ್ ಆಗಿದ್ದು, ಅಚ್ಚರಿ ಮೂಡಿಸುವ ರೂಪದಲ್ಲಿ ಆದಿತ್ಯ ಕಾಣಿಸಿಕೊಂಡಿದ್ದಾರೆ.

ಈಗಾಗಲೇ ಬಾಲಿವುಡ್ ಸೇರಿದಂತೆ ಅನೇಕ ಸಿನಿಪ್ರಿಯರಿಗೆ ಅಚ್ಚರಿ ಮೂಡಿಸಿರುವ ಓಂ ಚಿತ್ರದ ಪೂರ್ಣ ಹೆಸರು ಓಂ ದಿ ಬ್ಯಾಟಲ್ ವಿಥಿನ್ ಎಂಬುದು. ನಟ ಆದಿತ್ಯ ಮೊದಲ ಬಾರಿಗೆ ಆಕ್ಷನ್ ಸಿನೆಮಾದಲ್ಲಿ ನಟಿಸುತ್ತಿರುವುದು ವಿಶೇಷವಾಗಿದೆ. ಲುಡೋ ಹಾಗೂ ಆಶಿಕಿ-2 ನಂತರ ಈ ಹೊಸ ಪ್ರಯತ್ನಕ್ಕೆ ಧುಮುಕಿದ್ದಾರೆ.

ಇನ್ನೂ ಈ ಚಿತ್ರದಲ್ಲಿ ದಿಲ್ ಬೇಚಾರಾ ಖ್ಯಾತಿಯ ನಟಿ ಸಂಜನಾ ಸಂಘಿ ಆದಿತ್ಯ ರಾಯ್ ರವರ ಜೊತೆ ಜೋಡಿಯಾಗಲಿದ್ದಾರೆ. ಡಿ.3 ರಂದು ಈ ಚಿತ್ರದ ಚಿತ್ರೀಕರಣ ಆರಂಭವಾಗಿದೆ. ಪ್ರಸ್ತುತ ಈ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದ್ದು, ನೂತನ ಗೆಟಪ್‌ನಲ್ಲಿ ಆದಿತ್ಯ ಹವಾ ಎಬ್ಬಿಸಿದ್ದಾರೆ.

ಇನ್ನೂ ಇಲ್ಲಿಯವರೆಗೂ ಲವರ್ ಬಾಯ್ ರೀತಿಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಆದಿತ್ಯ ರಾಯ್ ಓಂ ಚಿತ್ರದಲ್ಲಿ ಸಕತ್ ವೈಲಂಟ್ ಹಿರೋ ಅವತಾರವೆತ್ತಿದ್ದಾರೆ. ಪಾತ್ರಕ್ಕೆ ತಕ್ಕಂತೆ ತನ್ನ ದೇಹವನ್ನು ಸಿದ್ದಪಡಿಸಿಕೊಂಡಿದ್ದು, ಗನ್ ಹಿಡಿದು ಪವರ್‌ಪುಲ್ ಪೋಸ್ ನೀಡಿದ್ದಾರೆ. ಇನ್ನೂ ಈ ಚಿತ್ರ ೨೦೨೧ ರ ಮದ್ಯದಲ್ಲಿಯೇ ರಿಲೀಸ್ ಆಗಲಿದ್ದು, ಖ್ಯಾತ ನಿರ್ದೇಶಕ ಅಹ್ಮದ್ ಖಾನ್ ಚಿತ್ರವನ್ನು ನಿರ್ದೇಶಿಸಲಿದ್ದಾರೆ.

Trending

To Top